ಸಿಎಂ ಕುಮಾರಸ್ವಾಮಿ ಹತಾಶರಾಗಿ ಮಾತಾಡುತ್ತಿದ್ದಾರೆ: ಬಿ.ಎಸ್​. ಯಡಿಯೂರಪ್ಪ ಟೀಕೆ

news18
Updated:August 1, 2018, 1:14 PM IST
ಸಿಎಂ ಕುಮಾರಸ್ವಾಮಿ ಹತಾಶರಾಗಿ ಮಾತಾಡುತ್ತಿದ್ದಾರೆ: ಬಿ.ಎಸ್​. ಯಡಿಯೂರಪ್ಪ ಟೀಕೆ
news18
Updated: August 1, 2018, 1:14 PM IST
ರಮೇಶ್​ ಹಿರೇಜಂಬೂರು, ನ್ಯೂಸ್​18 ಕನ್ನಡ

ಬೆಂಗಳೂರು (ಆ. 1):  ವಿಪಕ್ಷ ನಾಯಕನಾಗಿ ನಾನು ಉ.ಕ. ಭಾಗದ ಹೋರಾಟಗಾರರ ಜೊತೆ ಮಾತನಾಡಿದ್ದೇನೆ. ವಾಸ್ತವವಾಗಿ ಕುಮಾರಸ್ವಾಮಿಯವರೇ ಹೋಗಿ ಮಾತನಾಡಬೇಕಾಗಿತ್ತು. ಆದರೆ, ಸಿಎಂ ಎಚ್ಡಿಕೆ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆ. 9ರಿಂದ ರಾಜ್ಯ ಪ್ರವಾಸ ನಡೆಸಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಇಂದು ಈ ಬಗ್ಗೆ ಡಾಲರ್ಸ್​ ಕಾಲನಿಯ ತಮ್ಮ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ. ಈ ವೇಳೆ ನ್ಯೂಸ್​18 ಕನ್ನಡದ ಜೊತೆಗೆ ಮಾತನಾಡಿರುವ ಬಿಎಸ್​ವೈ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹತಾಶರಾಗಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕತೆಯ ಕೂಗು ಕೇಳಿಬಂದಿದೆ. ಉತ್ತರ ಕರ್ನಾಟಕ ಭಾಗದ ನಾಯಕರು, ಸ್ವಾಮೀಜಿಗಳು ಹೋರಾಟಕ್ಕೆ ಕುಳಿತಾಗ ಮಾತನಾಡುವುದು ನನ್ನ ಕರ್ತವ್ಯ. ಪ್ರತಿಪಕ್ಷ ನಾಯಕನಾಗಿ ಅವರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ 3 ತಂಡಗಳಲ್ಲಿ ಬಿಜೆಪಿ ಪ್ರವಾಸ ನಡೆಯಲಿದ್ದು, ಯಡಿಯೂರಪ್ಪ ನೇತೃತ್ವದಲ್ಲಿ ಒಂದು ತಂಡ, ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಇನ್ನೆರಡು ತಂಡ ರಾಜ್ಯ ಪ್ರವಾಸ ನಡೆಸಲಿವೆ.

ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಇಂದು ಸಭೆ ನಡೆಸಿದ್ದು, ಶಾಸಕ ವಿಶ್ವನಾಥ್​, ಮಾಜಿ ಶಾಸಕರಾದ ಸಿ.ಪಿ. ಯೋಗೀಶ್ವರ್​, ಸುರೇಶ್​ ಗೌಡ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಉ.ಕ. ಪ್ರತ್ಯೇಕತಾ ವಿವಾದವನ್ನು ಬಳಸಿಕೊಳ್ಳಲಿದೆಯಾ ಬಿಜೆಪಿ?:

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಒತ್ತಾಯಿಸಿ ನಿನ್ನೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದಿದ್ದ ಪ್ರತಿಭಟನೆ ಪಾಲ್ಗೊಂಡಿದ್ದ ವಿಪಕ್ಷ ನಾಯಕ ಬಿ.ಎಸ್​. ಯಡಿಯೂರಪ್ಪ ಆ. 2ರಂದು ಬಂದ್​ ಆಚರಿಸದಂತೆ ಮನವಿ ಮಾಡಿಕೊಂಡಿದ್ದರು. ವಿಪಕ್ಷ ನಾಯಕನಾಗಿ ತಾವೇ ಉ.ಕ. ಭಾಗದ ಸಮಸ್ಯೆಗಳನ್ನು ಬಗೆಹರಿಸುವ ಆಶ್ವಾಸನೆಯನ್ನೂ ನೀಡಿಬಂದಿದ್ದರು.
Loading...

ಇದೀಗ, ಹೈಕಮಾಂಡ್​ನ ಸೂಚನೆಯಂತೆ ರಾಜ್ಯ ಪ್ರವಾಸದ ವೇಳೆ ಉ.ಕ. ಪ್ರತ್ಯೇಕತೆಯ ವಿವಾದವನ್ನು ಸದ್ಭಳಕೆ ಮಾಡಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ. ರಾಜ್ಯಕ್ಕೆ ಅಮಿತ್ ಷಾ ಬರುವ ಮುನ್ನವೇ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಲಿದ್ದಾರೆ.

ಈಗಾಗಲೇ ಯಡಿಯೂರಪ್ಪನವರ ಪ್ರವಾಸದ ರೂಪುರೇಷೆಗಳು ಸಿದ್ಧಗೊಳ್ಳುತ್ತಿದ್ದು, ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ದಿನಗಳ ಕಾಲ ಪ್ರವಾಸ ನಡೆಸಬೇಕು ಎಂದು ಯೋಜನೆ ಹಾಕಿಕೊಳ್ಳಲಾಗಿದೆ. ತಮ್ಮ ಪ್ರವಾಸದಲ್ಲಿ ಪ್ರಮುಖವಾಗಿ ಹೇಳಬೇಕಾಗಿರುವ ವಿಚಾರಗಳ ಬಗ್ಗೆ ಶಾಸಕರು, ಮಾಜಿ ಶಾಸಕರಿಗೆ ಪಾಠ ಮಾಡಿರುವ ಯಡಿಯೂರಪ್ಪ, ರಾಜ್ಯ ಪ್ರವಾಸದ ರೂಪುರೇಷೆ ಅಂತಿಮಗೊಂಡ ಬಳಿಕ ಮತ್ತೊಮ್ಮೆ ವಿವರಿಸುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ.

 
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ