ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ಕಮಲ ಅರಳಲಿದೆ ; ಡಿಸಿಎಂ ಅಶ್ವತ್ಥನಾರಾಯಣ

ಈಗಾಗಲೇ ಭಾರತವು ಕಾಂಗ್ರೆಸ್‌ಮುಕ್ತ ಭಾರತವಾಗುವ ಕೊನೆಯ ಹಂತದಲ್ಲಿದೆ. ಅದೇ ಪ್ರಕ್ರಿಯೆ ಪಂಚಾಯಿತಿ ಮಟ್ಟದಲ್ಲಿಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಬದ್ಧತೆ, ಒಗ್ಗಟ್ಟಿನಿಂದ ಕೆಲಸ ಮಾಡಬೇಕು.

ಉಪಮುಖ್ಯಮಂತ್ರಿ ಅಶ್ವತ್ಹನಾರಾಯಣ

ಉಪಮುಖ್ಯಮಂತ್ರಿ ಅಶ್ವತ್ಹನಾರಾಯಣ

  • Share this:
ಬೆಂಗಳೂರು(ಡಿಸೆಂಬರ್​. 03): ಇಡೀ ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ಅಧಿಕಾರ ಹಿಡಿಯಲೇಬೇಕು, ಹಿಡಿಯುತ್ತದೆ ಕೂಡ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದುತ್ತಿದೆ. ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ತಾಲೂಕುಗಳು ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿವೆ, ನಿಜ. ಆದರೆ, ಹಿಂದಿನ ಸರಕಾರಗಳಿಗೆ ಈ ಪ್ರದೇಶಗಳ ಭೂಮಿಯ ಮೇಲೆ ಕಣ್ಣಿತ್ತೆ ಹೊರತು ಜನರಿಗೆ ಅತ್ಯುತ್ತಮ ದರ್ಜೆಯ ಮೂಲಭೂತ ಸೌಕರ್ಯ ಒದಗಿಸುವತ್ತ ಇರಲಿಲ್ಲ. ಹೀಗಾಗಿ ಗ್ರಾಮ ಸ್ವರಾಜ್ಯ ತತ್ವದಡಿಯಲ್ಲಿ ಪಕ್ಷವು ಅಧಿಕಾರ ಚುಕ್ಕಾಣಿ ಹಿಡಿದು ಪ್ರತಿ ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ರೂಪಿಸಬೇಕಿದೆ ಎಂದರು.

ನಿರಂತರವಾಗಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಹಾಗೂ ಆಮೇಲೆ ಸರಕಾರ ನಡೆಸಿದ ಜೆಡಿಎಸ್‌ ಪಕ್ಷಗಳು ಜನರನ್ನು ನಿರ್ಲಕ್ಷಿಸಿದವು. ರಾಜಕೀಯ ಎಂದರೆ ಕೇವಲ ಕುಟುಂಬಕ್ಕೆ ಸೀಮಿತವಾದ, ಸ್ವಂತ ಬೆಳವಣಿಗೆಗೆ ಪೂರಕವಾಗಿತ್ತು. ಅದು ಸಂಸತ್ತಿನಿಂದ ಪಂಚಾಯಿತಿ ವರೆಗೂ ಹಬ್ಬಿತ್ತು. ಅದೆಲ್ಲವನ್ನೂ ತೊಡೆದು ಹಾಕುವ ಕಾಲ ಬಂದಿದೆ. ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ ಅಪ್ರಸ್ತುತವಾಗಿದೆ. ಅದೇ ರೀತಿ ರಾಜ್ಯದಲ್ಲೂ ಜೆಡಿಎಸ್‌ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಉಪ ಮುಖ್ಯಮಂತ್ರಿ ನುಡಿದರು.

ಕಾಂಗ್ರೆಸ್‌ ಮುಕ್ತ ಪಂಚಾಯಿತಿ

ಈಗಾಗಲೇ ಭಾರತವು ಕಾಂಗ್ರೆಸ್‌ಮುಕ್ತ ಭಾರತವಾಗುವ ಕೊನೆಯ ಹಂತದಲ್ಲಿದೆ. ಅದೇ ಪ್ರಕ್ರಿಯೆ ಪಂಚಾಯಿತಿ ಮಟ್ಟದಲ್ಲಿಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಬದ್ಧತೆ, ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಒಂದು ವೇಳೆ ಮತ್ತೊಮ್ಮೆ ಗ್ರಾಮಗಳಲ್ಲಿ ಅದೇ ಬಿಜೆಪಿ ಬಿಟ್ಟು ಅದೇ ಪಕ್ಷಗಳು ಅಧಿಕಾರಕ್ಕೆ ಅಭಿವೃದ್ಧಿ ಇನ್ನು ಎರಡು ದಸಖಗಳ ಕಾಲ ಹಿಂದಕ್ಕೆ ಹೋದಂತೆ ಆಗುತ್ತದೆ ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

ಇದನ್ನೂ ಓದಿ : Kanakadasa Jayanti 2020 – ಸರ್ಕಾರದಿಂದ ಕನಕದಾಸ ಜಯಂತಿ ಆಚರಣೆ: ದಾಸ ಶ್ರೇಷ್ಠರ ಬದುಕೇ ಆದರ್ಶ ಎಂದ ಸಿಎಂ

ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್;‌ ನಮ್ಮ ಪಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಜಯ ಸಾಧಿಸಲೇಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕನಸುಗಳನ್ನು ನನಸು ಮಾಡಬೇಕಾದರೆ, ಗ್ರಾಮ ಸ್ವರಾಜ್ಯದ ಪರಿಕಲ್ಪನೆಯೊಂದಿಗೆ ಬಂದಿರುವ ಬಿಜೆಪಿಯನ್ನು ಜನರು ಗೆಲ್ಲಿಸಬೇಕು. ಒಂದು ವೇಳೆ ಹಳ್ಳಿಹಳ್ಳಿಯಲ್ಲೂ ಕಮಲ ಅರಳಿದರೆ, ರಾಜ್ಯದ ಚಿತ್ರಣವೇ ಬದಲಾಗಿಬಿಡುತ್ತದೆ ಎಂದರು.

ಪ್ರಧಾನಮಂತ್ರಿಗಳು ಯಾವಾಗಲೂ ಒಂದು ಮಾತು ಹೇಳುತ್ತಲೇ ಇರುತ್ತಾರೆ. ಮತಗಟ್ಟೆ ಗೆದ್ದರೆ ದೇಶವನ್ನೇ ಗೆದ್ದಂತೆ ಎಂದು. ಆ ಮಾತು ನಿಜ. ಏಕೆಂದರೆ, ಪಂಚಾಯಿತಿ ಚುನಾವಣೆಯು ಚಿಹ್ನೆ ಇಲ್ಲದೆ ನಡೆಯುತ್ತದೆ. ಆದ ಕಾರಣದಿಂದ ಕಾರ್ಯಕರ್ತರು ಅದನ್ನೇ ಸವಾಲಾಗಿ ಸ್ವೀಕರಿಸಿ ಕೆಲಸ ಆಡಬೇಕು ಎಂದು ಸಲಹೆ ಮಾಡಿದರು.
Published by:G Hareeshkumar
First published: