'ನಿಖಿಲ್ ಕುಮಾರಸ್ವಾಮಿಯಿಂದ ನಾವು ಕಲಿಯಬೇಕು' ಸಿಎಂ ಮಗನನ್ನು ತೇಜಸ್ವಿನಿ ಅನಂತ್​ಕುಮಾರ್ ಹೊಗಳಿದ್ದು ಏಕೆ?

ನಿಖಿಲ್-ತೇಜಸ್ವಿನಿ

ನಿಖಿಲ್-ತೇಜಸ್ವಿನಿ

  • News18
  • Last Updated :
  • Share this:
ಬೆಂಗಳೂರು,(ಏ.07): ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿಖಿಲ್​ ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್​ಕುಮಾರ್​ ಹಾಡಿ ಹೊಗಳಿದ್ದಾರೆ.

ಮೈತ್ರಿ ಸರ್ಕಾರವನ್ನು ಬೀಳಿಸಬೇಕು ಎಂದು ಪದೇಪದೆ ಹವಣಿಸುತ್ತಿರುವ ಬಿಜೆಪಿ ನಾಯಕರು, ಮೈತ್ರಿಗಳ ಪಕ್ಷಗಳನ್ನು ಸಿಕ್ಕಸಿಕ್ಕಲೆಲ್ಲಾ ಲೇವಡಿ ಮಾಡಿಕೊಂಡು ಬರುತ್ತಿದ್ದಾರೆ. ಅದರಲ್ಲೂ ಲೋಕಸಭಾ ಚುನಾವಣೆ ವೇಳೆ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಆದರೆ ಬಿಜೆಪಿ ಉಪಾಧ್ಯಕ್ಷೆ ಹಾಗೂ ದಿವಂಗತ ಅನಂತ್​ಕುಮಾರ್ ಅವರ ಹೆಂಡತಿ ತೇಜಸ್ವಿನಿ ಅನಂತ್​ಕುಮಾರ್ ಮಾತ್ರ ನಿಖಿಲ್​ ಅವರನ್ನು ಹೊಗಳಿದ್ದು ಏಕೆ ಎಂದು ಹೆಚ್ಚು ಯೋಚಿಸಲು ಹೋಗಬೇಡಿ. ಏಕೆಂದರೆ ಅವರು ನಿಖಿಲ್​ ರನ್ನು ಹೊಗಳಿದ್ದು, ರಾಜಕೀಯ ವಿಚಾರವಾಗಿ ಅಲ್ಲ, ಬದಲಿಗೆ ಪರಿಸರ ಜಾಗೃತಿ ವಿಷಯವಾಗಿ.​

ಕಳೆದ ಒಂದು ವಾರದಿಂದ ನಿಖಿಲ್​ ಮಂಡ್ಯ ಜಿಲ್ಲೆಯಾದ್ಯಾಂತ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ರಣ ಬಿಸಿಲಿನ ಬೇಗೆಯಲ್ಲೂ ಸಹ ನಿಖಿಲ್​ ಕುಮಾರಸ್ವಾಮಿ ಸಕ್ಕರೆ ನಾಡಿನ ಹಲವಾರು ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಅವರು ಸ್ಟ್ರಾ ಇಲ್ಲದೇ ಎಳನೀರು ಕುಡಿದಿದ್ದರು. ಇದು ಮಾಧ್ಯಮಗಳಲ್ಲೂ ಸುದ್ದಿಯಾಗಿದ್ದು, ಈಗ ಇದೇ ವಿಚಾರವಾಗಿ ತೇಜಸ್ವಿನಿ ನಿಖಿಲ್​ರನ್ನು ಹೊಗಳಿದ್ದಾರೆ.

"'ನಿಖಿಲ್​ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ, ಕಾರಣ ಏನೇ ಇರಲಿ, ಇದನ್ನು ನಾವು ಕಲಿಲೇಬೇಕು. ನಾವೆಲ್ಲಾ ಸ್ಟ್ರಾ ಇಲ್ಲದೇ ನಿಖಿಲ್​ ರೀತಿ ಎಳನೀರು ಕುಡಿಯಬೇಕು, ಅವರಿಂದ ಕಲಿಯಬೇಕು. ಯಾಕೆ ಗೊತ್ತಾ? ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಸ್ಟ್ರಾ ಎಳನೀರು ಕುಡಿದು ಬಿಸಾಕ್ತಿವಿ. ಈ ಸ್ಟ್ರಾಗಳನ್ನು ಮರುಸಂಸ್ಕರಣೆ ಮಾಡಲಾಗುವುದಿಲ್ಲ.ನೀರಿಗೊ, ಕಾಡಿಗೊ, ಭೂಮಿಗೊ ಸೇರಿ ಮೂಕಪ್ರಾಣಿಗಳಿಗೆ ತೊಂದರೆ. ಸ್ಟ್ರಾ ಉಪಯೋಗ ಬಿಟ್ಹಾಕೋಣ," ಎಂದು ಟ್ವೀಟ್​ ಮಾಡುವ ಮೂಲಕ ಪರಿಸರ ಜಾಗೃತಿಯ ಕರೆ ನೀಡಿದ್ದಾರೆ.

ನಿಖಿಲ್ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ, ಕಾರಣ ಏನೇ ಇರಲಿ😇,ಇದಕ್ಕೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಸ್ಟ್ರಾ ಉಪಯೋಗಿಸದೇ ನಾವು ಎಳನೀರು ಕುಡಿಯುತ್ತೇವೆ ಎಂದು ಫೋಟೋ ಸಮೇತ ಹಾಕಿದ್ದಾರೆ. ಇನ್ನೂ ಕೆಲವರು ಇದಕ್ಕೆ ನಿಖಿಲ್​ ಉದಾಹರಣೆ ಕೊಡುವ ಅವಶ್ಯಕತೆ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ತೇಜಸ್ವಿನಿ ಅನಂತಕುಮಾರ್​ ಅವರ ಪರಿಸರ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

First published: