• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Kodagu: ಸಿದ್ದರಾಮಯ್ಯಗೆ ಬಿಜೆಪಿ ಯುವ ಮೋರ್ಚಾದಿಂದ ಘೇರಾವ್; ಭದ್ರತಾ ವೈಫಲ್ಯಕ್ಕೆ ಕಾರಣರಾದ್ರಾ ಪೊಲೀಸರು?

Kodagu: ಸಿದ್ದರಾಮಯ್ಯಗೆ ಬಿಜೆಪಿ ಯುವ ಮೋರ್ಚಾದಿಂದ ಘೇರಾವ್; ಭದ್ರತಾ ವೈಫಲ್ಯಕ್ಕೆ ಕಾರಣರಾದ್ರಾ ಪೊಲೀಸರು?

ಸಿದ್ದರಾಮಯ್ಯ

ಸಿದ್ದರಾಮಯ್ಯ

ಕೊಡಗಿನ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯರು (BJP Yuva Morcha Members) ಸಿದ್ದರಾಮಯ್ಯನವರಿಗೆ ಘೇರಾವ್ ಹಾಕಿ ದಿಕ್ಕಾರ ಕೂಗಿದರು. ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ ಹೊರ ಹಾಕಿದರು.

 • Share this:

  ಇಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ಅವರು ಕೊಡಗು (Kodagu) ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಕೊಡಗಿನ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯರು (BJP Yuva Morcha Members) ಸಿದ್ದರಾಮಯ್ಯನವರಿಗೆ ಘೇರಾವ್ ಹಾಕಿ ದಿಕ್ಕಾರ ಕೂಗಿದರು. ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ ಹೊರ ಹಾಕಿದರು. ಪೊಲೀಸರಿದ್ದರೂ  ಸಿದ್ದರಾಮಯ್ಯ ಅವರ ಕಾರ್ (Car) ಬಳಿ ಬಂದ ಓರ್ವ ಪೇಪರ್ ಎಸೆದ. ಮತ್ತೋರ್ವ ವೀರ್ ಸಾವರ್ಕರ್ ಫೋಟೋ (Veer Savarkar Photo) ಹಿಡಿದು ಆಕ್ರೋಶ ಹೊರ ಹಾಕಿದರು.  


  ಕರ್ತವ್ಯ ಮರೆತು ಭದ್ರತಾ ವೈಫಲ್ಯಕ್ಕೆ ಕಾರಣರಾದ್ರಾ ಪೊಲೀಸರು?


  ವಿರೋಧ ಪಕ್ಷದ ನಾಯಕರಿಗೆ ಪೊಲೀಸರು ಸೂಕ್ತ ಭದ್ರತೆಯನ್ನು ನೀಡಬೇಕು. ಆದ್ರೆ ಪೊಲೀಸರಿಗೆ ಬಿಜೆಪಿ ಪ್ರತಿಭಟನೆ ನಡೆಸುವ ಬಗ್ಗೆ ಮಾಹಿತಿ ಇರಲಿಲ್ಲವಾ? ಪ್ರತಿಭಟನಾಕಾರರನ್ನು ಕಾರ್ ಬಳಿ ಬಿಟ್ಟಿದ್ದು ಹೇಗೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಪ್ರತಿಭಟನಕಾರರ ಪಕ್ಕದಲ್ಲಿದ್ದ ಪೊಲೀಸರು ಭದ್ರತಾ ವೈಫಲ್ಯಕ್ಕೆ ಕಾರಣರಾದ್ರಾ ಎಂಬ ಅನುಮಾನಗಳು ಮೂಡಿವೆ.


  ಕೊಡಗಿಗೆ ಆಗಮಿಸಿದ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಕಾರ್ಯಕರ್ತರು ಮೈಸೂರು ಪೇಟ ತೊಡಿಸಿ, ಹೂವಿನ ಹಾರ ಹಾಕಿ ಸ್ವಾಗತಿಸಿದರು. ಮಳೆ ಹಾನಿ ಪ್ರದೇಶ ಮಡಿಕೇರಿ ತಾಲ್ಲೂಕಿನ ಕರ್ತೋಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


  ಇದನ್ನೂ ಓದಿ:  Raichur: ರಾಯಚೂರು ತೆಲಂಗಾಣಕ್ಕೆ ಸೇರ್ಬೇಕು; ಕಿಡಿ ಹೊತ್ತಿಸಿದ ಕೆ ಚಂದ್ರಶೇಖರ್ ರಾವ್


  ಪಟಾಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ


  ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹಚ್ಚಿ ಸಂಭ್ರಮಿಸಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಎಂಎಲ್​ಸಿ ವೀಣಾ ಅಚ್ಚಯ್ಯ, ಎಸ್ ಪೊನ್ನಣ್ಣ, ಮಂಥರ್ ಗೌಡ ಸೇರಿದಂತೆ ಹಲವರು ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು.


  ಸಿದ್ದರಾಮಯ್ಯ ಭೇಟಿಗೆ ಸೋಮಶೇಖರ್ ವ್ಯಂಗ್ಯ


  ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್,  ಸಿದ್ದರಾಮಯ್ಯ ಈಗ ಪುರುಸೊತ್ತಾಗಿರಬೇಕು. ಅದಕ್ಕಾಗಿ ಇಷ್ಟು ತಡವಾಗಿ ನೆರೆ ವೀಕ್ಷಣೆಗೆ ಹೋಗುತ್ತಿದ್ದಾರೆ. ಕಳೆದ 15 ದಿನಗಳಿಂದ ಅವರು ವೀಕ್ಷಣೆಗೆ ಹೋಗಿರಲಿಲ್ಲ. ಅವರಿಗೆ ಸರ್ಕಾರದ ಕಾರು ಸೇರಿದಂತೆ ಎಲ್ಲಾ ಸವಲತ್ತು ಇರುತ್ತದೆ. ಅವರೇ ಮೊದಲು ಹೋಗಿ ಸರ್ಕಾರದ ಗಮನ ಸೆಳೆಯಬೇಕಿತ್ತು. ಸರ್ಕಾರ ಎಲ್ಲಾ ಪರಿಹಾರ ಕೊಟ್ಟ ಮೇಲೆ ಈಗ ಏಕೆ ಹೋಗುತ್ತಿದ್ದಾರೆ ಗೊತ್ತಿಲ್ಲಾ ಎಂದು ವ್ಯಂಗ್ಯ ಮಾಡಿದರು.  ಸಾವರ್ಕರ್ ಫೋಟೋ ಯಾಕೆ? ಹೇಳಿಕೆಗೆ ತಿರುಗೇಟು


  ಸಿದ್ದರಾಮಯ್ಯ ಅವರು ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಿದ್ದಾರೆ.ಮುಂದೆ ಅವರು ಯಾವುದೇ ವಿವಾದಾತ್ಮಕ ಹೇಳಿಕೆಗಳನ್ನ ನೀಡದೆ ಇರಲಿ ಎಂದು ಚಾಮುಂಡಿಯಲ್ಲಿ ಪ್ರಾರ್ಥಿಸುತ್ತೇನೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಾತಿಗೆ ತೂಕ ಇತ್ತು. ಇತ್ತೀಚಿಗೆ ಅವರು ಏನು ಮಾತನಾಡುತ್ತಿದ್ದಾರೆಂದು ಅವರಿಗೆ ಅರ್ಥ ಆಗುತ್ತಿಲ್ಲಾ. ಅವರು ಕೇವಲ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಿದ್ದಾರೆ ಎಂದು ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.


  ಇದನ್ನೂ ಓದಿ:  Love Marriage: ಪ್ರೀತಿಸಿ ಮದ್ವೆಯಾದ ಜೋಡಿ, ಗ್ಯಾಂಗ್ ಕಟ್ಕೊಂಡು ಬಂದು ಹುಡುಗನ ಮನೆ ಮೇಲೆ ದಾಳಿ


  ಕಾಂಗ್ರೆಸ್ ಸೇರಲ್ಲ, ಬಿಜೆಪಿ ಬಿಡಲ್ಲ


  ಸಿದ್ದರಾಮಯ್ಯರನ್ನು ಹಾಡಿ ಹೊಗಳಿ, ಅವರು  ಮತ್ತೆ ಸಿಎಂ ಆಗೋ ಆಸೆ ಇದೆ ಎಂದು ಹೇಳಿದ್ದ ಸಾರಿಗೆ ಮಂತ್ರಿ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ. ಮೋದಿ ಬಂದಾಗ ವಿರೋಧಿಸಿದವರೂ ಬಿಜೆಪಿಗೆ ಬಂದಿದ್ದಾರೆ. ಮುಂದೆ ಸಿದ್ದರಾಮಯ್ಯ ಕೂಡಾ ಬಿಜೆಪಿಗೆ ಬರಬಹುದು ಅಂತ ಹಾಗೆ ಹೇಳಿದ್ದೆ ಎಂದರು. ಇನ್ನು ನಾನು ಕಾಂಗ್ರೆಸ್​ಗೆ ಹೋಗಲ್ಲ, ನಾನು ಬಿಜೆಪಿಯ ಶಿಸ್ತಿನ ಸಿಪಾಯಿ ಎಂದು ರಾಮುಲು ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಆಹ್ವಾನಿಸಿದರು.

  Published by:Mahmadrafik K
  First published: