ಚಿತ್ರದುರ್ಗ(ಜು.02): ರಾಜ್ಯದ ಜನ ಬಿಜೆಪಿಯ (BJP) ಭ್ರಷ್ಟಾಚಾರ ಆಡಳಿತಕ್ಕೆ ಭ್ರಮನಿರಸರಾಗಿದ್ದಾರೆ, ಬಿಜೆಪಿ ಸರ್ಕಾರ ಇಡಿ (ED), ಐಟಿ, ಸಿಬಿಐಯನ್ನು (CBI) ದುರ್ಬಳಕೆ ಮಾಡಿಕೊಳ್ಳುತ್ತಾ, ಸೇಡಿನ ರಾಜಕೀಯವನ್ನು ಮಾಡ್ತಿದೆ, ತನಿಖಾ ಸಂಸ್ಥೆಗಳನ್ನ ಬಿಜೆಪಿಯ ಮುಂಚೂಣಿ ಘಟಕಗಳಾಗಿ ಮಾಡ್ಕೊಂಡಿದ್ದಾರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸುಮಾರು 5000 ಕೇಸ್ ಓಪನ್ ಮಾಡಿದ್ದಾರೆ, ಅದ್ರಲ್ಲಿ ಎಲ್ಲಾ ವಿಪಕ್ಷದ ಮುಖಂಡರ ಮೇಲೆ ಜಾಸ್ತಿ ಹಾಕಿದ್ದಾರೆ, ರಾಹುಲ್ ಗಾಂಧಿ ಅವರನ್ನು 50 ಗಂಟೆ ವಿಚಾರಣೆ ಮಾಡಿದ್ದಾರೆ, 3 ಗಂಟೆಯಲ್ಲಿ ಮುಗಿಯುವ ತನಿಖೆಯನ್ನು 50 ಗಂಟೆ ಮಾಡಿದ್ದಾರೆ ಎಂದು ಚಿತ್ರದುರ್ಗದಲ್ಲಿ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಘೋಷ್ಠಿ ಮಾಡಿ, ಮಾತನಾಡಿದ ಅವರು, ಎಲ್ಲರೂ ಬರೆದಿಟ್ಟುಕೊಳ್ಳಿ ಯಾರು ಏನೇ ಹೇಳಿದ್ರು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ, ರಾಜ್ಯದ ಜನ ಬಿಜೆಪಿಯ ಭ್ರಷ್ಟಾಚಾರ ಆಡಳಿತಕ್ಕೆ ಭ್ರಮನಿರಸರಾಗಿದ್ದಾರೆ. ಇತ್ತೀಚೆಗೆ ಬಿಜೆಪಿಯವರು ರಾಹುಲ್ ಗಾಂಧಿಯವರನ್ನು ಹೆದರಿಸುವ ತಂತ್ರ ರೂಪಿಸಿದ್ದಾರೆ.
ಕಾಂಗ್ರೆಸ್ ನವರು ಬ್ರಿಟೀಷರಿಗೆ ಹೆದರಲಿಲ್ಲ ಇನ್ನೂ ನಿಮಗೆ ಹೆದರುತ್ತೀವಾ? ಹೆದರಲ್ಲ, ಬಗ್ಗಲ್ಲ, ಜಗ್ಗಲ್ಲ, ನಮ್ಮ ಹೋರಾಟ ಯಾವಾಗಲೂ ನಿರಂತರ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ಮಾಡಿದ್ರು. ಇನ್ನೂ ಸೋನಿಯಾ ಗಾಂಧಿಯವರಿಗೂ ಹೆದರಿಸುವ ತಂತ್ರ ಮಾಡ್ತಿದ್ದಾರೆ.
ಚುನಾವಣೆ ಬಂದಾಗ ಡಿಕೆಶಿ ವಿಚಾರಣೆ ಶುರು
ಚುನಾವಣೆ ಬರುತ್ತೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನು ವಿಚಾರಣೆಗೆ ಕರೆದಿದ್ದಾರೆ, ನೋಡಿ ಸ್ವಾಮಿ ನೀವು ಏನು ಮಾಡಿದ್ರು ಕಾಂಗ್ರೆಸ್ ಇದುಕ್ಕೆಲ್ಲಾ ಹೆದರಲ್ಲ.ಜನ ಇವತ್ತು ಬದಲಾವಣೆ ಬಯಸ್ತಿದ್ದಾರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ನಾಚಿಕೆ ಆಗಬೇಕು ಬಿಜೆಪಿ ಸರ್ಕಾರಕ್ಕೆ ಹೆದರಿಸುವ ತಂತ್ರ ಮಾಡ್ತಿದ್ದಾರೆ. ಇದಕ್ಕೆಲ್ಲಾ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಉತ್ತರ ಕೊಡುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: Eknath Shinde: ಕರ್ನಾಟಕ ಜೈಲಲ್ಲಿ 40 ದಿನ ಕಳೆದಿದ್ದ 'ಮಹಾ' CM ಏಕನಾಥ ಶಿಂಧೆ; ಗಡಿ ವಿವಾದ ಮತ್ತೆ ಗರಿಗೆದರೋ ಸಾಧ್ಯತೆ
2015 ರಲ್ಲಿಯೇ ಡೆಕ್ಕನ್ ಹೆರಾಲ್ಡ್ ಕೇಸ್ ಕ್ಲೋಸ್
ಅಲ್ಲದೇ ಕಳೆದ 2015 ರಲ್ಲಿಯೇ ನ್ಯಾಷನಲ್ ಹೆರಾಲ್ಡ್ ಕೇಸ್ ಕ್ಲೋಸ್ ಆಗಿತ್ತು, ಸುಬ್ರಮಣ್ಯ ಸ್ವಾಮಿ ಹಾಕಿದ್ದ ಕೇಸ್ ಆಗೆಯೇ ಕ್ಲೋಸ್ ಆಗಿತ್ತು, ಅದು ಯಾರ ಸ್ವತ್ತು ಅಲ್ಲ ಟ್ರಸ್ಟಿ ಸ್ವತ್ತು, ಬೇಕಂತಲೇ 2015ರಲ್ಲಿ ಕ್ಲೋಸ್ ಆಗಿದ್ದ ಕೇಸನ್ನ ರೀ ಓಪನ್ ಮಾಡಿಸಿದ್ರು, ಆ ಮೂಲಕ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ದ್ವೇಷದ ರಾಜಕೀಯ ಮಾಡ್ತಿದೆ, ನಮ್ಮ ಕಾಲದಲ್ಲಿ ನಾವು ದ್ವೇಷದ ರಾಜಕೀಯ ಯಾವತ್ತೂ ಮಾಡಿಲ್ಲ ಎಂದು ಎದೆ ತಟ್ಟಿ ಹೇಳ್ತೀವಿ ಎಂದಿದ್ದಾರೆ.
ಇದನ್ನೂ ಓದಿ: Drinking Water Problem: ಕುಡಿಯಲು ನೀರು ಸಿಗದೆ ನರಕಯಾತನೆ, ಪ್ರಾಣ ಲೆಕ್ಕಿಸದೆ ಬಾವಿಗಿಳಿದು ನೀರು ತರೋ ಇವರ ಪಾಡು ಕೇಳೋರಿಲ್ಲ
70 ವರ್ಷ ಅಧಿಕಾರದಲ್ಲಿ ಇದ್ರು ಇಂತಹ ರಾಜಕೀಯ ಕಾಂಗ್ರೆಸ್ ಮಾಡ್ಲಿಲ್ಲ, ಇಡೀ ದೇಶದಲ್ಲಿ ಮೋದಿ ಸರ್ಕಾರ ಭಯದ ವಾತಾವರಣ ಸೃಷ್ಟಿ ಮಾಡಿದೆ ನಾಚಿಕೆ ಆಗಬೇಕು ಅವರಿಗೆ ಎಂದು ಕಿಡಿ ಕಾರಿದ್ರು. ಇನ್ನೂ ಕಾಂಗ್ರೇಸ್ ಮೂರನೆ ಸ್ಥಾನಕ್ಕೆ ಹೋಗುತ್ತದೆ ಎಂಬ ಜೆಡಿಎಸ್ ರಾಜ್ಯಾದ್ಯಕ್ಷ, ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಭದ್ರಾವತಿಯಲ್ಲಿ ಇಬ್ರಾಹಿಂ ಐದನೇ ಸ್ಥಾನಕ್ಕೆ ಹೋಗಿದ್ದರು, ಪಕ್ಷ ಎರಡು ಬಾರಿ MLC ಮಾಡಿದ್ದಾರೆ, ಶಾಸಕ ಸಂಗಮೇಶ್ ಬದಲು ಟಿಕೇಟ್ ನೀಡಿದ್ದರು ಎಂದು ಲೇವಡಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ