ಗಾಂಧೀಜಿ ವಿರುದ್ಧ ಹೆಗಡೆ ನಿಂದನೆ; ದೆಹಲಿಯಲ್ಲಿ ಅನಂತಕುಮಾರ್ ಭೇಟಿ ಮಾಡಿದ ಕಟೀಲ್

ಅನಂತಕುಮಾರ್​​ ಹೆಗಡೆ ಗಾಂಧೀಜಿ ಕುರಿತಾಗಿ ಮಾತನಾಡಿರುವ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷರೇ ವಿವರಣೆ ಕೇಳಿದ್ದರು. ಈಗಾಗಲೇ ಜೆ.ಪಿ. ನಡ್ಡಾಗೆ ಈ ಬಗ್ಗೆ ತಿಳಿಸಿದ್ದೇವೆ. ಚರ್ಚೆ ನಡೆಸಿದ ಬಳಿಕ ಪಕ್ಷದ ವ್ಯವಸ್ಥೆಯಡಿ ಅನಂತ್​ ಕುಮಾರ್​ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ನಳಿನ್ ಕುಮಾರ್​ ಕಟೀಲ್-ಅನಂತಕುಮಾರ್ ಹೆಗಡೆ

ನಳಿನ್ ಕುಮಾರ್​ ಕಟೀಲ್-ಅನಂತಕುಮಾರ್ ಹೆಗಡೆ

  • Share this:
    ನವದೆಹಲಿ(ಫೆ. 04): ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ಅನಂತ್​ಕುಮಾರ್​ ಹೆಗಡೆ ನಿವಾಸಕ್ಕೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​​ ಕಟೀಲ್ ಭೇಟಿ ನೀಡಿದ್ದರು. ಗಾಂಧೀಜಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆ, ಬಿಜೆಪಿ ಹೈ ಕಮಾಂಡ್ ಹೆಗಡೆಯನ್ನು​​ ತರಾಟೆಗೆ ತೆಗೆದುಕೊಂಡಿದೆ. ಈ ಹಿನ್ನೆಲೆ ಲೋಧಿ ಎಸ್ಟೇಟ್​​ನಲ್ಲಿರುವ ಅನಂತ ಕುಮಾರ್​​ ನಿವಾಸಕ್ಕೆ ತೆರಳಿ ಕಟೀಲ್​ ಚರ್ಚೆ ನಡೆಸಿದ್ದಾರೆ. 

    ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ‌ ವಿಷಯ ಚರ್ಚಿಸಿದ್ದೇನೆ. ಈಗಾಗಲೇ ಅನಂತಕುಮಾರ್ ಹೆಗಡೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ವಿವರಣೆ ಕಳುಹಿಸಿ ಕೊಟ್ಟಿದ್ದಾರೆ," ಎಂದರು.

    ಅನಂತಕುಮಾರ್​ ಹೆಗಡೆ ಭೇಟಿ ಮಾಡುವ ಮುನ್ನ ಮಾತನಾಡಿದ್ದ ಕಟೀಲ್​, "ಈಗಾಗಲೇ ಕಾರಣ ಕೇಳಿ ಅನಂತಕುಮಾರ್​ ಹೆಗಡೆಗೆ​ ನೋಟಿಸ್​ ನೀಡಿದ್ಧೇವೆ. ಈ ವಿಷಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಗೆ ತಿಳಿಸಿದ್ದೇವೆ. ಪಕ್ಷದ ನಿಯಮಗಳ ಪ್ರಕಾರ ಅವರೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ" ಎಂದು ಕಟೀಲ್ ಹೇಳಿದರು.

    ಕೊರೊನಾ ವೈರಸ್​: ಚೀನಾದಲ್ಲಿ ಸಾವಿನ ಸಂಖ್ಯೆ 425ಕ್ಕೆ ಏರಿಕೆ; ಕೇರಳದಲ್ಲಿ ರಾಜ್ಯ ವಿಪತ್ತು ಘೋಷಣೆ

    ಮಹಾತ್ಮ ಗಾಂಧಿ ಅವರನ್ನ ಮಹಾತ್ಮರು ಎಂದು ಬಿಜೆಪಿ ಒಪ್ಪಿಕೊಂಡಿದೆ. ಅವರ ವಿಚಾರಗಳು ಬಿಜೆಪಿಯ ನೀತಿಗಳಲ್ಲಿ ಅಡಕವಾಗಿದೆ. ಅನಂತಕುಮಾರ್​ ಹೆಗಡೆ ಹೇಳಿಕೆ ವೈಯಕ್ತಿಕವಾದದ್ದು. ಪಕ್ಷಕ್ಕೂ ಅನಂತಕುಮಾರ್​ ಹೇಳಿಕೆಗೂ ಸಂಬಂಧವಿಲ್ಲ. ಗಾಂಧೀಜಿ ಬಗ್ಗೆ ಉಡಾಫೆಯಾಗಿ ಮಾತನಾಡಿರುವ ಹೆಗಡೆ ಹೇಳಿಕೆಯನ್ನು ನಾವು ತಿರಸ್ಕರಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಅನಂತಕುಮಾರ್​​ ಹೆಗಡೆ ಗಾಂಧೀಜಿ ಕುರಿತಾಗಿ ಮಾತನಾಡಿರುವ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷರೇ ವಿವರಣೆ ಕೇಳಿದ್ದರು. ಈಗಾಗಲೇ ಜೆ.ಪಿ. ನಡ್ಡಾಗೆ ಈ ಬಗ್ಗೆ ತಿಳಿಸಿದ್ದೇವೆ. ಚರ್ಚೆ ನಡೆಸಿದ ಬಳಿಕ ಪಕ್ಷದ ವ್ಯವಸ್ಥೆಯಡಿ ಅನಂತ್​ ಕುಮಾರ್​ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ಗದಗದಲ್ಲಿ ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಮಾರುಕಟ್ಟೆ; 40ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿ

    ಇದೇ ವೇಳೆ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಕಟೀಲ್​ ಪ್ರತಿಕ್ರಿಯೆ ನೀಡಿದರು. "ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಸಚಿವ ಸಂಪುಟ ವಿಸ್ತರಿಸುತ್ತೇವೆ. ಯಾರಿಗೆ ಸಚಿವ ಸ್ಥಾನ‌ ನೀಡಬೇಕು ಎಂಬುದನ್ನು ಸಿಎಂ ಯಡಿಯೂರಪ್ಪ ನಿರ್ಧರಿಸಲಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದರು.
    First published: