News18 India World Cup 2019

Lok Sabha Election Result 2019: ರಾಜ್ಯದಲ್ಲಿ 25 ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿದ ಬಿಜೆಪಿ

ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಡಿಕೆ ಸುರೇಶ್​ ಹಾಗೂ ಹಾಸನದಲ್ಲಿ ಜೆಡಿಎಸ್​ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಗೆಲುವ ಮೂಲಕ ಮೈತ್ರಿ ಸರ್ಕಾರ ಕೇವಲ ಎರಡು ಸ್ಥಾನಗಳಿಸುವಲ್ಲಿ ಯಶಸ್ವಿಯಾಗಿದೆ.

Seema.R | news18
Updated:May 23, 2019, 7:22 PM IST
Lok Sabha Election Result 2019: ರಾಜ್ಯದಲ್ಲಿ 25 ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿದ ಬಿಜೆಪಿ
ಯಡಿಯೂರಪ್ಪ
Seema.R | news18
Updated: May 23, 2019, 7:22 PM IST
ಲೋಕಸಭಾ ಚುನಾವಣಾ ಅಖಾಡದಲ್ಲಿ 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ಈ ಬಾರಿ ಯಡಿಯೂರಪ್ಪ ಗೆಲುವಿನ ನಗೆ ಬೀರಿದ್ದಾರೆ. ಚುನಾವಣೆಗೂ ಮೊದಲೇ 22 ಸ್ಥಾನಗಳಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿಎಸ್​ವೈ ತಮ್ಮ ಮಿಷನ್​ 22 ನಲ್ಲಿ ಯಶಸ್ಸು ಸಾಧಿಸಿದ್ದಾರೆ. ಮೋದಿ ಅಲೆ, ಯಡಿಯೂರಪ್ಪ ಪರಿವರ್ತನಾ ಯಾತ್ರೆಗಳಿಂದಾಗಿ ನಿರೀಕ್ಷೆಗೂ ಮೀರಿ ಅಧಿಕ ಸ್ಥಾನಗಳಲ್ಲಿ ಗೆಲುವು ಪಡೆಯಲು ಸಾಧ್ಯವಾಗಿದೆ.

ಬಿಜೆಪಿ ಜಯಭೇರಿ ಸಾಧಿಸಿದ ಕ್ಷೇತ್ರಗಳ ವಿವರ ಇಂತಿದೆ.

ಬಳ್ಳಾರಿ:  ವೈ. ದೇವೇಂದ್ರಪ್ಪ, ಬಿಜೆಪಿ

ಚಿಕ್ಕೋಡಿ:  ಅಣ್ಣಾ ಸಾಹೇಬ್ ಜೊಲ್ಲೆ, ಬಿಜೆಪಿ

ದಕ್ಷಿಣ ಕನ್ನಡ:  ನಳಿನ್ ಕುಮಾರ್ ಕಟೀಲು, ಬಿಜೆಪಿ

ಮೈಸೂರು-ಕೊಡಗು: ಪ್ರತಾಪ್ ಸಿಂಹ, ಬಿಜೆಪಿ
Loading...

ಧಾರವಾಡ: ಪ್ರಲ್ಹಾದ್ ಜೋಷಿ, ಬಿಜೆಪಿ

ಕೊಪ್ಪಳ: ಕರಡಿ ಸಂಗಣ್ಣ, ಬಿಜೆಪಿ

ಬೆಂಗಳೂರು ಸೆಂಟ್ರಲ್: ಪಿ.ಸಿ. ಮೋಹನ್, ಬಿಜೆಪಿ

ಬೆಂಗಳೂರು ಉತ್ತರ: ಡಿ.ವಿ. ಸದಾನಂದ ಗೌಡ, ಬಿಜೆಪಿ

ಮಂಡ್ಯ: ಸುಮಲತಾ ಅಂಬರೀಷ್, ಪಕ್ಷೇತರ

ಬಾಗಲಕೋಟೆ: ಪಿ.ಸಿ. ಗದ್ದಿಗೌಡರ್, ಬಿಜೆಪಿ

ತುಮಕೂರು: ಜಿ. ಬಸವರಾಜು, ಬಿಜೆಪಿ

ಹಾವೇರಿ: ಶಿವಕುಮಾರ್ ಉದಾಸಿ, ಬಿಜೆಪಿ

ಉಡುಪಿ-ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ, ಬಿಜೆಪಿ

ಕಲಬುರ್ಗಿ: ಉಮೇಶ್ ಜಾಧವ್, ಬಿಜೆಪಿ

ಬೆಳಗಾವಿ: ಸುರೇಶ್ ಅಂಗಡಿ, ಬಿಜೆಪಿ

ಶಿವಮೊಗ್ಗ: ಬಿ.ವೈ. ರಾಘವೇಂದ್ರ  ಬಿಜೆಪಿ

ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ, ಬಿಜೆಪಿ

ಬೀದರ್: ಭಗವಂತ್ ಖೂಬಾ, ಬಿಜೆಪಿ

ವಿಜಯಪುರ: ರಮೇಶ್ ಜಿಗಜಿಣಗಿ, ಬಿಜೆಪಿ

ದಾವಣಗೆರೆ: ಜಿ.ಎಂ. ಸಿದ್ದೇಶ್ವರ ಬಿಜೆಪಿ

ಕೋಲಾರ: ಮುನಿಸ್ವಾಮಿ, ಬಿಜೆಪಿ

ಉತ್ತರ ಕನ್ನಡ: ಅನಂತಕುಮಾರ್ ಹೆಗಡೆ, ಬಿಜೆಪಿ

ಚಿಕ್ಕಬಳ್ಳಾಪುರ: ಬಿ.ಎನ್. ಬಚ್ಚೇಗೌಡ, ಬಿಜೆಪಿ

ಚಿತ್ರದುರ್ಗ: ಎ. ನಾರಾಯಣಸ್ವಾಮಿ, ಬಿಜೆಪಿ

ರಾಯಚೂರು: ಕೆ. ಶಿವನಗೌಡ ನಾಯ್ಕ್, ಬಿಜೆಪಿ

ಚಾಮರಾಜನಗರ : ಶ್ರೀನಿವಾಸ್​ ಪ್ರಸಾದ್​, ಬಿಜೆಪಿ

ಇನ್ನುಳಿದ ಎರಡು ಕ್ಷೇತ್ರಗಳಾದ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಡಿಕೆ ಸುರೇಶ್​ ಹಾಗೂ ಹಾಸನದಲ್ಲಿ ಜೆಡಿಎಸ್​ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಗೆಲುವ ಮೂಲಕ ಮೈತ್ರಿ ಸರ್ಕಾರ ಕೇವಲ ಎರಡು ಸ್ಥಾನಗಳಿಸುವಲ್ಲಿ ಯಶಸ್ವಿಯಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸುಮಲತಾ ಕೂಡ ಮೊದಲ ಬಾರಿ ಸಂಸತ್​ ಪ್ರವೇಶಿಸಲು ಮುಂದಾಗಿದ್ದಾರೆ.
First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...