Karnataka Politics: ಸ್ವಕ್ಷೇತ್ರದಲ್ಲೇ ಸತೀಶ್​ ಜಾರಕಿಹೊಳಿ ಕಟ್ಟಿ ಹಾಕಲು ರಣತಂತ್ರ? ಬಿಜೆಪಿ ಮಾಸ್ಟರ್ ಪ್ಲಾನ್ ಏನು?

ಬೆಳಗಾವಿ 18 ವಿಧಾನಸಭೆ ಕ್ಷೇತ್ರ ಹಾಗೂ ರಾಜ್ಯ ಅನೇಕ ಕಡೆಯಲ್ಲಿ ಓಡಾಟ ನಡೆಸಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮಾಡುತ್ತಿರೋ ಸತೀಶ್​ ಜಾರಕಿಹೊಳಿಯನ್ನು ಸ್ವಕ್ಷೇತ್ರದಲ್ಲಿ ಕಟ್ಟಿ ಹಾಕಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

  • Share this:
ಬೆಳಗಾವಿ (ಆ.07): ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ (Assembly Election) ಇನ್ನೂ 9 ತಿಂಗಳು ಬಾಕಿ ಉಳಿದಿದೆ. ಈಗಿನಿಂದಲೇ ಯಾವ ನಾಯಕನನ್ನು ಹೇಗೆ ಕಟ್ಟಿ ಹಾಕಬೇಕು ಎನ್ನುವ ಪ್ಲಾನ್​ (Plan) ಆರಂಭವಾಗಿವೆ. ಬೆಳಗಾವಿ 18 ವಿಧಾನಸಭೆ ಕ್ಷೇತ್ರ ಹಾಗೂ ರಾಜ್ಯ ಅನೇಕ ಕಡೆಯಲ್ಲಿ ಓಡಾಟ ನಡೆಸಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ (Congress Party Organization) ಮಾಡುತ್ತಿರೋ ಸತೀಶ್​ ಜಾರಕಿಹೊಳಿಯನ್ನು ಸ್ವಕ್ಷೇತ್ರದಲ್ಲಿ ಕಟ್ಟಿ ಹಾಕಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಕಳೆದ ಚುನಾವಣೆಯಲ್ಲಿ ರಾಹುಕಾಲದಲ್ಲಿ ನಾಮಪತ್ರ (Nomination) ಸಲ್ಲಿಕೆ ಮಾಡಿ, ಕ್ಷೇತ್ರದಲ್ಲಿ ಪ್ರಚಾರ ನಡೆಸದೇ 2800 ಮತಗಳ ಅಂತರದಿಂದ ಗೆಲ್ಲುವ ಮೂಲಕ ಜಾರಕಿಹೊಳಿ ಇತಿಹಾಸ ಸೃಷ್ಟಿ ಮಾಡಿದ್ದರು.

ಸತೀಶ್​ ಜಾರಕಿಹೊಳಿ ಕಟ್ಟಿ ಹಾಕಲು ಪ್ಲಾನ್​

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಹಲವು ಕಾಂಗ್ರೆಸ್ ನಾಯಕರನ್ನು ಬಿಜೆಪಿ ಟಾರ್ಗೆಟ್ ಮಾಡಿದೆ. ಈ  ಪಟ್ಟಿಯಲ್ಲಿ ಇದ್ದಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ, ಮಾಜಿ ಸಚಿವ ಪ್ರಿಯಾಂಕ ಖರ್ಗೆ ಸೇರಿ ಹಲವರು ಇದ್ದಾರೆ ಎನ್ನಲಾಗಿದೆ.

ಯಮಕನಮರಡಿ ಕ್ಷೇತ್ರದಿಂದ ಸತತ ಮೂರು  ಸಲ ಸಹ ಸತೀಶ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.  ಕಳೆದ ಸಲ ಜಾರಕಿಹೊಳಿ ವಿರುದ್ಧ 2800 ಮತಗಳಿಂದ ಸೋತಿದ್ದ ಬಿಜೆಪಿಯ ಮಾರುತಿ ಅಷ್ಟಗಿಗೆ ಕೌಶಲ್ಯಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜತೆಗೆ ಯಮಕನಮರಡಿ ಕ್ಷೇತ್ರಕ್ಕೆ ಸಚಿವ ಉಮೇಶ ಕತ್ತಿ, ಶಾಸಕ ಅಭಯ ಪಾಟೀಲ್ ಉಸ್ತುವಾರಿ ನೇಮಕ ಮಾಡುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ.

ಇದನ್ನೂ ಓದಿ:Congress Tweet: ಹೆಣ ಕಂಡ್ರೆ ಓಡೋಡಿ ಬರೋ ಶೋಭಾ ಕರಂದ್ಲಾಜೆ ಸಮಸ್ಯೆಗಳಿಗೆ ಬಾಯಿ ಬಿಡಲ್ಲ ಯಾಕೆ?

ಬಿಜೆಪಿಯ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆಯಾಗಿದ್ದು ಶೀಘ್ರದಲ್ಲಿಯೇ ನೇಮಕಾತಿ ಆದೇಶ ಹೊರ ಬಿಳಲಿದೆ. ಯಮಕನಮರಡಿ ಕ್ಷೇತ್ರದಲ್ಲಿ ಪ್ರಭಾವ ಹೊಂದಿರೋ ಇಬ್ಬರು ನಾಯಕರು. 2008ರಲ್ಲಿ ಯಮಕನಮರಡಿ ಕ್ಷೇತ್ರ ರಚನೆಯ ಮೊದಲು ಹುಕ್ಕೇರಿ, ಬಾಗೇವಾಡಿ ಕ್ಷೇತ್ರದಲ್ಲಿ ಹಲವು ಗ್ರಾಮಗಳ ವ್ಯಾಪ್ತಿ ಇತ್ತು. ಸಚಿವ ಉಮೇಶ ಕತ್ತಿ, ಶಾಸಕ ಅಭಯ ಪಾಟೀಲ್ ಪ್ರಭಾವ ಹೊಂದಿರೋ ಕಾರಣಕ್ಕಾಗಿ ಇಬ್ಬರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡುವ ಮೂಲಕ ಜಾರಕಿಹೊಳಿ ಕಟ್ಟಿಹಾಕಲು ಪ್ಲ್ಯಾನ್ ಮಾಡಲಾಗಿದೆ.

ಯಾವುದೇ ಕ್ಷೇತ್ರ ಕೊಟ್ರು ಕೆಲಸ ಮಾಡಲು ಸಿದ್ದ

ಈ ಬಗ್ಗೆ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ್ ಮಾತನಾಡಿದ್ದು, ಯಮಕನಮರಡಿ ಕ್ಷೇತ್ರದ ಉಸ್ತುವಾರಿ ನೀಡಲು ಚರ್ಚೆ ನಡೆದಿದೆ. 2004ರಲ್ಲಿ ನಾನು ಬಾಗೇವಾಡಿ ಕ್ಷೇತ್ರದಿಂದ ಗೆದ್ದು ಶಾಸಕನಾಗಿದೆ. ಕ್ಷೇತ್ರ ಪುನರ್ ವಿಂಗಡನೆ ಬಳಿಕ ಬಾಗೇವಾಡಿ ಕ್ಷೇತ್ರ ಕೈಬಿಡಲಾಗಿದೆ. ಯಮನಮರಡಿ ಕ್ಷೇತ್ರದಲ್ಲಿ ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿ ಹೊಂದಿತ್ತು.

6 ಪಾಲಿಕೆ ವಾರ್ಡ್ ಗಳು ಬೆಳಗಾವಿ ಉತ್ತರ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದವು. ಆ ಭಾಗದ ಸಮಸ್ಯೆ, ಜನರ ನಿರ್ಣಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. 1990ರಿಂದಲೇ ಈ ಭಾಗದಲ್ಲಿ ನಾನು ಕೆಲಸ ಮಾಡಿದ್ದು ಜನರ ಸಂಪರ್ಕ ಇದೆ. ಮೂರು ಕ್ಷೇತ್ರ ಹಾಗೂ ಮತ್ತೆ ಯಾವುದೇ ಕ್ಷೇತ್ರದಲ್ಲಿ ಉಸ್ತುವಾರಿ ನೀಡಿದ್ರು ಕೆಲಸ ಮಾಡಲು ಸಿದ್ದ ಎಂದರು.

ಇದನ್ನೂ ಓದಿ: DK Brothers: ಸಿದ್ದರಾಮೋತ್ಸವ ಬಳಿಕ ಅಖಾಡಕ್ಕಿಳಿದ ಅಣ್ತಮ್ಮಾಸ್! ಒಂದೇ ಕಲ್ಲಿಗೆ 2 ಹಕ್ಕಿ

ಎಲ್ಲಾ ಸವಾಲ್ ಎದುರಿಸಲು ಸಿದ್ದ

ಬಿಜೆಪಿ ನಾಯಕರ ತಂತ್ರ ಬಗ್ಗೆ ಬೆಳಗಾವಿಯಲ್ಲಿ ಕೂಲ್ ಆಗಿ ಉತ್ತರ ಕೊಟ್ಟ ಸತೀಶ ಜಾರಕಿಹೊಳಿ, ನಮ್ಮ ಕ್ಷೇತ್ರದ ಮೇಲೆ ಬಿಜೆಪಿಯ ನಾಯಕರ ಹದ್ದಿನ ಕಣ್ಣು ಸಹ ಇಡಲಾಗಿದೆ. ಚುನಾವಣೆ ಅಂದ್ರೆ ಎಲ್ಲರಿಗೂ ಸಮಾನ ಅವಕಾಶ ಇದೆ. ನಾವು, ಅವರು ಗೆಲ್ಲಲ್ಲು ಪ್ರಯತ್ನ ಮಾಡುತ್ತೇವೆ.

ನಮ್ಮ ಪಕ್ಷದ ಕೆಲಸ ನಾವು ಮಾಡುತ್ತೇವೆ, ಅವರ ಪಕ್ಷದ ಕೆಲಸ ಅವರು ಮಾಡುತ್ತಾರೆ. ಒಂದು ವರ್ಷದ ಹಿಂದೆಯೆ ಈ ಬಗ್ಗೆ ಮಾಹಿತಿ. ಯಾವ ಬಿಲ್ಲು ಬಾಣ ತೆಗೆದುಕೊಂಡು ಹೋಗಬೇಕು ಎಂದು ನಾವು ಸಹ  ತಯಾರಿ ನಡೆಸಿದ್ದೇವೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಆಗೋ ವರೆಗೆ ನಾನೇ ಅಭ್ಯರ್ಥಿ. ಯಮಕನರಡಿ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎನ್ನುವ ಮೂಲಕ ಎಲ್ಲಾ ಸವಾಲ್ ಎದುರಿಸಲು ಸಿದ್ದ ಎಂದರು.
Published by:Pavana HS
First published: