News18 India World Cup 2019

ಜಿಂದಾಲ್​ ಭೂ ವಿವಾದ: ಇಂದಿನಿಂದ ಎರಡು ದಿನ ಬಿಜೆಪಿ ಶಾಸಕ, ಸಂಸದರಿಂದ ಅಹೋರಾತ್ರಿ ಧರಣಿ!

ಎರಡು ದಿನಗಳ ಅಹೋರಾತ್ರಿ ಧರಣಿ ನಂತರ ಜೂನ್ 16ರಂದು ಬಿಜೆಪಿ ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿಗಳ‌ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕುವ ಯೋಜನೆ ಹಾಕಿಕೊಳ್ಳಲಾಗಿದೆ. 

Rajesh Duggumane | news18
Updated:June 14, 2019, 10:25 AM IST
ಜಿಂದಾಲ್​ ಭೂ ವಿವಾದ: ಇಂದಿನಿಂದ ಎರಡು ದಿನ ಬಿಜೆಪಿ ಶಾಸಕ, ಸಂಸದರಿಂದ ಅಹೋರಾತ್ರಿ ಧರಣಿ!
ಯಡಿಯೂರಪ್ಪ
Rajesh Duggumane | news18
Updated: June 14, 2019, 10:25 AM IST
ಬೆಂಗಳೂರು (ಜೂ.14): ಜಿಂದಾಲ್​ಗೆ 3,667 ಎಕರೆ ಸರ್ಕಾರಿ ಭೂಮಿ ಮಾರಾಟ ಮಾಡುವ  ಮೈತ್ರಿ ಸರ್ಕಾರದ ನಿರ್ಧಾರ ಹಾಗೂ ಬರ ನಿರ್ವಹಣೆ ವೈಫಲ್ಯ ಖಂಡಿಸಿ ಇಂದಿನಿಂದ ರಾಜ್ಯ ಬಿಜೆಪಿ ನಾಯಕರು ಎರಡು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಲಿದ್ದಾರೆ.

ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಎದುರು ಬೆಳಗ್ಗೆ 10 ಗಂಟೆಗೆ ಧರಣಿ ಆರಂಭವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು, ಬಿಜೆಪಿ 25 ಸಂಸದರು ಮತ್ತು 105 ಶಾಸಕರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಾಜಿ ಡಿಸಿಎಂ ಆರ್.ಅಶೋಕ್, ಶ್ರೀರಾಮುಲು, ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ಸಿ.ಟಿ.ರವಿ, ರವಿಕುಮಾರ್, ಅರವಿಂದ್ ಲಿಂಬಾವಳಿ ಸೇರಿ  ಎಲ್ಲ ಪ್ರಮುಖ ನಾಯಕರು ಮೈತ್ರಿ ಸರ್ಕಾರ ವಿರುದ್ಧ ಘೋಷಣೆ ಕೂಗಲಿದ್ದಾರೆ.

ಎರಡು ದಿನಗಳ ಅಹೋರಾತ್ರಿ ಧರಣಿ ನಂತರ ಜೂನ್ 16ರಂದು ಬಿಜೆಪಿ ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿಗಳ‌ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕುವ ಯೋಜನೆ ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದ ವಿರುದ್ಧ ನಾಳೆಯಿಂದ 2 ದಿನ ಹಗಲು ರಾತ್ರಿ ಸತ್ಯಾಗ್ರಹ; ಬಿ.ಎಸ್​. ಯಡಿಯೂರಪ್ಪ

ಆನಂದ್​ ರಾವ್​ ವೃತ್ತದ ಬಳಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಅನುವಾಗುವಂತೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿದೆ. ರಾತ್ರಿ ವಾಸ್ತವ್ಯ ಹೂಡಲು ಅನುವಾಗುವಂತೆ 150 ಕ್ಕೂ ಹೆಚ್ಚಿನ ಜನರಿಗೆ ಅಗತ್ಯವಿರುವ ಹಾಸಿಗೆ, ದಿಂಬಿನ ವ್ಯವಸ್ಥೆ ಕೂಡ ಮಾಡಲಾಗಿದೆ.

ಅತಿ ದೊಡ್ಡ ಸ್ಟೀಲ್ ಪ್ಲಾಂಟ್ ಹೊಂದಿರುವ ಜಿಂದಾಲ್ ಸಂಸ್ಥೆಗೆ ನೀಡುತ್ತಿರುವ 3,667 ಎಕರೆ ಮಾರಾಟ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ.  ಬಿಜೆಪಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
Loading...

ಇದನ್ನೂ ಓದಿ: ಬಳ್ಳಾರಿಯಲ್ಲಿ ರಾಜಕೀಯ ನಾಯಕರಿಂದ ಪಕ್ಷಭೇದ ಮರೆತು ಜಿಂದಾಲ್​ಗೆ ಉಘೇ ಉಘೇ

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...