ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಬಿಜೆಪಿ ಅತೃಪ್ತಿ; ಸೋಲು-ಗೆಲುವಿನ ವರದಿ ಕೇಳಿದ ಯಡಿಯೂರಪ್ಪ

news18
Updated:September 4, 2018, 11:08 AM IST
ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಬಿಜೆಪಿ ಅತೃಪ್ತಿ; ಸೋಲು-ಗೆಲುವಿನ ವರದಿ ಕೇಳಿದ ಯಡಿಯೂರಪ್ಪ
news18
Updated: September 4, 2018, 11:08 AM IST
ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 4): ನಿನ್ನೆಯಷ್ಟೇ  ಸ್ಥಳೀಯ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ರಾಜಕೀಯ ಪಕ್ಷಗಳ ಮುಖಂಡರು ಈಗಾಗಲೇ ಲೆಕ್ಕಾಚಾರ ಶುರುಮಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಸ್ಥಳೀಯ ಚುನಾವಣೆ ಸೋಲು-ಗೆಲುವಿನ ಸಂಪೂರ್ಣ ವರದಿ ನೀಡುವಂತೆ ಸ್ಥಳೀಯ ಬಿಜೆಪಿ ನಾಯಕರಲ್ಲಿ ಕೇಳಿದ್ದಾರೆ.

ರಾಜ್ಯದ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕ್ಷೇತ್ರ ಹಾಗೂ ಸೋಲು ಅನುಭವಿಸಿದ ಕ್ಷೇತ್ರಗಳಲ್ಲಿ ಕ್ಷೇತ್ರವಾರು ವರದಿ ನೀಡಲು ಸೂಚಿಸಲಾಗಿದೆ. ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಎಲ್ಲ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಮಂಡಲ ಅಧ್ಯಕ್ಷರಿಗೆ ವರದಿ ನೀಡಲು ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

105 ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಟ್ಟು 2,662 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 929 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. 982 ಕ್ಷೇತ್ರಗಳಲ್ಲಿ ಕಾಂಗ್ರೆಸ್, 375 ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ 376 ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಒಟ್ಟಾರೆ, 1,733 ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿದೆ.

ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಒಂದುವೇಳೆ ಸೋಲು ಕಂಡಿದ್ದರೆ ಅದಕ್ಕೆ ಕಾರಣಗಳನ್ನೂ ನೀಡಲು ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಬಾರಿಯ ಚುನಾವಣೆಯ ಫಲಿತಾಂಶದ ಬಗ್ಗೆ ತೃಪ್ತಿ ವ್ಯಕ್ತಪಡಿಸದ ಯಡಿಯೂರಪ್ಪ, ಪ್ರತಿ ಕ್ಷೇತ್ರದಲ್ಲಿಯೂ ಪಕ್ಷ ಕ್ಷೇತ್ರ ಪ್ರಚಾರಕರು, ವಿಸ್ತಾರಕರ ನೇಮಕ ಮಾಡಿದ್ದರ ಪರಿಣಾಮ ಏನು? ಹೀಗೇ ಆದರೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸೋದು ಹೇಗೆ? ಪಕ್ಷದ ಹಿನ್ನೆಡೆಗೆ ಸ್ಥಳೀಯ ಮಟ್ಟದ ನಾಯಕರಲ್ಲಿನ ಅಸಮಾಧಾನ ಕಾರಣವಾ? ಹೊಂದಾಣಿಕೆ ಕೊರತೆ ಕಾರಣವಾ ತಿಳಿಸಿ ಎಂದು ಎಲ್ಲ ಸ್ಥಳೀಯ ನಾಯಕ ಯಡಿಯೂರಪ್ಪ ಖಡಕ್ ಸೂಚನೆ ರವಾನಿಸಿದ್ದಾರೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ