ಅಧಿಕಾರದ ಗದ್ದುಗೆಯೇರಲು ಬಿಜೆಪಿ ಸರ್ಕಸ್​; ಕಾಂಗ್ರೆಸ್​-ಜೆಡಿಎಸ್​ ಗುದ್ದಾಟದ ಲಾಭ ಪಡೆಯಲು ರಣತಂತ್ರ

news18
Updated:September 4, 2018, 11:49 AM IST
ಅಧಿಕಾರದ ಗದ್ದುಗೆಯೇರಲು ಬಿಜೆಪಿ ಸರ್ಕಸ್​; ಕಾಂಗ್ರೆಸ್​-ಜೆಡಿಎಸ್​ ಗುದ್ದಾಟದ ಲಾಭ ಪಡೆಯಲು ರಣತಂತ್ರ
news18
Updated: September 4, 2018, 11:49 AM IST
ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 4): ಸ್ಥಳೀಯ ಸಂಸ್ಥೆಗಳಲ್ಲಿ ಸಮಬಲದ ಹಿನ್ನೆಲೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಪಕ್ಕಾ ಆಗಿದೆ. ಹಾಗೇ, ಮೈಸೂರು ಮಹಾನಗರ ಪಾಲಿಕೆಯಲ್ಲೂ ಅಧಿಕಾರ ಹಿಡಿಯಲು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ಜಿ.ಟಿ. ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಗುದ್ದಾಟದ ಲಾಭ ಪಡೆಯಲು ಸೂಚನೆ ನೀಡಿರುವ ಬಿಜೆಪಿ ಹೈಕಮಾಂಡ್​ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ರಣತಂತ್ರ ರೂಪಿಸಲು ತಿಳಿಸಿದೆ.

ಹೈಕಮಾಂಡ್​ ಸೂಚನೆಯಂತೆ ಬಿಜೆಪಿ ಸ್ಥಳೀಯ ನಾಯಕರು ಮೈಸೂರಿನ ಸ್ಥಳೀಯ ನಾಯಕರ ಮನವೊಲಿಕೆಗೆ ಮುಂದಾಗಿದ್ದಾರೆ. ರಾಜ್ಯದ ಎಲ್ಲ ಕ್ಷೇತ್ರಗಳ ಉಸ್ತುವಾರಿಗಳಿಗೂ ಅಧಿಕಾರಕ್ಕಾಗಿ ಪ್ರಯತ್ನ ನಡೆಸಲು ಸೂಚನೆ ನೀಡಿರುವ ರಾಜ್ಯ ಬಿಜೆಪಿ ನಾಯಕರು ಎಲ್ಲೆಲ್ಲಿ ಕಾಂಗ್ರೆಸ್-ಜೆಡಿಎಸ್ ಕಿತ್ತಾಟ ಇದೆಯೋ ಅಲ್ಲಿ ರಣತಂತ್ರ ರೂಪಿಸಲು ಆದೇಶಿಸಿದ್ದಾರೆ.

ರಣತಂತ್ರದ ಮೂಲಕವೇ ದೋಸ್ತಿ ಕುಸ್ತಿಯ ಲಾಭ ಪಡೆಯಲು ಯೋಜನೆ ರೂಪಿಸಿರುವ ಬಿಜೆಪಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ಸಿದ್ಧತೆ ನಡೆಸಿದೆ. ಹಲವು ಕಡೆಗಳಲ್ಲಿ ಸ್ಥಳೀಯ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್, ಜೆಡಿಎಸ್ ಟಿಕೆಟ್ ಗಿಟ್ಟಿಸಿದ್ದಾರೆ. ವೈಯಕ್ತಿಕ ವರ್ಚಸ್ಸಿನಿಂದ ಗೆದ್ದ ಬಿಜೆಪಿಯ ಮಾಜಿ ನಾಯಕರಿಗೆ ಗಾಳ ಹಾಕಲಾಗುತ್ತಿದ್ದು, ಪಕ್ಷೇತರರ ಬೆನ್ನು ಬಿದ್ದ ಬಿಜೆಪಿ ನಾಯಕರು ಶತಾತಗತಾಯ ಬಿಜೆಪಿ ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯಲು ರಣತಂತ್ರ ರೂಪಿಸುತ್ತಿದ್ದಾರೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ