ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕಾಗಿ ಈ ಸದಾರಮೆ ನಾಟಕವೇ? DK Shivakumarಗೆ ಬಿಜೆಪಿ ಪ್ರಶ್ನೆ

ಮಾನ್ಯ ಡಿಕೆ ಶಿವಕುಮಾರ್ ಅವರೇ, ಮತಾಂತರ ನಿಯಂತ್ರಣ ಕಾಯ್ದೆ ರಿವರ್ಸ್‌ ಮಾಡುತ್ತೇವೆ ಎಂದಿದ್ದೀರಿ. ಅಂದರೆ ನೀವು ಹಿಂದೂಗಳನ್ನು ಮತಾಂತರ ಮಾಡಲೆಂದೇ ಒಂದು ಕಾನೂನು ರೂಪಿಸುತ್ತೀರಾ

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ನೀಡಿರುವ ಹೇಳಿಕೆಗೆ ಬಿಜೆಪಿ (BJP) ಖಾರವಾಗಿ ಪ್ರತಿಕ್ರಿಯಿಸಿದೆ. ಬಾಳೆಹೊನ್ನೂರಿನಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ನಾವು ಮತಾಂತರ ನಿಷೇಧ ಕಾಯ್ದೆಯನ್ನು (Conversion Prohibition Act) ವಿರೋಧಿಸುತ್ತವೆ. ಅವರು ಏನ್ ಬೇಕಾದ್ರೂ ಮಾಡಿಕೊಳ್ಳಲಿ. ನಾವು ಅಧಿಕಾರಕ್ಕೆ ಬಂದ ಮೇಲೆ ಎಲ್ಲವೂ ರಿವರ್ಸ್ ಆಗಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಕೆಂಡವಾಗಿರುವ ಕಮಲ ಪಾಳಯ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರುವ ಬಿಜೆಪಿ(Karnataka BJP), #ಹಿಂದೂವಿರೋಧಿಕಾಂಗ್ರೆಸ್ ಎಂಬ ಹ್ಯಾಶ್ ಟ್ಯಾಗ್ ಬಳಕೆ ಮಾಡಿದೆ.

ಮಾನ್ಯ ಡಿಕೆ ಶಿವಕುಮಾರ್ ಅವರೇ, ಮತಾಂತರ ನಿಯಂತ್ರಣ ಕಾಯ್ದೆ ರಿವರ್ಸ್‌ ಮಾಡುತ್ತೇವೆ ಎಂದಿದ್ದೀರಿ. ಅಂದರೆ ನೀವು ಹಿಂದೂಗಳನ್ನು ಮತಾಂತರ ಮಾಡಲೆಂದೇ ಒಂದು ಕಾನೂನು ರೂಪಿಸುತ್ತೀರಾ? ಮತಾಂತರ ನಿಯಂತ್ರಣ ಕಾಯ್ದೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆಕ್ರೋಶ ಭರಿತರಾಗಿದ್ದಾರೆ. ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕಾಗಿ ಈ ಸದಾರಮೆ ನಾಟಕವೇ ಎಂದು ಪ್ರಶ್ನೆ ಮಾಡಿದೆ.

ಹಿಂದೂಗಳು ಮತಾಂತರವಾದರೂ ಪರವಾಗಿಲ್ಲ ಎನ್ನುವ ನಿಮ್ಮ ಹಿಂದೂ ವಿರೋಧಿ‌ ನಿಲುವಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರಿಗೆ ತಮ್ಮದೇ ಕೋಟೆ ಕನಕಪುರ, ಕಪಾಲಿ ಬೆಟ್ಟ, ಹಾರೋಬೆಲೆ ವ್ಯಾಪ್ತಿಯಲ್ಲಿ ಮತಾಂತರದ ಪರವಾಗಿರುವವರ ಮತ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಮತಾಂತರದ ಪರವಾಗಿರುವವರ ಓಲೈಕೆಗಾಗಿ ಮತಾಂತರ ನಿಯಂತ್ರಣ ಕಾಯ್ದೆಯಂತಹ ಜನಸ್ನೇಹಿ ಕಾನೂನಿಗೆ ವಿರೋಧಿಸುತ್ತಿದ್ದೀರಿ ಅಲ್ಲವೇ ಎಂದು ಬಿಜೆಪಿ ಕೇಳಿದೆ.

ಇದನ್ನೂ ಓದಿ:  MM Kalburgi Case: ನಮ್ಮ‌ ತಂದೆಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ಇವರೇ: ಕಣ್ಣೀರು ಹಾಕಿದ ಕಲಬುರ್ಗಿ ಅವರ ಪುತ್ರಿ

ಚಿಕ್ಕಮಗಳೂರು ಕಾಂಗ್ರೆಸ್ ಮುಖಂಡರ ಮೇಲೆ ಡಿಕೆಶಿ ಗರಂ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ (Tarikere) ತಾಲೂಕು ಹೊರತುಪಡಿಸಿ ಬೇರೆಲ್ಲೂ ನಿರೀಕ್ಷೆಯಂತೆ ಯಾರೂ ಕಾಂಗ್ರೆಸ್ (Congress) ಸದಸ್ಯತ್ವ (Membership) ಮಂಡಿಸಿಲ್ಲ ಎಂದು ಜಿಲ್ಲಾ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar)  ಕ್ಲಾಸ್ ತೆಗೆದುಕೊಂಡಿದ್ದಾರೆ.

ಜಿಲ್ಲಾ ಮುಖಂಡರನ್ನ ತರಾಟೆಗೆ ತೆಗೆದುಕೊಂಡ ಡಿಕೆಶಿ

ಜಿಲ್ಲೆಯಲ್ಲಿನ ಡಿಜಿಟಲ್ ಸದಸ್ಯತ್ವದ ಬಗ್ಗೆ ಜಿಲ್ಲಾ ಮುಖಂಡರಿಗೆ ಡಿಕೆಶಿ ಸಖತ್ತಾಗೆ ಕ್ಲಾಸ್ ತೆಗೆದುಕೊಂಡರು. ತರೀಕೆರೆ ತಾಲೂಕು ಹೊರತುಪಡಿಸಿದರೆ ಉಳಿದ ಕಡೆ ನಿರೀಕ್ಷೆಯಷ್ಟು ಸದಸ್ಯತ್ವ ಮಾಡಿಸಿಲ್ಲ. ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಿದ್ದಾರೆ. ನಾನು ಯಾವ ಕಾರಣವನ್ನೂ ಕೇಳುವುದಿಲ್ಲ. ಪ್ರತಿದಿನದ ಬೆಳವಣಿಗೆಯನ್ನ ರಾಹುಲ್ ಗಾಂಧಿ ನೋಡುತ್ತಿದ್ದಾರೆ, ಸದಸ್ಯತ್ವ ಮಾಡಿಸಲೇಬೇಕು ಎಂದು ಕಡ್ಡಿ ಮುರಿದಂತೆ ಹೇಳಿದರು.

ಹೆಚ್ಚು ಸದಸ್ಯತ್ವ ಮಾಡಿಸಿದವರಿಗೆ ನಾಯಕತ್ವದ ಅವಕಾಶ ಸಿಗಲಿದೆ. ಸದಸ್ಯರನ್ನೇ ಮಾಡಿಸದಿದ್ದರೆ ಮತ ಹೇಗೆ ತೆಗೆದುಕೊಳ್ತೀರಾ ಎಂದು ಪ್ರಶ್ನಿಸಿದರು. ನಮ್ಮ ಪಕ್ಷಕ್ಕೆ ಮೆಂಬರ್‍ಶಿಪ್ ಪೌಂಡೇಷನ್. ಎಲ್ಲರೂ ಮಾಡಿಸಲೇಬೇಕು ಎಂದು ಎಲ್ಲರಿಗೂ ಸಖತ್ತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಜಿಲ್ಲಾಧ್ಯಕ್ಷರಿಗೂ ಕ್ಲಾಸ್ 

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಇಂದು ಎಲ್ಲಾ ಲಾಸ್ ಆಯ್ತು ಎಂದರು.  ಬಿಜೆಪಿ ಪರಿಷತ್‍ನಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್‍ಗೆ ಸಿದ್ಧತೆ ನಡೆಸುತ್ತಿದ್ದಾರೆ. ನಾವು ಅದನ್ನ ವಿರೋಧಿಸುತ್ತಲೇ ಬಂದಿದ್ದೇವೆ. ಅವರು ಏನು ಬೇಕೋ ಅದನ್ನ ಮಾಡಿಕೊಳ್ಳಲಿ. ಬಿಜೆಪಿಯವರು ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ಮುಂದೆ ನಮ್ಮ ಸರ್ಕಾರ ಬರುತ್ತೆ ಆಗ ನಾವು ಎಲ್ಲಾ ರಿವರ್ಸ್ ಮಾಡುತ್ತೇವೆ ಎಂದರು.

ಇದನ್ನೂ ಓದಿ:  ಶಿಕ್ಷಣ & ಉದ್ಯೋಗಕ್ಕೆ ಧರ್ಮವಿಲ್ಲ, ಮಕ್ಕಳೇ ಶಾಲೆಗೆ ಬನ್ನಿ: ಕೇಂದ್ರ ಸಚಿವ Shobha Karandlaje ಕರೆ

ಪುನೀತ್ ಸಿನಿಮಾ ಕುಟುಂಬದ ಜೊತೆ ನೋಡುತ್ತೇನೆ. ಪುನೀತ್ ಅಭಿನಯದ ಜೇಮ್ಸ್ ಸಿನಿಮಾವನ್ನು ಕುಟುಂಬದ ಜೊತೆ ಇಂದು ನೋಡುತ್ತೇನೆ. ಬೆಳಿಗ್ಗೆ ಪತ್ನಿ ಬಳಿ ಹೇಳಿದ್ದೀನಿ ಇಂದು ಬೆಂಗಳೂರಿಗೆ ತೆರಳಿ ಸಿನಿಮಾ ನೋಡುತ್ತೇನೆ ಎಂದರು.
Published by:Mahmadrafik K
First published: