ಸಮ್ಮಿಶ್ರ ಸರ್ಕಾರವನ್ನ ಬೀಳಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ - ದಿನೇಶ್ ಗುಂಡೂರಾವ್

news18
Updated:August 27, 2018, 2:45 PM IST
ಸಮ್ಮಿಶ್ರ ಸರ್ಕಾರವನ್ನ ಬೀಳಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ - ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
news18
Updated: August 27, 2018, 2:45 PM IST
- ಪರಶುರಾಮ್ ತಹಶೀಲ್ದಾರ್, ನ್ಯೂಸ್ 18 ಕನ್ನಡ

ಹುಬ್ಬಳ್ಳಿ ( ಆಗಸ್ಟ್ 27) : ಸಮ್ಮಿಶ್ರ ಸರ್ಕಾರವನ್ನ ಬೀಳಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ‌ಕೆಲವೊಂದಿಷ್ಟು ನಾಯಕರಿಗೆ ಬಿಜೆಪಿಯವರು ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ದುಷ್ಟ ಶಕ್ತಿಗಳ ವಿರುದ್ಧ ನಮ್ಮ ಪಕ್ಷವನ್ನ ಬಲಪಡಿಸಬೇಕಿದೆ  ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾರಿಗೂ ಅಧಿಕಾರ ಇಲ್ಲ. ಎಲ್ಲವೂ ಪ್ರಧಾನಿ ನರೇಂದ್ರ ಮೋದಿ ನೋಡಿಕೊಳ್ಳುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಗಿಂತ ಮೊದಲು ನಾವು ಪಕ್ಷವನ್ನ ಗಟ್ಟಿಗೊಳಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆ ಕಾಪಾಡುತ್ತಿದ್ದಾರೆ. ಮತ್ತೊಮ್ಮೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದು, ಜನರ ಒತ್ತಾಯದಿಂದ. ಭಾಷಣ ಮಧ್ಯದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ  ಎಂದು ಹೇಳಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷ ಅಧಿಕಾರಕ್ಕೆ 

ಸ್ಥಳೀಯ ಚುನಾವಣೆಗೆ ಪ್ರಚಾರಕ್ಕೆ ನಾಳೆ ಕೊನೆಯ ದಿನ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸ ನನಗಿದೆ. 5 ವರ್ಷ ಕಾಂಗ್ರೆಸ್ ಚೆನ್ನಾಗಿ ಆಡಳಿತ ಮಾಡಿದೆ. ಸಂಸದ ಪ್ರಹ್ಲಾದ ಜೋಶಿಯವರು ಅವರು ರಾಹುಲ್ ಗಾಂಧಿಯ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ದಿನೇಶ್​​ ಗುಂಡೂರಾವ್ ಹೇಳಿದರು.
Loading...

ದೇಶದಲ್ಲಿ ವಿಚಾರವಾದಿಗಳ ಕೊಲೆ ನಡೆಯುತ್ತಿದೆ. ಬಲಪಂಥೀಯರ ವಿರುದ್ದ ಮಾತನಾಡಿದವರನ್ನು ಮುಗಿಸಲು ಹೋಗ್ತಾ ಇದ್ದಾರೆ. ಕೆಲವು ಪ್ರಕರಣಗಳನ್ನ ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಪರಮೇಶ ಮೇಸ್ತಾ ಪ್ರಕರಣ ಸಿಬಿಐಗೆ ಕೊಟ್ಟಿದೆ, ಸಿಬಿಐ ವಿಚಾರಣೆ ಮಾಡುತ್ತಿಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಪಿಂಚಣಿ ಹಣದ ಬಿಡುಗಡೆ ಬಗ್ಗೆ ಸಿಎಂ ಜೊತೆ ಚರ್ಚೆ
ಇದೇ ವೇಳೆ, ಹುಬ್ಬಳ್ಳಿ - ಧಾರವಾಡ ಅವಳಿ ನಗರಕ್ಕೆ ಬರಬೇಕಾದ 150 ಕೋಟಿ ಪಿಂಚಣಿ ಹಣದ ಬಿಡುಗಡೆ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...