ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Aassembly Election 2023) ಸಮೀಪಿಸುತ್ತಿದ್ದಂತೆ ಆಡಳಿತ ರೂಢ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ನಾಯಕರ ನಡುವಿನ ವಾಗ್ದಾಳಿ ಜೋರಾಗಿದೆ. ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷದ ವಿರುದ್ಧ ಇರುವ ವಿರೋಧಿ ಅಲೆಯನ್ನು ಬಳಸಿಕೊಳ್ಳುವ ತವಕದಲ್ಲಿದ್ದಾರೆ. ಇತ್ತ ಬಿಜೆಪಿ ಪಕ್ಷ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮತ್ತೊಮ್ಮೆ ಜನರ ಮುಂದಿಟ್ಟು ಚುನಾವಣೆಗೆ ಸಿದ್ಧತೆ ನಡೆಸಿದೆ. ಈ ನಡುವೆ ಆಡಳಿತರ ರೂಢ ಬಿಜೆಪಿ ಸರ್ಕಾರದವ ವಿರುದ್ಧ ಕಾಂಗ್ರೆಸ್ ಸಾಲು ಸಾಲು ಅಭಿಯಾನಗಳನ್ನು ಮಾಡುತ್ತಿದೆ. ಸದ್ಯ ನಡುವೆ ಮತ್ತೊಂದು ಅಭಿಯಾನ ಸೇರ್ಪಡೆಯಾಗಿದ್ದು, ಈ ಬಾರಿ ಬಿಜೆಪಿ, ಕಾಂಗ್ರೆಸ್ ವಿರುದ್ಧ ಥಟ್ ಅಂತ ಹೇಳಿ ಎಂಬ ಅಭಿಯಾನವನ್ನು ಆರಂಭ ಮಾಡಿದೆ.
ಹೌದು,ಟ್ವಿಟರ್ ನಲ್ಲಿ ಎರಡು ಪಕ್ಷಗಳು ಥಟ್ ಅಂತ ಹೇಳಿ ಎಂಬ ಅಭಿಯಾನವನ್ನು ಶುರು ಮಾಡಿವೆ. ಹಣದಾಸೆಗೆ ಶಿಕ್ಷಕರ ಸ್ಥಾನಕ್ಕೆ ಅರ್ಹರಲ್ಲದವರನ್ನು ಶಿಕ್ಷಕರನ್ನಾಗಿ ನೇಮಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಬುಡಮೇಲು ಮಾಡಲು ಹೊರಟವರು ಯಾರು? ಎಂದು ಪ್ರಶ್ನಿಸಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಎಂಪಿ ಪಾಟೀಲ್ ಸೇರಿದಮತೆ ತನ್ವೀರ್ ಶೇಠ್ ಅವರ ಫೋಟೋಗಳನ್ನು ಶೇರ್ ಮಾಡಿದೆ.
ಥಟ್ ಅಂತ ಹೇಳಿ !
ಹಣದಾಸೆಗೆ ಶಿಕ್ಷಕರ ಸ್ಥಾನಕ್ಕೆ ಅರ್ಹರಲ್ಲದವರನ್ನು ಶಿಕ್ಷಕರನ್ನಾಗಿ ನೇಮಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಬುಡಮೇಲು ಮಾಡಲು ಹೊರಟವರು ಯಾರು? #ಥಟ್ಅಂತಹೇಳಿ #CorruptCongress pic.twitter.com/P8ehrrHfQL
— BJP Karnataka (@BJP4Karnataka) January 7, 2023
ಇನ್ನು, ದಿನಕ್ಕೊಂದು ಪ್ರಶ್ನೆಯನ್ನು ರಾಜ್ಯ ಜನರ ಮುಂದಿಡುತ್ತಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆದ ಘಟನೆಗಳನ್ನು ಮರಳಿ ನಪಿಸುತ್ತಿದೆ. ಶರತ್ ಮಡಿವಾಳ, ಪ್ರವೀಣ್ ಪೂಜಾರಿ ಮತ್ತಿತರ ಹಿಂದೂ ಕಾರ್ಯಕರ್ತರ ಕೊಲೆಯಿಂದ ಅವರ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದವರು ಯಾರು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ಯುಟಿ ಖಾದರ್ ಹಾಗೂ ಬಿಕೆ ಹರಿಪ್ರಸಾದ್ ಅವರ ಫೋಟೋಗಳನ್ನು ಶೇರ್ ಮಾಡಿದೆ.
ಥಟ್ ಅಂತ ಹೇಳಿ!
ರಾಜ್ಯ @BJP4Karnataka ಸರ್ಕಾರವನ್ನು ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಜನ ಕರೆಯುತ್ತಾರೆ?
— M B Patil (@MBPatil) January 8, 2023
ಥಟ್ ಅಂತ ಹೇಳಿ !
ವಕ್ಫ್ ಮಂಡಳಿಗೆ ಸೇರಿದ ಅಂದಾಜು 2.30 ಲಕ್ಷ ಕೋಟಿ ರೂಪಾಯಿ ಮೌಲ್ಯದ 29,000 ಎಕರೆ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿತ್ತು. ಈ ಪ್ರಕರಣದ ಭೂಗಳ್ಳ ಯಾರು? #CorruptCongress #ಥಟ್ಅಂತಹೇಳಿ pic.twitter.com/KukKUGwjsd
— BJP Karnataka (@BJP4Karnataka) January 6, 2023
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಸುತ್ತಿರೋ ಬಗ್ಗೆಯೂ ಆರೋಪಿಸಿರೋ ಬಿಜೆಪಿ, ದಳಕ್ಕೆ ಕೈ ಕೊಟ್ಟವರು, ಸ್ವಕ್ಷೇತ್ರಕ್ಕೆ ಕೈ ಕೊಟ್ಟವರು, ಬಾದಾಮಿಗೆ ಕೈ ಕೊಟ್ಟವರು, ರಾಜ್ಯಕ್ಕೆ ಕೈ ಕೊಟ್ಟವರು ಸಿದ್ದರಾಮಯ್ಯ. ಈ ಬಾರಿ ಇವರಿಗೆ ಕೈ ಕೊಡಲು ವೇದಿಕೆ ಸಿದ್ಧ ಮಾಡಿದ್ದಾರೆ ಡಿಕೆ ಶಿವಕುಮಾರ್ ಎಂದು ವ್ಯಂಗ್ಯವಾಡಿದೆ.
ಥಟ್ ಅಂತ ಹೇಳಿ.
ಶರತ್ ಮಡಿವಾಳ, ಪ್ರವೀಣ್ ಪೂಜಾರಿ ಮತ್ತಿತರ ಹಿಂದೂ ಕಾರ್ಯಕರ್ತರ ಕೊಲೆಯಿಂದ ಅವರ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದವರು ಯಾರು?#ಥಟ್ಅಂತಹೇಳಿ #CriminalCongress pic.twitter.com/RlOa9Cq3nN
— BJP Karnataka (@BJP4Karnataka) January 8, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ