• Home
  • »
  • News
  • »
  • state
  • »
  • Karnataka Politics: ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಪ್ರಿಯಾಂಕ್ ಖರ್ಗೆ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ: ಕೈ ನಾಯಕನ ಆರೋಪ!

Karnataka Politics: ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಪ್ರಿಯಾಂಕ್ ಖರ್ಗೆ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ: ಕೈ ನಾಯಕನ ಆರೋಪ!

ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ

ಕಲಬುರಗಿಯಲ್ಲಿ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಸುದ್ದಿಗೋಷ್ಟಿ ನಡೆಸಿ ಬಿಜೆಪಿ ಸರ್ಕಾರ ವ್ಯೆವಸ್ಥಿತವಾಗಿ ಪ್ರಿಯಾಂಕ್ ಖರ್ಗೆ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಗುಡುಗಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ಕಲಬುರಗಿ(ನ.12): ಕಲಬುರಗಿಯಲ್ಲಿ ಕಾಂಗ್ರೆಸ್​ (Congress) ಕಮಲದ (BJP) ಮಧ್ಯೆ ವಾಕ್ಸಮರ ಮುಂದುವರೆದಿದೆ. ಬಿಜೆಪಿಯ ಮುಖಂಡ ಮಣಿಕಂಠ ರಾಠೋಡ್ ಪ್ರಿಯಾಂಕ್ ಖರ್ಗೆಯನ್ನು (Mallikarjun Kharge) ಶೂಟ್ ಮಾಡುವ ಹೇಳಿಕೆ ನೀಡಿದ್ದಾರೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ (Kalaburagi) ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಸುದ್ದಿಗೋಷ್ಟಿ ನಡೆಸಿ ಬಿಜೆಪಿ ಸರ್ಕಾರ ವ್ಯೆವಸ್ಥಿತವಾಗಿ ಪ್ರಿಯಾಂಕ್ ಖರ್ಗೆ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಗುಡುಗಿದ್ದಾರೆ.


ಹೌದು ಬಿಜೆಪಿ ವಿರುದ್ಧ ಕಿಡಿ ಕಾರಿದ ಶರಣಪ್ರಕಾಶ್ ಸಮ್ಮಿಶ್ರ ಸರ್ಕಾರದಲ್ಲಿ ಪ್ರಿಯಾಂಕ್ ಖರ್ಗೆಗೆ ಸೆಕ್ಯೂರಿಟಿ ಇತ್ತು, ಸಮ್ಮಿಶ್ರ ಸರ್ಕಾರ ಹೋದ ಮೇಲೆ ಸೆಕ್ಯುರಿಟಿ ಹಿಂಪಡೆದರು. ಬಿಜೆಪಿಯ ಭ್ರಷ್ಟಾಚಾರವನ್ನು ನಿರಂತರವಾಗಿ ಪ್ರಿಯಾಂಕ್ ಖರ್ಗೆ ಬಯಲಿಗೆಳಿದಿದ್ದರು. ಪ್ರಿಯಾಂಕ್ ಬಿಜೆಪಿಯ ಭ್ರಷ್ಟಾಚಾರ ಬಯಲಿಗೆಳೆದ ಹಿನ್ನಲೆ ಬಿಜೆಪಿ ಸೇಡು ತೀರಿಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: National Herald Case: ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಇಡಿ ಸಮನ್ಸ್ ಜಾರಿಗೊಳಿಸಿದ್ದೇಕೆ?


ಪ್ರಿಯಾಂಕ್ ಖರ್ಗೆ ಸೆಕ್ಯುರಿಟಿ ಹಿಂಪಡೆದ ಮೇಲೆ ಮೂರು ಬಾರಿ ಕೊಲೆ ಬೆದರಿಕೆ ಬಂದಿದೆ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎರಡು ಎಫ್​ಐಆರ್ ದಾಖಲಾಗಿದೆ. ಈಗ ಬಿಜೆಪಿ ಸರ್ಕಾರ ಬಿಜೆಪಿಯ ಮುಖಂಡರ ಮೂಲಕವೇ ಶೂಟ್ ಮಾಡುತ್ತೇವೆ ಎಂದು ಹೇಳಿಸಿದ್ದಾರೆ. ಬಿಜೆಪಿಯೇ ಪ್ರಿಯಾಂಕ್ ಖರ್ಗೆಯನ್ನು ಕೊಲೆ ಮಾಡಿಸುವಂತಹ ಕೆಲಸಕ್ಕೆ ಮುಂದಾಗಿದೆ. ಕೊಲೆ ಬೆದರಿಕೆ ಸಂಬಂಧ ಗೃಹ ಸಚಿವರಿಗೆ ಮನವರಿಕೆ ಮಾಡಿ ಸೆಕ್ಯುರಿಟಿ ಕೊಡುವಂತೆ ಹೇಳಿದ್ದರು. ಆದ್ರೆ ಇವಾಗ ಬಿಜೆಪಿ ಸೆಕ್ಯೂರಿಟಿ ಹಿಂಪಡೆದು ಬಿಜೆಪಿಯ ಮುಖಂಡರ ಮೂಲಕ ಕೊಲೆ ಮಾಡಿಸಲು ಮುಂದಾಗಿದ್ದಾರೆ ಎಂದಿದ್ದಾರೆ.


ಇದನ್ನೂ ಓದಿ: National Herald Case: ಇಂದು ಮತ್ತೊಮ್ಮೆ ಸೋನಿಯಾ ಗಾಂಧಿಗೆ ಇಡಿ ವಿಚಾರಣೆ!


ಪ್ರಿಯಾಂಕ್ ಖರ್ಗೆ ಬಿಟ್ ಕಾಯಿನ್ ಹಗರಣದಲ್ಲಿ ಸರ್ಕಾರದ ದೊಡ್ಡ ದೊಡ್ಡ ನಾಯಕರು ಭಾಗಿಯಾಗಿದ್ದರೆ ಎಂದು ಹೇಳಿದ್ದಾರೆ. ಬಿಜೆಪಿಯ ಕಾಂಜಿ ಪೀಂಜಿಯವರಿಗೆಲ್ಲಾ ಸೆಕ್ಯೂರಿಟಿ ಕೊಟ್ಟಿದ್ದೀರಿ, ಸಿಎಂ ಕಲಬುರಗಿಗೆ ಬರ್ತಿದ್ದಾರೆ ನಮ್ಮ ಕಾರ್ಯಕರ್ತರು ಗಲಾಟೆ ಮಾಡಬಹುದು. ಮಣಿಕಂಠ ರಾಠೋಡ್ ಯಾರು?, ಮಣಿಕಂಠ ರಾಠೋಡ್​ರನ್ನ ಗಡಿಪಾರು ಮಾಡಿದ್ದು ಯಾರು? ಮಣಿಕಂಠ ರಾಠೋಡ್ ಮೇಲೆ ಎಷ್ಟು ಕೇಸ್​ಗಳು ಇದೆ ಅಂತಾ ಗೊತ್ತಿಲ್ಲ ಎಂದಿದ್ದಾರೆ.


ಬಿಜೆಪಿ ಮುಖಂಡ ಹೇಳಿದ್ದೇನು?


ಪ್ರಿಯಾಂಕ್ ವಿರುದ್ಧ ಕಿಡಿ ಕಾರಿದ್ದ ಬಿಜೆಪಿ ನಾಯಕ ಭಾರತ ದೇಶ ಉಳಿಸಲು ಮಿಲಿಟರಿ ಸೈನಿಕರು ಗಡಿಗಳಲ್ಲಿ ಹೇಗೆ ನಿಂತಿದ್ದಾರೋ ಅದೇ ರೀತಿ ನಾವು ಸಹ ಸಮಾಜ ಮತ್ತು ಬಡವರ ಸಲುವಾಗಿ ಮಿಲಿಟಿರಿಯಂತೆಯೇ ನಿಂತಿದ್ದೇವೆ. ನಿಮಗೆ ಎಕೆ-47 ನಿಂದ ಶೂಟ್‌ ಮಾಡುವುದು ಇದೆಯಾ ? ಅಥವಾ ತೋಪ್‌ನಿಂದ ಶೂಟ್‌ ಮಾಡೋದಿದೆಯಾ? ನೀವು ಶೂಟ್‌ ಮಾಡಿ ನಾವು ಸಾಯೋಕು ರೆಡಿ ಇದ್ದೀವಿ. ನಾವೂ ನಿಮಗೆ ಶೂಟ್‌ ಮಾಡೋಕೂ ರೆಡಿ ಇದ್ದೀವಿ ಎಂದಿದ್ದರು.


ಡಾ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಕಾರಣಕ್ಕೆ ಪ್ರಿಯಾಂಕ್‌ಗೆ ಆನೆಬಲ ಬಂದಿರುವಂತೆ ಮಾತನಾಡುತ್ತಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ತಾವು ಹೆದರುವ ಆಸಾಮಿಯಲ್ಲ. ನಿಮಗೆ ಕೌಂಟರ್‌ ನೀಡಲು ನಾನೊಬ್ಬನೇ ಸಾಕು. ನಿಮಗೆ ಧೈರ್ಯವಿದ್ದರೆ ತಾನು ತಿರುಗಾಡದಂತೆ ಮಾಡಿ ನೋಡಿ ಎಂದು ಸವಾಲು ಹಾಕಿದ್ದರು.

Published by:Precilla Olivia Dias
First published: