Mysuru Mayor Election: ಮೈಸೂರು ಮೇಯರ್, ಉಪಮೇಯರ್ ಸ್ಥಾನ ಕಮಲದ ತೆಕ್ಕೆಗೆ; ಒಪ್ಪಂದ ಮಾಡಿಕೊಂಡ್ರೂ JDSಗೆ ಶಾಕ್

ಬಿಜೆಪಿ ಅಭ್ಯರ್ಥಿ ಶಿವಕುಮಾರ್ (Shivakumar) ಮೇಯರ್ ಆಗಿ ಆಯ್ಕೆಯಾದ್ರೆ, ಉಪ ಮೇಯರ್​ ಆಗಿ ರೂಪಾ (Roopa) ಆಯ್ಕೆಯಾಗಿದ್ದಾರೆ. ಮೇಯರ್ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್ ಒಳ ಮೈತ್ರಿ ಮಾಡಿಕೊಂಡಿತ್ತು

ಸಾಂದರ್ಬಿಕ ಚಿತ್ರ

ಸಾಂದರ್ಬಿಕ ಚಿತ್ರ

  • Share this:
ಮೈಸೂರು ಮೇಯರ್ ಪಾಲಿಕೆಯ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ (BJP) ಸಂಪೂರ್ಣ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮೇಯರ್ ಉಪ ಮೇಯರ್ (Mayor And Deputy Mayor) ಎರಡೂ ಸ್ಥಾನಗಳು ಬಿಜೆಪಿ ಪಾಲಾಗಿವೆ. ಜೆಡಿಎಸ್ ಅಭ್ಯರ್ಥಿ ರೇಷ್ಮಾ ಬಾನು ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆ ಉಪ ಮೇಯರ್​ ಸ್ಥಾನ ಬಿಜೆಪಿ ತೆಕ್ಕೆಗೆ ಬಂದಿದೆ. ಬಿಜೆಪಿ ಅಭ್ಯರ್ಥಿ ಶಿವಕುಮಾರ್ (Shivakumar) ಮೇಯರ್ ಆಗಿ ಆಯ್ಕೆಯಾದ್ರೆ, ಉಪ ಮೇಯರ್​ ಆಗಿ ರೂಪಾ (Roopa) ಆಯ್ಕೆಯಾಗಿದ್ದಾರೆ. ಮೇಯರ್ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್ ಒಳ ಮೈತ್ರಿ ಮಾಡಿಕೊಂಡಿತ್ತು. ಜೆಡಿಎಸ್ ಉಪ ಮೇಯರ್​ ಸ್ಥಾನಕ್ಕೆ ಒಪ್ಪಿಕೊಂಡಿತ್ತು. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಿತ್ತು. ಎರಡನೇ ಬಾರಿಗೆ ಬಿಜೆಪಿಗೆ ಮೇಯರ್ ಸ್ಥಾನ ಒಲಿದಿದೆ.

ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಮತ ವಿಭಜನೆ ಮಾಡಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿತ್ತು. ಈ ಸುಳಿವು ಅರಿತ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈತ್ರಿ ಮಾಡಿಕೊಳ್ಳುವ ಮೂಲಕ ಮುಂದಾದರು. ಬಿಜೆಪಿಗೆ ಮೇಯರ್ ಸ್ಥಾನ ಬಿಟ್ಟುಕೊಡಲು ಜೆಡಿಎಸ್ ಒಪ್ಪಿಕೊಂಡಿತ್ತು. ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್​​ನಿಂದ ರೇಷ್ಮಾ ಬಾನು ನಾಮಪತ್ರ ಸಲ್ಲಿಕೆ ಮಾಡಿದ್ದರು.

ಎರಡನೇ ಬಾರಿಗೆ ಬಿಜೆಪಿ ಮೇಯರ್

ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಪರ ಜೆಡಿಎಸ್ ಪರ ಮತ ಚಲಾಯಿಸಿದ ಪರಿಣಾಮ  60ನೇ ಮೈಸೂರು ಮೇಯರ್ ಆಗಿ ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿಗೆ 28 ಮತಗಳು ಬಂದ್ರೆ, ಬಿಜೆಪಿ ಅಭ್ಯರ್ಥಿಗೆ 47 ಮತಗಳು ಬಂದಿವೆ. ಈ ಮೂಲಕಎರಡನೇ ಬಾರಿ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕೊನೆ ಹಂತದಲ್ಲಿ ಬಿಜೆಪಿಯ ಚುನಾವಣಾ ರಣತಂತ್ರ  ವರ್ಕೌಟ್ ಆಗಿದೆ.

ಸಿದ್ದರಾಮಯ್ಯಗೆ ಮುಖಭಂಗ

ಮಾಜಿ ಸಿಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತವರು ಕ್ಷೇತ್ರದಲ್ಲಿ ಎರಡನೇ ಬಾರಿ ಮುಖಭಂಗವಾಗಿದೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸುನಂದಾ ಪಾಲನೇತ್ರ  ಮೇಯರ್​ ಆಗಿ ಆಯ್ಕೆಯಾಗಿದ್ದರು. ವಿಧಾನಸಭಾ ಚುನಾವಣೆ ವೇಳೆಯಲ್ಲಿ ಮಾಜಿ ಸಿಎಂ ಅವರಿಗೆ ತವರು ಕ್ಷೇತ್ರದಲ್ಲಿ ಹಿನ್ನಡೆಯಾದಂತಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಸದಸ್ಯೆ ಅಶ್ವಿನಿ ಶರತ್ ಅವರು ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚುನಾವಣೆ ಹಿನ್ನೆಲೆ ಆಕ್ಸಿಜನ್ ಬೆಡ್ ಮೂಲಕವೇ ಬಂದು ಅಶ್ವಿನಿ ಶರತ್ ಬಂದು ಮತದಾನ ಮಾಡಿದರು. ಬಿಜೆಪಿ ತನ್ನ ಎಲ್ಲಾ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು.

bjp won mysore mayor election mrq
ಬಿಜೆಪಿ ಧ್ವಜ


ಇದನ್ನೂ ಓದಿ:  Bengaluru Rains: ಬೆಂಗಳೂರು ಮಳೆ ಅವಾಂತರಕ್ಕೆ ಯುವತಿ ಬಲಿ; ವಿದ್ಯುತ್ ಸ್ಪರ್ಶಿಸಿ ಸಾವು

ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

ಮುಳುಗುವುದರಲ್ಲಿ ಹಲವು ವಿಧಗಳಿವೆ. ರಾಜ್ಯದ ಜನ ಮಳೆಯಲ್ಲಿ (Rain) ಮುಳುಗಿದ್ದಾರೆ, ಸಚಿವರು (Minister) ನಿದ್ದೆಯಲ್ಲಿ ಮುಳುಗಿದ್ದಾರೆ. ಪ್ರವಾಹ (Flood) ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವ ಆರ್​ ಅಶೋಕ್ (Minister R Ashok) ಅವರ ಭರ್ಜರಿ ನಿದ್ದೆ. 'ಹಲಾಲ್ ಕಟ್' ಎಂದರೆ ಥಟ್‌ನೆ ಎಚ್ಚರಾಗುತ್ತಾರೆ! 'ಚಿಂತೆ ಇಲ್ಲದವಗೆ ಸಂತೆಲೂ ನಿದ್ದೆ' ಎಂಬ ಮಾತು ಸಚಿವರಿಗೇ ಹೇಳಿದ್ದೇನೋ ಎಂದು ಆರ್​. ಅಶೋಕ್ ಅವರ ಫೋಟೋ ಹಂಚಿಕೊಂಡು ಕಾಂಗ್ರೆಸ್ (Congress) ವಾಗ್ದಾಳಿ ನಡೆಸಿದೆ.

ಬಿಜೆಪಿ ಪ್ರಣಾಳಿಕೆಯ ಭರವಸೆಗಳು ಆಕರ್ಷಕ, ಮನಮೋಹಕ. ಆಡಳಿತ ಮಾತ್ರ ಜನತೆಗೆ ಯಾತನಾದಾಯಕ, ಭ್ರಷ್ಟಾಚಾರವೇ ಕಾಯಕ. ಬೆಂಗಳೂರನ್ನು ವಿಶ್ವದರ್ಜೆಯ ನಗರ ಮಾಡುವೆವು ಎಂದ ಬಿಜೆಪಿ ಈಗ ರಸ್ತೆಗುಂಡಿಗಳ ನಗರ, ಮುಳುಗುವ ನಗರವನ್ನಾಗಿ ಮಾಡಿದೆ. ಐಟಿ ಕಂಪೆನಿಗಳು ಗುಳೆ ಹೊರಟರೂ ಕೊಟ್ಟ ಭರವಸೆ ನೆನಪಾಗಲಿಲ್ಲವೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

bjp won mysore mayor election mrq
ಬಿಜೆಪಿ ಧ್ವಜ


ಇದನ್ನೂ ಓದಿ:  Bellary: ಮೃತ ಮಗನನ್ನು ಬದುಕಿಸಿಕೊಳ್ಳಲು ಶವವನ್ನ ಉಪ್ಪಿನ ರಾಶಿಯಲ್ಲಿಟ್ರು; ಬಳ್ಳಾರಿಯಲ್ಲೊಂದು ವಿಚಿತ್ರ ಘಟನೆ

ಸರ್ಕಾರವೇ ಹೊಣೆ: ಡಿಕೆಶಿ ವಾಗ್ದಾಳಿ

ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಬೆಲೆ ಗೊತ್ತಿಲ್ಲ. ಬಿಜೆಪಿಯವರು ಬ್ರ್ಯಾಂಡ್ ಬೆಂಗಳೂರನ್ನು ಹಾಳು ಮಾಡಿದ್ದಾರೆ. ಮಳೆಯಿಂದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದರೂ ಏನಾದರೂ ಕ್ರಮ ಕೈಗೊಂಡಿದ್ದಾರಾ? ಬಿಜೆಪಿ ಬೆಂಗಳೂರಿನ ಗೌರವ ಉಳಿಸುವ ಕೆಲಸ ಮಾಡಬೇಕಿತ್ತು. ಈ ಅವಾಂತರಕ್ಕೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರವೇ ಹೊಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.
Published by:Mahmadrafik K
First published: