ಬಿಜೆಪಿ ಕಾರ್ಯಕಾರಿಣಿ ಸಭೆ: ಲೋಕಸಭೆ ಚುನಾವಣೆಗೆ ರಣಕಹಳೆ


Updated:June 29, 2018, 10:47 PM IST
ಬಿಜೆಪಿ ಕಾರ್ಯಕಾರಿಣಿ ಸಭೆ: ಲೋಕಸಭೆ ಚುನಾವಣೆಗೆ ರಣಕಹಳೆ

Updated: June 29, 2018, 10:47 PM IST
- ರಮೇಶ್ ಹಿರೇಜಂಬೂರು, ನ್ಯೂಸ್18 ಕನ್ನಡ

ಬೆಂಗಳೂರು(ಜೂನ್ 29): ರಾಜ್ಯದಲ್ಲಿ ಬಹುಮತ ಪಡೆಯಲು ಮುಗ್ಗರಿಸಿ, ಅಧಿಕಾರ ವಂಚಿತವಾದ ಕೇಸರಿ ಪಡೆ ಇಂದು ಮಹತ್ವದ ಕಾರ್ಯಾಕಾರಿಣಿ ಸಭೆ ನಡೆಸಿತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಭೆಯಲ್ಲಿ 2 ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ದೊಂಬರಾಟ ಬಿಟ್ಟು ರಾಜ್ಯದ ಬಗ್ಗೆ ಕಾಳಜಿಗಾಗಿ ಆಡಳಿತ ಆರಂಭಿಸಿ ಎಂದು ದೋಸ್ತಿಗಳಿಗೆ ಎಚ್ಚರಿಕೆ ಸಂದೇಶ ನೀಡಿತು. ಎರಡನೆಯದಾಗಿ, ಕೇಂದ್ರ ಸರ್ಕಾರದ ಸಾಧನೆಯ ಸಾರ್ಥಕ 4 ವರ್ಷಗಳಿಗೆ ಅಭಿನಂದನೆ ಸಲ್ಲಿಸುವ ನಿರ್ಣಯ ಕೈಗೊಂಡಿತು. ಅದಾದ ನಂತರ, ದೋಸ್ತಿ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಸಾಲು ಸಾಲಾಗಿ ಸಿಟ್ಟು ಹೊರಹಾಕಿದ್ರು.

ಕುಮಾರಸ್ವಾಮಿ ಮಂಡಿಸಲು ಹೊರಟಿರುವ ಬಜೆಟ್ ಕೇವಲ ಜೆಡಿಎಸ್​ನ 37 ಶಾಸಕರ ಬಜೆಟ್. ಹೆಚ್​ಡಿಕೆ ಬಜೆಟ್​ಗೆ ಕಾಂಗ್ರೆಸ್ ಬೆಂಬಲ ಇಲ್ಲ. ಸ್ವಾತಂತ್ರ ನಂತರ 37 ಸ್ಥಾನ ಪಡೆದು ದಯನೀಯವಾಗಿ ಸೋತ ಪಕ್ಷ ಮಂಡಿಸುತ್ತಿರುವ ಮೊದಲ ಬಜೆಟ್ ಇದು. ಬಜೆಟ್ ಮಂಡನೆಯಾಗಲಿ, ನಂತರ ಮುಂದೇನಾಗಲಿದೆ ಕಾದು ನೋಡೋಣ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಸರ್ಕಾರದ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಕ್ರಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಟಿಪ್ಪು ಹೆಸರಿಟ್ರೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲು ಬಿಜೆಪಿ ನಿರ್ಧರಿಸಿದೆ.

ಕೋಟಾ ಶ್ರೀನಿವಾಸ ಪೂಜಾರಿ ಮೇಲ್ಮನೆ ವಿಪಕ್ಷ ನಾಯ

ಮಹಾಂತೇಶ್ ಕವಟಗಿಮಠ ಪರಿಷತ್ ಮುಖ್ಯ ಸಚೇತಕ

ಇದೇ ಕಾರ್ಯಕಾರಿಣಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನ ಪರಿಷತ್ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿದ್ರು. ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಬಿಜೆಪಿ ಮುಖ್ಯ ಸಚೇತಕರನ್ನಾಗಿ ನೇಮಿಸಿದ್ರು. ಇನ್ನು, ಅನಾರೋಗ್ಯದ ಕಾರಣದಿಂದ ಈಶ್ವರಪ್ಪ ಈ ಸಭೆಗೆ ಗೈರಾಗಿದ್ರೆ, ಕೇಂದ್ರ ಸಚಿವ ಸದಾನಂದಗೌಡ, ಅನಂತ್ ಕುಮಾರ್ ಹೆಗಡೆ ಕೂಡಾ ಸಭೆಗೆ ಬಂದಿರಲಿಲ್ಲ.
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...