ಕಾಂಗ್ರೆಸ್​​-ಜೆಡಿಎಸ್​​ನಲ್ಲಿ ಒಗ್ಗಟ್ಟಿಲ್ಲ: ಬಿಜೆಪಿ 15 ಕ್ಷೇತ್ರಗಳಲ್ಲೂ ಗೆಲ್ಲಲಿದೆ; ಸಿಎಂ ಯಡಿಯೂರಪ್ಪ

ನನ್ನಿಂದ ಸ್ಥಿರವಾದ ಆಡಳಿತ ಬೇಕೆಂದು ಜನ ಬಯಸಿದ್ದಾರೆ. ಹದಿನೈದು ಕ್ಷೇತ್ರದ ಜನ ನಿರೀಕ್ಷೆ ಮೀರಿ ಬೆಂಬಲ ಕೊಡುತ್ತಿದ್ದಾರೆ. ಒಂದು ಒಳ್ಳೆಯ ಆಡಳಿತ ಕೊಡುವ ಸಂಕಲ್ಪ ಮಾಡಿದ್ದೇನೆ. ಮುಂದಿನ ಬಜೆಟ್​ನಲ್ಲಿ ರೈತರಿಗೆ ಬೇಕಾದಷ್ಟು ಅನುದಾನ ಮೀಸಲಿಡುತ್ತೇನೆ- ಸಿಎಂ ಬಿ.ಎಸ್​ ಯಡಿಯೂರಪ್ಪ

news18-kannada
Updated:December 3, 2019, 11:43 AM IST
ಕಾಂಗ್ರೆಸ್​​-ಜೆಡಿಎಸ್​​ನಲ್ಲಿ ಒಗ್ಗಟ್ಟಿಲ್ಲ: ಬಿಜೆಪಿ 15 ಕ್ಷೇತ್ರಗಳಲ್ಲೂ ಗೆಲ್ಲಲಿದೆ; ಸಿಎಂ ಯಡಿಯೂರಪ್ಪ
ಸಿಎಂ ಬಿ.ಎಸ್​. ಯಡಿಯೂರಪ್ಪ
  • Share this:
ಹುಬ್ಬಳ್ಳಿ(ನ.03): ರಾಜ್ಯದ ಹದಿನೈದು ವಿಧಾನಸಭಾ ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಕ್ಷ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಮಂಗಳವಾರ(ಇಂದು) ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ, ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡಿ ಬಂದಿದ್ದೇನೆ. ಎಲ್ಲ ಕಡೆಯೂ ಬಿಜೆಪಿ ಪರ ಅಲೆಯಿದೆ. ಹಾಗಾಗಿ ಜನ ಬಿಜೆಪಿಗೆ ಮತ ನೀಡಿ ಗೆಲ್ಲಿಸಲಿದ್ಧಾರೆ ಎಂದರು.

ಕಾಂಗ್ರೆಸ್- ಜೆಡಿಎಸ್‌ನವ್ರು ಒಗ್ಗಟ್ಟಾಗಿದ್ದೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅಂತಹ ಯಾವುದೇ ಬೆಳವಣಿಗೆಯೂ ಕಣ್ಣಿಗೆ ಕಾಣುತ್ತಿಲ್ಲ. ಕಾಂಗ್ರೆಸ್​-ಜೆಡಿಎಸ್ ಒಗ್ಗಟ್ಟಾಗಿಲ್ಲ. ಈ ಬಗ್ಗೆ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಒಂದು ಹೇಳಿಕೆ ನೀಡಿದರೆ, ಇನ್ನೊಂದೆಡೆ ಮಾಜಿ ಪ್ರಧಾನಿ  ದೇವೇಗೌಡರು ಮತ್ತೊಂದು ಹೇಳಿಕೆ ನೀಡುತ್ತಾರೆ. ನಾನು ಈ ನಾಟಕಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಕುಟುಕಿದ್ದಾರೆ.

ನನ್ನಿಂದ ಸ್ಥಿರವಾದ ಆಡಳಿತ ಬೇಕೆಂದು ಜನ ಬಯಸಿದ್ದಾರೆ. ಹದಿನೈದು ಕ್ಷೇತ್ರದ ಜನ ನಿರೀಕ್ಷೆ ಮೀರಿ ಬೆಂಬಲ ಕೊಡುತ್ತಿದ್ದಾರೆ. ಒಂದು ಒಳ್ಳೆಯ ಆಡಳಿತ ಕೊಡುವ ಸಂಕಲ್ಪ ಮಾಡಿದ್ದೇನೆ. ಮುಂದಿನ ಬಜೆಟ್​ನಲ್ಲಿ ರೈತರಿಗೆ ಬೇಕಾದಷ್ಟು ಅನುದಾನ ಮೀಸಲಿಡುತ್ತೇನೆ. ರೈತರು ತಮ್ಮ ಸಮಸ್ಯೆಗಳಿಂದ ಹೊರ ಬಂದು, ನೆಮ್ಮದಿ ಜೀವನ ಮಾಡುವಂತ ಯೋಜನೆಗಳನ್ನು ಘೋಷಣೆ ಮಾಡಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಜೆಪಿ ದುಡ್ಡು, ಕಾಂಗ್ರೆಸ್​​ಗೆ ವೋಟು: 15 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದ ಸಿದ್ದರಾಮಯ್ಯ 

ಮುಂಬರುವ ಬಜೆಟ್​​ನಲ್ಲಿ ರಾಜ್ಯಕ್ಕೆ ಹೊಸ ಯೋಜನೆ ಘೋಷಿಸುವ ಪ್ರಯತ್ನ ಮಾಡುತ್ತೇನೆ. ಕಾಂಗ್ರೆಸ್‌- ಜೆಡಿಎಸ್ ತಮಗೆ ಬಹುಮತವಿದೆ ಅನ್ನುತ್ತಾರೆ. ಇವರ ಯೋಗ್ಯತೆಗೆ ಎರಡೂ ಪಕ್ಷ ಸೇರಿ ರಾಜ್ಯಸಭೆಗೆ ಒಂದು ಕ್ಯಾಂಡಿಡೇಟ್ ಹಾಕಲು ಆಗಿಲ್ಲ. ರಾಜ್ಯಸಭೆಗೆ ಬಿಜೆಪಿಯಿಂದ ರಾಮಮೂರ್ತಿ ಅವಿರೋಧವಾಗಿ ಗೆದ್ದಾಗಿದೆ. ಒಗ್ಗಟ್ಟಿದೆ ಎನ್ನುವ ಕಾಂಗ್ರೆಸ್- ಜೆಡಿಎಸ್ ನಾಯಕರು ಸೋಲೊಪ್ಪಿಕೊಂಡು ಆಗಿದೆ ಎಂದು ವ್ಯಂಗ್ಯವಾಡಿದರು.

ಇನ್ನು ನಾನು ರಾಜೀನಾಮೆ ಕೊಡುತ್ತೇನೆ ಎಂಬ ಹೇಳಿಕೆಗೆ ಯಾವುದೇ ಆಧಾರವಿಲ್ಲ. ವಿರೋಧ ಪಕ್ಷ ನಾಯಕರ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ಸಿಗರಿಗೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಪ್ರಶ್ನೆಗೆ ಜನರೇ ಉತ್ತರ ಕೊಡುತ್ತಾರೆ. ಅವರು ಯಾರು ಬಗ್ಗೆಯೂ ಮಾತಾಡದೆ ಶಾಂತವಾಗರಲಿ ಎಂದು ಸಿದ್ದರಾಮಯ್ಯಗೆ ಕಿವಿಮಾತು ಹೇಳಿದರು.
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ