BJP Tweet: ಸಿದ್ದರಾಮಯ್ಯನವರೇ ನಿಮ್ಮ ಪಕ್ಕದಲ್ಲೇ ಶತ್ರುಗಳಿದ್ದಾರೆ; ನಿಮ್ಮ ಸೋಲಿಗೆ ಸುಪಾರಿ ಕೊಡುವವರ ಪಟ್ಟಿ ದೊಡ್ಡದಿದೆ

‘ಚಾಮುಂಡೇಶ್ವರಿಯಲ್ಲಿ ಸೋಲಾಯ್ತು, ಬಾದಾಮಿಯಲ್ಲಿ ಸೋಲುವ ಭೀತಿ. ಸಿದ್ದರಾಮಯ್ಯನವರೇ, ಮುಂದೆ ನೀವು ಚುನಾವಣೆಗೆ ನಿಲ್ಲಬಹುದು. ಆದರೆ, ಗೆಲ್ಲಲು ಸಾಧ್ಯವಿಲ್ಲ. ನಿಮ್ಮ ಜೀವನದಲ್ಲಿ ಚುನಾವಣಾ ಪರ್ವ ಮುಗಿದ ಅದ್ಯಾಯ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು (ಜು.09): ವಿಪಕ್ಷನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಬಿಜೆಪಿ ನಡುವಿನ ಟ್ವೀಟ್​ ಸಮರ ಮುಂದುವರಿದಿದೆ. ಶಾಲಾ ಮಕ್ಕಳಿಗೆ ಶೂ, ಸಾಕ್ಸ್​ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ರು. ಇದೀಗ ಬಿಜೆಪಿ ಸರದಿ, ಸಾಲು ಸಾಲು ಟ್ವೀಟ್ (Tweet) ​ ಮೂಲಕ ಸಿದ್ದರಾಮಯ್ಯ ವಿರುದ್ಧ ಗುಡುಗಿದೆ. ಸಿದ್ದರಾಮೋತ್ಸವದ ಬಗ್ಗೆ ಕಿಡಿಕಾರುತ್ತಿದ್ದ ಬಿಜೆಪಿ, ಇದೀಗ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸರಣಿ ಟ್ವೀಟ್ (BJP Tweet) ಮಾಡುವ ಮೂಲಕ ವಾಗ್ದಾಳಿ ಮುಂದುವರಿಸಿದೆ. ಸಿದ್ದರಾಮಯ್ಯ ಅವರೇ, ನಿಮ್ಮ ಬಗಲಲ್ಲೇ ಶತ್ರುಗಳಿದ್ದಾರೆ. ಅವರ ಪಟ್ಟಿ ದೊಡ್ಡದಿದೆ. ನಿಮ್ಮ‌ ಸೋಲಿಗೆ ಸುಪಾರಿ ಕೊಡುವವರನ್ನು ಅನ್ಯ ಪಕ್ಷದಲ್ಲಿ ಹುಡುಕುವ ಅಗತ್ಯವಿಲ್ಲ’ ಎಂದು ಬಿಜೆಪಿ ಟೀಕಿಸಿದೆ.

ಸಿದ್ದರಾಮಯ್ಯನವರ ಬಗಲಲ್ಲೇ ಶತ್ರುಗಳಿದ್ದಾರೆ.

√ ಪರಮೇಶ್ವರ
√ ಡಿಕೆಶಿ
√ ಮುನಿಯಪ್ಪ
√ ಖರ್ಗೆ
√ ದೇಶಪಾಂಡೆ
√ ಶ್ಯಾಮನೂರು ಶಿವಶಂಕರಪ್ಪ

ಪಟ್ಟಿ ದೊಡ್ಡದಿದೆ. ನಿಮ್ಮ‌ ಸೋಲಿಗೆ ಸುಪಾರಿ ಕೊಡುವವರನ್ನು ಅನ್ಯ ಪಕ್ಷದಲ್ಲಿ ಹುಡುಕುವ ಅಗತ್ಯವಿಲ್ಲ.#ಬುರುಡೆರಾಮಯ್ಯ

— BJP Karnataka (@BJP4Karnataka) July 9, 2022‘ಸಿದ್ದರಾಮಯ್ಯ ಅವರೇ, ನಿಮ್ಮ ಬಗಲಲ್ಲೇ ಶತ್ರುಗಳಿದ್ದಾರೆ.  ಪರಮೇಶ್ವರ, ಡಿ.ಕೆ.ಶಿವಕುಮಾರ್, ಕೆ.ಎಚ್. ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಆರ್‌.ವಿ. ದೇಶಪಾಂಡೆ, ಶ್ಯಾಮನೂರು ಶಿವಶಂಕರಪ್ಪ ಹೀಗೆ ಪಟ್ಟಿ ದೊಡ್ಡದಿದೆ. ನಿಮ್ಮ‌ ಸೋಲಿಗೆ ಸುಪಾರಿ ಕೊಡುವವರನ್ನು ಅನ್ಯ ಪಕ್ಷದಲ್ಲಿ ಹುಡುಕುವ ಅಗತ್ಯವಿಲ್ಲ’ ಎಂದು ಬಿಜೆಪಿ ಕಿಡಿಕಾರಿದೆ.

ಸಿದ್ದರಾಮಯ್ಯರಿಗೆ ಗೆಲುವು ಸಾಧ್ಯವಿಲ್ಲ

‘ಚಾಮುಂಡೇಶ್ವರಿಯಲ್ಲಿ ಸೋಲಾಯ್ತು, ಬಾದಾಮಿಯಲ್ಲಿ ಸೋಲುವ ಭೀತಿ. ಸಿದ್ದರಾಮಯ್ಯನವರೇ, ಮುಂದೆ ನೀವು ಚುನಾವಣೆಗೆ ನಿಲ್ಲಬಹುದು. ಆದರೆ, ಗೆಲ್ಲಲು ಸಾಧ್ಯವಿಲ್ಲ. ನಿಮ್ಮ ಜೀವನದಲ್ಲಿ ಚುನಾವಣಾ ಪರ್ವ ಮುಗಿದ ಅದ್ಯಾಯ. ನಿಮ್ಮ 'ಕೊನೆಯ' ಚುನಾವಣೆಯಲ್ಲಿ ಸೋಲುವುದು ಶತಸಿದ್ಧ. ಇದು ನಮ್ಮ ಮಾತಲ್ಲ,‌ ನಿಮ್ಮದೇ ಪಕ್ಷದ ನಾಯಕರ ಅಭಿಲಾಷೆ’ ಎಂದು ಬಿಜೆಪಿ ಛೇಡಿಸಿದೆ.

ಸಿದ್ದರಾಮಯ್ಯ ಅವರದ್ದು ಅದೇ ರಾಗ, ಅದೇ ಹಾಡು

‘ಪ್ರತಿ ಬಾರಿ ಚುನಾವಣೆ ಬಂದಾಗಲೂ ಸಿದ್ದರಾಮಯ್ಯ ಅವರದ್ದು ಅದೇ ರಾಗ, ಅದೇ ಹಾಡು. ಇದೇ ನನ್ನ ಕೊನೆಯ ಚುನಾವಣೆ ಎನ್ನುವುದು ಅಭ್ಯಾಸವಾಗಿ ಬಿಟ್ಟಿದೆ. ಹೀಗೇ ಹೇಳುತ್ತಿರಿ, ಜನರೇ ನಿಮ್ಮ ರಾಜಕೀಯಕ್ಕೆ ಅಂತ್ಯ ಹಾಡುತ್ತಾರೆ. ಬಾದಾಮಿಯಲ್ಲಿ ಕೂದಲೆಳೆಯ ಅಂತರದಲ್ಲಿ ಜೀವದಾನ ಪಡೆದಿರಿ. ಮುಂದೆ ನಿಮ್ಮವರೂ ನಿಮ್ಮನ್ನು ಕಾಪಾಡಲಾರರು. #ಬುರುಡೆರಾಮಯ್ಯ ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಬಿಜೆಪಿ ಕುಟುಕಿದೆ.

ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿತ್ತು

‘ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಅವರ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿತ್ತು. ಅರ್ಕಾವತಿ, ಕೆಪಿಎಸ್‌ಸಿ, ವಕ್ಫ್ ಆಸ್ತಿ ಕಬಳಿಕೆ, ಭೂ ಒತ್ತುವರಿ, ಸಿವಿಲ್ ಪೊಲೀಸ್ ನೇಮಕಾತಿ ಹಗರಣಗಳು ರಾರಾಜಿಸಿದ್ದವು. 'ಕೈ' ವಿರುದ್ಧ ಅಂದೇ ಬಿಜೆಪಿ ಧ್ವನಿ ಎತ್ತಿತ್ತು. ಸಿದ್ದು ಸ್ಮೃತಿಗೆ ಗರ ಬಡಿದಿದೆಯೇ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಸಿದ್ದರಾಮಯ್ಯನವರ ಆಪ್ತ ಮಹದೇವ ಪ್ರಸಾದ್ ಸಹಕಾರ ಸಚಿವರಾಗಿದ್ದಾಗ, ಕರ್ನಾಟಕ ಗೃಹ ಮಂಡಳಿ ಬಡವರಿಗೆಂದು ಮೀಸಲಿಟ್ಟಿದ್ದ ನಿವೇಶನಗಳ ಪೈಕಿ ಮೂರ್‍ಮೂರು ನಿವೇಶನಗಳನ್ನು ಅಕ್ರಮವಾಗಿ ಖರೀದಿ ಮಾಡಿರಲಿಲ್ಲವೆ? ಈ ಸಂಬಂಧ ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿರಲಿಲ್ಲವೇ? ಸಿದ್ದು ಸ್ಮೃತಿ ಮಂಕಾಗಿದೆಯೇ’ ಎಂದು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯನವರು ಕರ್ನಾಟಕ ಲೋಕಾಯುಕ್ತವನ್ನು ಸಮಾಧಿ ಮಾಡಿದ್ದಕ್ಕೆ ಬೆಟ್ಟದಷ್ಟು ಪುರಾವೆಗಳಿವೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲವನ್ನೂ ಬಯಲಿಗೆ ಎಳೆಯಲಿದೆ. ಏರುಧ್ವನಿಯಲ್ಲಿ ಮಾತನಾಡಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗುವುದಿಲ್ಲ’ ಎಂದು ಬಿಜೆಪಿ ತಿಳಿಸಿದೆ.
Published by:Pavana HS
First published: