HOME » NEWS » State » BJP WINS 10 SEATS IN KERALA HINDUS SUPPORT FOR PARTY SAYS NALIN KUMAR KATIL MAK

ಕೇರಳದಲ್ಲಿ ಬಿಜೆಪಿ 10ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ, ಪಕ್ಷಕ್ಕೆ ಹಿಂದೂಗಳ ಬೆಂಬಲವಿದೆ: ನಳಿನ್ ಕುಮಾರ್ ಕಟೀಲ್

ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ ಹಿಂದೂಗಳ ಮೇಲೆ ಎಲ್.ಡಿ.ಎಫ್ ಸರಕಾರ ನಡೆಸಿದ ದೌರ್ಜನ್ಯದಿಂದಲೂ ಹಿಂದೂಗಳು ಈ ಬಾರಿ ಎಲ್.ಡಿ.ಎಫ್ ತ್ಯಜಿಸಿ ಬಿಜೆಪಿ ಪರ ಒಲವು ಹೊಂದಿದ್ದಾರೆ ಎಂದು ಕಟೀಲ್ ತಿಳಿಸಿದ್ದಾರೆ.

news18-kannada
Updated:April 5, 2021, 6:24 PM IST
ಕೇರಳದಲ್ಲಿ ಬಿಜೆಪಿ 10ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ, ಪಕ್ಷಕ್ಕೆ ಹಿಂದೂಗಳ ಬೆಂಬಲವಿದೆ: ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್.
  • Share this:
ಮಂಗಳೂರು : ಕೇರಳದಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷ 10ಕ್ಕೂ ಮಿಕ್ಕಿದ ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಸಾಧನೆ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು "ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೇರಳ ಚುನಾವಣಾ ಉಸ್ತುವಾರಿಯಾಗಿ ಕೇರಳವನ್ನು ಅತ್ಯಂತ ಸನಿಹದಿಂದ ಗಮನಿಸಿದ್ದು, ಈ ಬಾರಿ ಚುನಾವಣೆ ಕಳೆದ ಎಲ್ಲಾ ಚುನಾವಣೆಗಳಿಗಿಂತ ಭಿನ್ನವಾಗಲಿದೆ. ಈ ಬಾರಿ ಕೇರಳದ ಯುವ ಜನತೆ ಹಾಗೂ ಮಹಿಳೆಯರು ಬಿಜೆಪಿ ಪಕ್ಷದ ಪರವಾಗಿ ಒಲವು ತೋರಿಸುತ್ತಿದ್ದಾರೆ"ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಪಕ್ಷದ ಸೋಲಾರ್ ಹಗರಣನ್ನು ಬಯಲಿಗೆಳೆಯುವ ಮೂಲಕ ಚುನಾವಣೆಯಲ್ಲಿ ಎಲ್.ಡಿ.ಎಫ್ ಪಕ್ಷ ಉತ್ತಮ ಸಾಧನೆ ತೋರಿತ್ತು. ಯುಡಿಎಫ್ ನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೋಲಾರ್ ಹಗರಣದ ಸಿಲುಕಿಕೊಂಡ ವಿಚಾರವನ್ನೇ ಮುಂದಿಟ್ಟುಕೊಂಡು ಎಲ್.ಡಿ.ಎಫ್ ಚುನಾವಣೆಯನ್ನು ಗೆದ್ದುಕೊಂಡಿತ್ತು. ಆದರೆ, ಭ್ರಷ್ಟಾಚಾರವನ್ನು ಮಟ್ಟಹಾಕುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದ ಎಲ್.ಡಿ.ಎಫ್ ನಿರಂತರ ಭ್ರಷ್ಟಾಚಾರದಲ್ಲೇ ತೊಡಗಿಕೊಂಡಿದೆ.

ಚಿನ್ನ ಕಳ್ಳ ಸಾಗಾಟದಲ್ಲಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಆರೋಪಿಗಳ ಜೊತೆ ಶಾಮೀಲಾಗಿರುವ ವಿಚಾರವೂ ಬೆಳಕಿಗೆ ಬಂದಿದೆ. ಅಲ್ಲದೆ ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ ಹಿಂದೂಗಳ ಮೇಲೆ ಎಲ್.ಡಿ.ಎಫ್ ಸರಕಾರ ನಡೆಸಿದ ದೌರ್ಜನ್ಯದಿಂದಲೂ ಹಿಂದೂಗಳು ಈ ಬಾರಿ ಎಲ್.ಡಿ.ಎಫ್ ತ್ಯಜಿಸಿ ಬಿಜೆಪಿ ಪರ ಒಲವು ಹೊಂದಿದ್ದಾರೆ" ಎಂದು ಕಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವ ಶ್ರೀರಾಮುಲು ಅವರೇ ಸೂಪರ್​ ಸಿಎಂ ವಿಜಯೇಂದ್ರ ಸೇವೆ ಮಾಡಿಕೊಂಡಿರಿ; ಟ್ವಿಟರ್​ನಲ್ಲಿ ಕಾಲೆಳೆದ ಕಾಂಗ್ರೆಸ್​!

"ಕೇರಳದಲ್ಲಿ ಎಲ್.ಡಿ.ಎಫ್ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಸಾಮಾಜಿಕ ಕಾರ್ಯಕರ್ತರ ಹತ್ಯೆಗಳು ನಡೆದಿವೆ. ಕೇವಲ ಬಿಜೆಪಿ ಪಕ್ಷದ ಕಾರ್ಯಕರ್ತರನ್ನಲ್ಲದೆ, ಮುಸ್ಲಿಂ ಲೀಗ್, ಕಾಂಗ್ರೇಸ್ ಕಾರ್ಯಕರ್ತರನ್ನೂ ಹತ್ಯೆ ಮಾಡುವ ಮೂಲಕ ಎಲ್.ಡಿ.ಎಫ್ ಹತ್ಯಾ ರಾಜಕಾರಣವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.

ಈ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತಾ ಶಾ ನೇತೃತ್ವದಲ್ಲಿ ಕೇರಳದಲ್ಲಿ ಬೃಹತ್ ಮೆರವಣಿಗೆಯನ್ನು ಮಾಡಿ ಕೇರಳ ಸರಕಾರದ ವಿರುದ್ಧ ಧ್ವನಿ ಎತ್ತಲಾಗಿತ್ತು. ಆ ಬಳಿಕ ಸಾಮಾಜಿಕ ಕಾರ್ಯಕರ್ತರ ಹತ್ಯೆಗಳು ಕೊಂಚ ಕಡಿಮೆಯಾಗಿದೆ. ಹೀಗಾಗಿ ಬಿಜೆಪಿ ಈ ಬಾರಿ ಕೇರಳದಲ್ಲಿ 6 ರಿಂದ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಮುನ್ನಡೆ ಸಾಧಿಸಲಿದ್ದು, 10 ಕ್ಕಿಂತಲೂ ಮಿಕ್ಕಿದ ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published by: MAshok Kumar
First published: April 5, 2021, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories