HOME » NEWS » State » BJP WILL OPEN AN ACCOUNT IN SIRA BYPOLL BY WINNING CONSTITUENCY SAYS BJP STATE CHIEF SECRETARY RAVIKUMAR HK

Sira By Election: ಶಿರಾ ಉಪಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ : ವಿಧಾನ ಪರಿಷತ್​ ಸದಸ್ಯ ಎನ್​​​ ರವಿಕುಮಾರ್

ಬಿಜೆಪಿ ಗೆಲ್ಲಲಿದೆ ಎನ್ನುವ‌ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಬಹಳ‌ ಜನ ಟಿಕೆಟ್ ಕೇಳುತ್ತಿದ್ದಾರೆ. ಸ್ಥಳೀಯ ನಾಯಕರಾದ ಎಸ್.ಆರ್.ಗೌಡ, ಮಂಜುನಾಥ್, ಗೊಲ್ಲ‌ ಸಮುದಾಯದ ಇಬ್ಬರು ಪ್ರಮುಖರು, ಬೇರೆ ಬೇರೆ ಪಕ್ಷವದರು ಕೂಡ ಟಿಕೆಟ್​ಗೆ ಬೇಡಿಕೆ ಇಟ್ಟಿದ್ದಾರೆ

news18-kannada
Updated:September 17, 2020, 9:26 PM IST
Sira By Election: ಶಿರಾ ಉಪಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ : ವಿಧಾನ ಪರಿಷತ್​ ಸದಸ್ಯ ಎನ್​​​ ರವಿಕುಮಾರ್
ಎನ್​​​​. ರವಿಕುಮಾರ್
  • Share this:
ಬೆಂಗಳೂರು(ಸೆಪ್ಟೆಂಬರ್​. 17):  ಶಿರಾದಲ್ಲಿ ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ. ಇದುವರೆಗೂ ಶಿರಾ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯ ಉಪ ಚುನಾವಣೆಯಲ್ಲಿ ಬಿಜೆಪಿ ಪರ ಜನರ ಒಲವು ಕಂಡು ಬಂದಿದೆ ಎಂದು ಎಂಎಲ್​​ಸಿ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್​​​​. ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಳೆದ 15 ದಿನದಿಂದ ಶಿರಾ ಪ್ರವಾಸ ಮಾಡಿದ್ದು, ಎಲ್ಲಾ 264 ಬೂತ್ ಕಮಿಟಿ ರಚನೆ, ವಾಟ್ಸಾಪ್ ಗ್ರೂಪ್ ರಚನೆ, ಪ್ರತಿ ಬೂತ್​​ನಲ್ಲಿ 50-60 ಕಾರ್ಯಕರ್ತರ ನಿಯೋಜನೆ ಮಾಡಿ ಅವರು ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುತ್ತಿದೆ. ‌ಶಿರಾದಲ್ಲಿ ಬಿಜೆಪಿ ಯಾವತ್ತೂ ಗೆದ್ದಿಲ್ಲ, ಇದುವರೆಗೆ ಕಾಂಗ್ರೆಸ್, ಜೆಡಿಎಸ್ ಮಾತ್ರ ಗೆದ್ದಿದೆ. ಆದರೆ, ಈ ಬಾರಿ ಕ್ಷೇತ್ರದಲ್ಲಿನ ಜನರ ಪ್ರತಿಕ್ರಿಯೆ, ವಾತಾವರಣ ನೋಡಿದರೆ ಬಿಜೆಪಿ ಈ ಬಾರಿ ಗೆಲ್ಲಲಿದೆ ಎಂದರು.

ಕ್ಷೇತ್ರದ ಜನರ ಪ್ರಮುಖ ಬೇಡಿಕೆ ಶಿರಾ ತಾಲೂಕಿನಲ್ಲಿನ ನೀರಿನ ಸಮಸ್ಯೆಗೆ ಪರಿಹಾರಬೇಕು ಎನ್ನುವುದಾಗಿದೆ, ಆದರೆ, ಈವರೆಗೂ ಮದಲೂರು, ಶಿರಾ, ಕಳ್ಳಂಬೆಳ್ಳ ಕೆರೆಗೆ ನೀರು ತುಂಬಿಸುವ ಭರವಸೆ ನೀಡಿಕೊಂಡು ಬಂದಿದ್ದು, ಬಿಟ್ಟರೆ ಯಾರೂ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ. ಆದರೆ, ಈಗ ಶಿರಾದಲ್ಲಿ ಸಕಾರಾತ್ಮಕ ಅಂಶ ಕಾಣುತ್ತಿದೆ. 2009 ರಲ್ಲಿ ಶಿರಾಗೆ ನೀರು ಬಿಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಆದೇಶ ಹೊರಡಿಸಿದ್ದರು. ಆದರೂ ಅಲ್ಲಿನ ಶಾಸಕರು ನೀರು ತೆಗೆದುಕೊಂಡು ಹೋಗುವ ಕೆಲಸ ಮಾಡಲಿಲ್ಲ, ಮದಲೂರು ಕೆರೆಗೆ ತುಂಬಿಸಲಿಲ್ಲ, ಆದರೆ ಈಗ ನಾವು ಕೆಲವೇ ದಿನದಲ್ಲಿ ನೀರು ತುಂಬಿಸಲಿದ್ದೇವೆ. ಈಗಾಗಲೇ ಶಿರಾ, ಕಳ್ಳಂಬೆಳ್ಳ ಕೆರೆಗೆ ನೀರು ತುಂಬಿಸಲಾಗುತ್ತಿದೆ. ಅದಾದ ಬಳಿಕ ಮದಲೂರು ಕೆರೆಗೆ ನೀರು ಬಿಡಲಾಗುತ್ತದೆ. ಈ ಬಾರಿ ಶಿರಾದಲ್ಲಿ ನಾವು ಖಾತೆ ತೆರೆಯಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಗೆಲ್ಲಲಿದೆ ಎನ್ನುವ‌ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಬಹಳ‌ ಜನ ಟಿಕೆಟ್ ಕೇಳುತ್ತಿದ್ದಾರೆ. ಸ್ಥಳೀಯ ನಾಯಕರಾದ ಎಸ್.ಆರ್.ಗೌಡ, ಮಂಜುನಾಥ್, ಗೊಲ್ಲ‌ ಸಮುದಾಯದ ಇಬ್ಬರು ಪ್ರಮುಖರು, ಕುರುಬ ಸಮುದಾಯದವರು, ಬೇರೆ ಬೇರೆ ಪಕ್ಷವದರು ಕೂಡ ಟಿಕೆಟ್​ಗೆ ಬೇಡಿಕೆ ಇಟ್ಟಿದ್ದಾರೆ. ಚುನಾವಣೆ ಘೋಷಣೆ ಆದ ನಂತರ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಘೋಷಣೆ ನಂತರ ನಾವು ನಮ್ಮ ಅಭ್ಯರ್ಥಿ ಘೋಷಣೆ ಮಾಡಲಿದ್ದೇವೆ ಎಂದು ರವಿಕುಮಾರ್ ತಿಳಿಸಿದರು.

ವಿಶ್ವನಾಥ್​ ತಿಳಿದುಕೊಂಡು ಮಾತನಾಡುವುದು ಉತ್ತಮ :

ಹೆಚ್. ವಿಶ್ವನಾಥ್ ಅವರು ಪಕ್ಷದ ಒಳಗಡೆ ಬಂದು ಸ್ವಲ್ಪ ನೋಡಿ ತಿಳಿದುಕೊಂಡು ಮಾತನಾಡಿದರೆ ಒಳಿತು ಎಂದು  ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : ಯಡಿಯೂರಪ್ಪ ದೆಹಲಿ‌ ಭೇಟಿ‌ಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ, ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ; ಸಚಿವ ಜಗದೀಶ್ ಶೆಟ್ಟರ್

ಇಷ್ಟು ವರ್ಷ ಕಾಂಗ್ರೆಸ್‌ ಸರ್ಕಾರ ಡ್ರಗ್ಸ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಯಿತು. ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಕೂಡ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಆದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಡ್ರಗ್ಸ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಬಹಳ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.
Youtube Video

ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಹಾಕಿಕೊಂಡವರ ಬಂಧಿಸಲಾಗಿದ್ದು, ಕೆಲವರ ವಿಚಾರಣೆ ನಡೆಯುತ್ತಿದೆ. ಭಾಗಿಯಾದವರ ಬಗ್ಗೆ ಆಳವಾಗಿ ತನಿಖೆ, ಅಧ್ಯಯನ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಯಾವುದೇ ಅನ್ಯಾಯ ಮಾಡದೇ ರಾಜ್ಯದಲ್ಲಿ ಡ್ರಗ್ಸ್ ದಂಧೆಯ ಬೇರು ಕತ್ತರಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು.
Published by: G Hareeshkumar
First published: September 17, 2020, 9:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories