ಕರ್ನಾಟಕ ಉಪಚುನಾವಣೆ; ಸಿವೋಟರ್​​ ಸಮೀಕ್ಷೆ ಪ್ರಕಟ; ಬಿಜೆಪಿಗೆ ಮೇಲುಗೈ, ಕಾಂಗ್ರೆಸ್​​-ಜೆಡಿಎಸ್​​ಗೆ ಭಾರೀ ಮುಖಭಂಗ

ಆದರೀಗ, ಸಂಜೆ ಮತದಾನ ಮುಕ್ತಾಯ ಆಗುತ್ತಿದ್ದಂತೆಯೇ ಸಿವೋಟರ್ ಚುನಾವಣೋತ್ತರ ಸಮೀಕ್ಷೆ ನಡೆಸಿದೆ. ಈ ಚುನಾವಣೋತ್ತರ ಸಮೀಕ್ಷೆ ಭವಿಷ್ಯದಂತೆ ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಸರ್ಕಾರ ಸೇಫ್​​ ಎನ್ನಲಾಗುತ್ತಿದೆ.

news18-kannada
Updated:December 5, 2019, 8:59 PM IST
ಕರ್ನಾಟಕ ಉಪಚುನಾವಣೆ; ಸಿವೋಟರ್​​ ಸಮೀಕ್ಷೆ ಪ್ರಕಟ; ಬಿಜೆಪಿಗೆ ಮೇಲುಗೈ, ಕಾಂಗ್ರೆಸ್​​-ಜೆಡಿಎಸ್​​ಗೆ ಭಾರೀ ಮುಖಭಂಗ
ಮಾಜಿ ಸಿಎಂ ಸಿದ್ದರಾಮಯ್ಯ, ಬಿಎಸ್​ವೈ, ಎಚ್​ಡಿಕೆ
 • Share this:
ಬೆಂಗಳೂರು(ಡಿ.05): ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಮುಗಿದಿದೆ. ಈಗಾಗಲೇ ಸುಮಾರು ಶೇ.65ರಷ್ಟು ಮತದಾನ ದಾಖಲಾಗಿದ್ದು, ಇದೇ ಡಿಸೆಂಬರ್​​ 9ನೇ ತಾರೀಕಿನಂದು ಫಲಿತಾಂಶ ಹೊರಬೀಳಲಿದೆ. ಆದರೀಗ, ಸಂಜೆ ಮತದಾನ ಮುಕ್ತಾಯ ಆಗುತ್ತಿದ್ದಂತೆಯೇ ಸಿವೋಟರ್ ಚುನಾವಣೋತ್ತರ ಸಮೀಕ್ಷೆ ನಡೆಸಿದೆ. ಈ ಚುನಾವಣೋತ್ತರ ಸಮೀಕ್ಷೆ ಭವಿಷ್ಯದಂತೆ ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಸರ್ಕಾರ ಸೇಫ್​​ ಎನ್ನಲಾಗುತ್ತಿದೆ. ಬಿಜೆಪಿಗೆ 9- 12, ಕಾಂಗ್ರೆಸ್‌ಗೆ 3-6 ಮತ್ತು ಜೆಡಿಎಸ್ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಲಿದೆ. ಇದೀಗ ಸಿವೋಟರ್​​ ಸಮೀಕ್ಷೆಯೂ ಕಾಂಗ್ರೆಸ್​​-ಜೆಡಿಎಸ್​ ಮರುಮೈತ್ರಿ ಕನಸು ಭಗ್ನಗೊಳಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಸಿವೋಟರ್ ಸಮೀಕ್ಷೆ:
  • ಬಿಜೆಪಿ 9-12

  • ಕಾಂಗ್ರೆಸ್ 3-6
  • ಜೆಡಿಎಸ್ 0-1

  • ಇತರರು 0-1
ಕ್ಷೇತ್ರವಾರು ಗೆಲುವು ಹೀಗಿದೆ:

 • ಹೊಸಕೋಟೆ- ಬಿಜೆಪಿ

 • ವಿಜಯನಗರ- ಬಿಜೆಪಿ

 • ಕಾಗವಾಡ- ಬಿಜೆಪಿ

 • ಹಿರೇಕೆರೂರು- ಬಿಜೆಪಿ

 • ಮಹಾಲಕ್ಷ್ಮೀ ಲೇಔಟ್- ಬಿಜೆಪಿ

 • ಯಶವಂತಪುರ- ಬಿಜೆಪಿ

 • ಕೆಆರ್ ಪುರಂ- ಬಿಜೆಪಿ

 • ಗೋಕಾಕ್- ಬಿಜೆಪಿ

 • ಅಥಣಿ- ಬಿಜೆಪಿ

 • ರಾಣೆಬೆನ್ನೂರು- ಬಿಜೆಪಿ/ಕಾಂಗ್ರೆಸ್

 • ಚಿಕ್ಕಬಳ್ಳಾಪುರ- ಬಿಜೆಪಿ/ಕಾಂಗ್ರೆಸ್

 • ಶಿವಾಜಿನಗರ- ಬಿಜೆಪಿ/ಕಾಂಗ್ರೆಸ್

 • ಕೆಆರ್ ಪೇಟೆ- ಕಾಂಗ್ರೆಸ್/ಜೆಡಿಎಸ್

 • ಯಲ್ಲಾಪುರ- ಕಾಂಗ್ರೆಸ್

 • ಕೆಆರ್ ಪುರ- ಕಾಂಗ್ರೆಸ್

 • ಹುಣಸೂರು- ಕಾಂಗ್ರೆಸ್


ಇದನ್ನೂ ಓದಿ: ಸಪ್ತ’ ಸಾಗರವ ದಾಟುತ್ತಿದೆ ‘ರಂಗಪಯಣ’; ಡಿ.19ಕ್ಕೆ ಸೋಮಾಲಿಯಾ ಕಡಲ್ಗಳ್ಳರು ನಾಟಕ ಪ್ರದರ್ಶನ
First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading