BJP Tweet: ಕೆಪಿಸಿಸಿ ಅಧ್ಯಕ್ಷರು ಬರೀ ರಬ್ಬರ್ ಸ್ಟ್ಯಾಂಪ್ ಅಷ್ಟೇ; ಡಿಕೆಶಿ ನಿಮ್ಮ ತಾಯಿ ನೀಡಿದ ಎಚ್ಚರಿಕೆ ಮರೆಯಬೇಡಿ

'ಸಿದ್ದರಾಮಯ್ಯ ಎಲ್ಲಾ ಹಂತದಲ್ಲೂ ಕೆಪಿಸಿಸಿ ಅಧ್ಯಕ್ಷರನ್ನು ತುಳಿಯುತ್ತಲೇ ಬಂದಿದ್ದಾರೆ. ಪದಾಧಿಕಾರಿಗಳ ಪಟ್ಟಿ, ಪ್ರಚಾರ ಸಮಿತಿಗೆ ಅಧ್ಯಕ್ಷರ ನೇಮಕ, ಚುನಾವಣಾ ಟಿಕೆಟ್‌ ಎಲ್ಲವೂ ಸಿದ್ದರಾಮಯ್ಯ ಮೂಗಿನ ನೇರಕ್ಕೆ ನಡೆದು ಹೋಗಿದೆ. ಕೆಪಿಸಿಸಿ ಅಧ್ಯಕ್ಷರು ಬರೇ ರಬ್ಬರ್‌ ಸ್ಟ್ಯಾಂಪ್‌ ಅಷ್ಟೇ!' ಎಂದು ಕುಟುಕಿದೆ.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​

  • Share this:
ಬೆಂಗಳೂರು (ಜು. 12): ಬಿಜೆಪಿ (BJP) ಹಾಗೂ ಸಿದ್ದರಾಮಯ್ಯ (Siddaramaiah) ನಡುವಿನ ಟ್ವೀಟ್ ವಾರ್​ (Tweet War) ಮುಗಿಯೋ ಲಕ್ಷಣ ಕಾಣ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಬಿಜೆಪಿ ಕಿಡಿಕಾರಿದೆ. ಸಿದ್ದರಾಮೋತ್ಸವ ಕಾರ್ಯಕ್ರಮದ ಚರ್ಚೆ ಶುರುವಾದಾಗಿನಿಂದ ಸಿದ್ದರಾಮಯ್ಯ  ವಿರುದ್ಧ ಬಿಜೆಪಿ ನಾಯಕರು (BJP Leaders) ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್​ ನಾಯಕರ (Congress Leaders) ಒಳಜಗಳದ ಬಗ್ಗೆ ಬಿಜೆಪಿ ಟ್ವೀಟ್​ ಮಾಡಿದ್ದಾರೆ. ಸಿದ್ದರಾಮಯ್ಯ , ಡಿಕೆ ಶಿವಕುಮಾರ್ (DK Shivakumar)​ ಅವರನ್ನು ಬೆಳೆಯಲು ಬಿಡೋದಿಲ್ಲ ಎಂದು ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಜೊತೆಗೆ ಡಿ.ಕೆ ಶಿವಕುಮಾರ್​ ಅವರ ತಾಯಿ ಹಿಂದಿನ ಹೇಳಿಕೆಯನ್ನೂ ಸಹ ಟ್ವೀಟ್​ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ (KPCC President D.K Shivakumar)  ವಿರುದ್ಧ ಕಿಡಿಕಾರಿದ್ದಾರೆ.  ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಲ್ಲ ಹಂತದಲ್ಲಿಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ತುಳಿಯುತ್ತಲೇ ಬಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

#ಅಸಹಾಯಕ ಡಿಕೆಶಿ  ಟ್ಯಾಗ್‌ ಬಳಸಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಮೂಗಿನ ನೇರಕ್ಕೆ ಎಲ್ಲವೂ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.

'ಸಿದ್ದರಾಮಯ್ಯ ಎಲ್ಲಾ ಹಂತದಲ್ಲೂ ಕೆಪಿಸಿಸಿ ಅಧ್ಯಕ್ಷರನ್ನು ತುಳಿಯುತ್ತಲೇ ಬಂದಿದ್ದಾರೆ. ಪದಾಧಿಕಾರಿಗಳ ಪಟ್ಟಿ, ಪ್ರಚಾರ ಸಮಿತಿಗೆ ಅಧ್ಯಕ್ಷರ ನೇಮಕ, ಚುನಾವಣಾ ಟಿಕೆಟ್‌ ಎಲ್ಲವೂ ಸಿದ್ದರಾಮಯ್ಯ ಮೂಗಿನ ನೇರಕ್ಕೆ ನಡೆದು ಹೋಗಿದೆ. ಕೆಪಿಸಿಸಿ ಅಧ್ಯಕ್ಷರು ಬರೇ ರಬ್ಬರ್‌ ಸ್ಟ್ಯಾಂಪ್‌ ಅಷ್ಟೇ!' ಎಂದು ಕುಟುಕಿದೆ.

ಸಿದ್ದರಾಮಯ್ಯ ಏನು ಬೇಕಾದ್ರೂ ಮಾಡ್ತಾರೆ

ಅಧಿಕಾರಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ! ಅಂದು ದಲಿತ ನಾಯಕ ಪರಮೇಶ್ವರ್ ಅವರ ವಿರುದ್ಧ ಸಂಚು ನಡೆಸಿ ಬಲಿ ಹಾಕಿದರು. ಇಂದು ಡಿಕೆಶಿ ಅವರ ರಾಜಕೀಯ ಜೀವನದ ಬಲಿ ತೆಗೆಯಲು ಹೊಂಚು ಹಾಕುತ್ತಿದ್ದಾರೆ. ಇಷ್ಟೆಲ್ಲ ತನ್ನ ಸುತ್ತ ನಡೆಯುತ್ತಿದ್ದರೂ, ಕೆಪಿಸಿಸಿ ಅಧ್ಯಕ್ಷರು ಅಸಹಾಯವಾಗಿರುವುದು ವಿಪರ್ಯಾಸ' ಎಂದು ವ್ಯಂಗ್ಯವಾಡಿದೆ.

ಬಣ್ಣದ ಮಾತಿಗೆ ಡಿಕೆಶಿ ಮರುಳಾಗಬೇಡಿ

'ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ, ಅಧಿಕಾರಕ್ಕೆ ಬಂದರೆ ಫಿಫ್ಟಿ- ಫಿಫ್ಟಿ ಸಿಎಂ ಸ್ಥಾನ ಹಂಚಿಕೆ ಎಂಬ ಬಣ್ಣದ ಮಾತಿಗೆ ಮರುಳಾಗಬೇಡಿ. ಮೊದಲನೆಯದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಎರಡನೆಯದಾಗಿ ಕಾಂಗ್ರೆಸ್ ಪಕ್ಷದ ಜೊತೆ ನಿಮ್ಮನ್ನೂ ಮುಳುಗಿಸಲು ಸಿದ್ದರಾಮಯ್ಯ ಕಾಯುತ್ತಿದ್ದಾರೆ!' ಎಂದು ಎಚ್ಚರಿಕೆ ನೀಡಿದೆ.

ಮಾತೋಶ್ರೀ ನೀಡಿದ ಎಚ್ಚರಿಕೆ ಮರೆಯಬೇಡಿ

ನಮ್ಮ‌ ನಾಯಕರು, ನಮ್ಮ ನಾಯಕರು ಎಂದು ಕೈ ಕುಲುಕುವ ಡಿಕೆಶಿ ಅವರೇ, ಹೆಜ್ಜೆ ಹೆಜ್ಜೆಗೂ ನಿಮ್ಮ ಮಾತೋಶ್ರೀ ನೀಡಿದ ಎಚ್ಚರಿಕೆ ಮರೆಯಬೇಡಿ. ಸಿದ್ದರಾಮಯ್ಯ ಬಗಲಲ್ಲಿರುವ ಕತ್ತಿ ಸದಾ ನಿಮ್ಮ‌ ಕತ್ತನ್ನೇ ದೃಷ್ಟಿಸುತ್ತಿರುತ್ತದೆ ಎಂಬುದರಲ್ಲಿ ಅನುಮಾನ ಬೇಡ' ಎಂದು ಕಿವಿಮಾತು ಹೇಳಿದೆ.

ನಿಮ್ಮ ತಾಯಿಯೇ ಹೇಳಿದ್ದಾರೆ

ಡಿ.ಕೆ ಶಿವಕುಮಾರ್‌ ಅವರ ತಾಯಿ ವಾಹಿನಿಯೊಂದರಲ್ಲಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಹಂಚಿಕೊಂಡಿರುವ ಆಡಳಿತ ಪಕ್ಷ, ಸಿದ್ದರಾಮಯ್ಯ ಅವರ ಬಗ್ಗೆ ನಿಮ್ಮ ತಾಯಿ ನೀಡಿರುವ ಎಚ್ಚರಿಕೆಯನ್ನು ಮರೆಯಬೇಡಿ ಎಂದು ಡಿ.ಕೆ.ಶಿವಕುಮಾರ್‌ ಅವರನ್ನುದ್ದೇಶಿಸಿ ಮತ್ತಷ್ಟು ಟ್ವೀಟ್ ಪ್ರಕಟಿಸಿದೆ.
Published by:Pavana HS
First published: