ರಿವರ್ಸ್​ ಆಪರೇಷನ್​ ಮಾಡೋದಿದ್ರೆ ಮಾಡಲಿ; ಮೈತ್ರಿ ನಾಯಕರಿಗೆ ಬಿಎಸ್​ವೈ ಸವಾಲು

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅಮೆರಿಕಾದಿಂದ ಬರಲಿ. ಅಮೇರಿಕಾ ಏನು ದೂರ ಇದೆಯಾ?-ಬಿಎಸ್​ವೈ

Latha CG | news18
Updated:July 2, 2019, 10:43 AM IST
ರಿವರ್ಸ್​ ಆಪರೇಷನ್​ ಮಾಡೋದಿದ್ರೆ ಮಾಡಲಿ; ಮೈತ್ರಿ ನಾಯಕರಿಗೆ ಬಿಎಸ್​ವೈ ಸವಾಲು
ಬಿಎಸ್​ ಯಡಿಯೂರಪ್ಪ
  • News18
  • Last Updated: July 2, 2019, 10:43 AM IST
  • Share this:
ಬೆಂಗಳೂರು(ಜು. 02): ಸಮ್ಮಿಶ್ರ ಸರ್ಕಾರದಲ್ಲಿ ಇಬ್ಬರು ಶಾಸಕರು ರಾಜೀನಾಮೆ ನೀಡಿರುವುದು ಮೈತ್ರಿ ನಾಯಕರ ಆತಂಕಕ್ಕೆ ಕಾರಣವಾಗಿದೆ. ನಿನ್ನೆ ರಾಜ್ಯ ರಾಜಕೀಯದಲ್ಲಿ ಆದ ಮಹತ್ತರ ಬೆಳವಣಿಗೆಗಳಲ್ಲಿ ಇಬ್ಬರ ಶಾಸಕರ ರಾಜೀನಾಮೆಯೂ ಒಂದು. ಶಾಸಕ ಆನಂದ್​ ಸಿಂಗ್​ ಹಾಗೂ ರೆಬಲ್​ ಶಾಸಕ ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡಿ ಮೈತ್ರಿ ಸರ್ಕಾರಕ್ಕೆ ಶಾಕ್​ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಇಂದು ಜಾರಕಿಹೊಳಿ ದೆಹಲಿಗೆ ತೆರಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, "ನಾವೆಲ್ಲೂ ಆಪರೇಷನ್​ ಮಾಡ್ತೀವಿ ಎಂದು ಹೇಳಿಲ್ಲ. ರಿವರ್ಸ್​ ಆಪರೇಷನ್​ ಮಾಡೋದಿದ್ರೆ ಮಾಡಲಿ ಎಂದು ದೋಸ್ತಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆದಿಸಿದರು. ನಮ್ಮವರು ಯಾರೂ ಕಾಂಗ್ರೆಸ್​, ಜೆಡಿಎಸ್​ಗೆ ಹೋಗಲ್ಲ.  ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಪ್ರಶ್ನೆಯಿಲ್ಲ. ನಾನು ಯಾವ ಶಾಸಕರನ್ನೂ ಸಂಪರ್ಕಿಸಿಲ್ಲ. ರಿವರ್ಸ್ ಆಪರೇಷನ್ ಮಾಡೋದಿದ್ದರೆ ಮಾಡಲಿ ಎಂದು ಮೈತ್ರಿ ನಾಯಕರಿಗೆ ಬಿಎಸ್​ವೈ ಬಹಿರಂಗ ಸವಾಲು ಹಾಕಿದರು.

ಅತಂತ್ರದ ಭೀತಿಯಲ್ಲಿ ಮೈತ್ರಿ ಸರ್ಕಾರ: ಅಪ್ಪ-ಮಕ್ಕಳ ಮೇಲೆ ಮುನಿಸಿಕೊಂಡರಾ ಸಿದ್ದರಾಮಯ್ಯ?;

ಇನ್ನು, ಸಿಎಂ ಕುಮಾರಸ್ವಾಮಿ ಅಮೆರಿಕಾ ಪ್ರವಾಸದಲ್ಲಿರುವಾಗಲೇ ರಾಜ್ಯದಲ್ಲಿ ಮಹತ್ತರ ಬೆಳವಣಿಗೆಗಳು ಆಗಿವೆ. ಈ ಬಗ್ಗೆ ಬಿಎಸ್​ವೈ ಪ್ರತಿಕ್ರಿಯೆ ನೀಡಿದ್ದು, ಎಚ್​ಡಿಕೆ ಅಮೆರಿಕಾದಿಂದ ಬರಲಿ, ಅದೇನು ದೂರ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಈ ಬೆಳವಣಿಗೆ ನೋಡಿ ಸದನದಲ್ಲಿ ಏನು ಮಾಡಬೇಕು ಎಂದು ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ನಂತರ ಅವರೆಲ್ಲಾ ತೀರ್ಮಾನ ಮಾಡಬೇಕು. ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅಮೆರಿಕಾದಿಂದ ಬರಲಿ. ಅಮೇರಿಕಾ ಏನು ದೂರ ಇದೆಯಾ? ಎಂದು ಕಿಡಿಕಾರಿದರು.

First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ