• Home
  • »
  • News
  • »
  • state
  • »
  • BJP Tweet: ಮುಳುಗುವ ಹಡಗಿಗೆ ಅಮ್ಮ ಬಂದ್ರೂ ಅಷ್ಟೇ, ತಂಗಿ ಬಂದ್ರೂ ಅಷ್ಟೇ!

BJP Tweet: ಮುಳುಗುವ ಹಡಗಿಗೆ ಅಮ್ಮ ಬಂದ್ರೂ ಅಷ್ಟೇ, ತಂಗಿ ಬಂದ್ರೂ ಅಷ್ಟೇ!

ಬಿಜೆಪಿ ಟ್ವೀಟ್​

ಬಿಜೆಪಿ ಟ್ವೀಟ್​

ಜಿಹಾದಿಗಳ ಜೊತೆ ಸಿದ್ದರಾಮಯ್ಯ ಅವರ ಲೀಲೆಗಳನ್ನು ತಿಳಿಯಲು ಈ ಕೆಳಗಿನ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಎಂದ ಬಿಜೆಪಿ ತಿಳಿಸಿದೆ. ಸಿದ್ದು ಉಗ್ರಭಾಗ್ಯ ಎಂಬ ಹೆಸರಿನಲ್ಲಿ ಸ್ಕ್ಯಾನ್‌ ಬಿಡುಗಡೆ ಮಾಡಿದೆ.

  • Share this:

ಕಾಂಗ್ರೆಸ್ ನ ಪೇಸಿಎಂ ಅಸ್ತ್ರಕ್ಕೆ ಬಿಜೆಪಿಯಿಂದ ಮೆಗಾ ಅಸ್ತ್ರ ಪ್ರಯೋಗ ಮಾಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಪಿಎಫ್ಐ ಭಾಗ್ಯದ ಕೌಂಟರ್ ಕೊಟ್ಟಿದೆ. ಸಿದ್ದರಾಮಯ್ಯ ಫೋಟೋ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್ ಬಿಡುಗಡೆ ಮಾಡಿದೆ. ಮಾಜಿ ಸಿಎಂ ಸಿದ್ದು ಮತ್ತು #PFI ಉಗ್ರರ ನಡುವೆ ಭಾಯ್ ಭಾಯ್ ಸಂಬಂಧವಿತ್ತು. ಜಿಹಾದಿಗಳ ಜೊತೆ ಸಿದ್ದರಾಮಯ್ಯ ಅವರ ಲೀಲೆಗಳನ್ನು ತಿಳಿಯಲು ಈ ಕೆಳಗಿನ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಎಂದ ಬಿಜೆಪಿ ತಿಳಿಸಿದೆ. ಸಿದ್ದು ಉಗ್ರಭಾಗ್ಯ ಎಂಬ ಹೆಸರಿನಲ್ಲಿ ಸ್ಕ್ಯಾನ್‌ ಬಿಡುಗಡೆ ಮಾಡಿದೆ.


ಕಾಂಗ್ರೆಸ್​ ವಿರುದ್ಧ ಬಿಜೆಪಿ ಸರಣಿ ಟ್ವೀಟ್​


ಕಾಂಗ್ರೆಸ್‌ ಪಕ್ಷದ ಶಾಶ್ವತ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯೇ ಉಗ್ರರೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಬಿಜೆಪಿ ಟ್ವೀಟ್​ ಮಾಡಿದೆ. ಹೀಗಿರುವಾಗ Siddaramaiah ಅವರ #PFI ಪ್ರೀತಿಯನ್ನು ಹೇಗೆ ತಾನೇ ವಿರೋಧಿಸುತ್ತಾರೆ? ಜಿಹಾದಿಗಳ ಜೊತೆ ಕಾಂಗ್ರೆಸ್‌ ಹೊಂದಿರುವ ಸಂಬಂಧ ತಿಳಿಯಲು ಈ ಕೆಳಗಿನ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ #PFI ಮೇಲಿನ 175 ಕ್ರಿಮಿನಲ್ ಪ್ರಕರಣಗಳನ್ನು ಕೈಬಿಟ್ಟು, ಪ್ರವೀಣ್ ಪೂಜಾರಿ, ರಾಜು, ರುದ್ರೇಶ್ ಹತ್ಯೆಗೆ ಕಾಂಗ್ರೆಸ್​ ಕಾರಣವಾಗಿತ್ತು.


ಸಿದ್ದರಾಮಯ್ಯ ಅವರು ಒಬ್ಬಂಟಿಯಾಗಿದ್ದಾರೆಯೇ?


ಪ್ರಧಾನಿ ಮೋದಿ ಸರ್ಕಾರ ಪಿಎಫ್ಐ ನಿಷೇಧ ಮಾಡಿದಾಗಿನಿಂದಲೂ ಹಿಂದೂ ವಿರೋಧಿ ಸಿದ್ದರಾಮಯ್ಯ ಅವರು ಒಳಗೊಳಗೆ ರೋಷದಿಂದ ಕುದಿಯುತ್ತಿದ್ದಾರೆ. ಸಿದ್ದರಾಮಯ್ಯವರೇ, ಜಿಹಾದಿಗಳ ಮೇಲೆ ನಿಮಗೇಕೆ ಅಷ್ಟೊಂದು ಮಮಕಾರ? ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪರಿಯ ಒಂಟಿತನ ಯಾವತ್ತೂ ಕಾಡಿರಲಾರದು. ಪಿಎಫ್​ಐ ಸ್ನೇಹಿತರು ಜೈಲಿಗೆ ಹೋದಾಗಿನಿಂದ ಸಿದ್ದರಾಮಯ್ಯ ಅವರು ಒಬ್ಬಂಟಿಯಾಗಿದ್ದಾರೆಯೇ?ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಆರೋಪಿ, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಕರ್ನಾಟಕಕ್ಕೆ ಸ್ವಾಗತ ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಆಗಮನದಿಂದ #ಜೈಲುಹಕ್ಕಿಡಿಕೆಶಿ ಹಾಗೂ #ಭ್ರಷ್ಟರಾಮಯ್ಯ ಅವರಿಗೆ ಶಕ್ತಿ ಬಂದಿದ್ದು ಸುಳ್ಳಲ್ಲ. ಭ್ರಷ್ಟರೆಲ್ಲಾ ಒಂದೆಡೆ ಸೇರುವಾಗ ಹುರುಪು, ಶಕ್ತಿ ಸಹಜವಾದದ್ದೇ ಎಂದು ಸರಣಿ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಕಿಡಿಕಾರಿದೆ.


ರಾಜ್ಯದಲ್ಲಿ ಪೋಸ್ಟರ್​ ಫೈಟ್​ ತೀವ್ರಗೊಂಡಿದೆ. ಕಾಂಗ್ರೆಸ್ ಪೇ ಸಿಎಂ ಪೋಸ್ಟರ್ ಗೆ ಬಿಜೆಪಿಯಿಂದ ಉಗ್ರ ಭಾಗ್ಯ ಅಭಿಯಾನ ಶುರುವಾಗಿದೆ. ರಾಜ್ಯದ ಎಲ್ಲೆಡೆ ಅಭಿಯಾನಕ್ಕೆ ಕರೆ ಕೊಟ್ಟ ಬಿಜೆಪಿ, ಭಾರತ್ ಜೋಡೋ ಸಾಗುವ ದಾರಿಯಲ್ಲಿ ಪೋಸ್ಟರ್ ಅಂಟಿಸಲು ಕರೆ ನೀಡಿದೆ. ಅಲ್ಲದೆ ರಾಜ್ಯದಲ್ಲಿ ಯಾವುದೇ ಸ್ಥಳಕ್ಕೂ ಕೈ ನಾಯಕರು ಹೋದ್ರು, ಸಿದ್ದು ಉಗ್ರ ಭಾಗ್ಯ ಕರಪತ್ರ ತೋರಿಸುವಂತೆ ಕರೆ ನೀಡಲಾಗಿದೆ. ಈ ಮೂಲಕ ಕಾಂಗ್ರೆಸ್ ಗೆ ಡ್ಯಾಮೇಜ್ ಮಾಡಲು ಪ್ರಯತ್ನವನ್ನು ಬಿಜೆಪಿ ಮಾಡಿದೆ.


ಇದನ್ನೂ ಓದಿ: Bharat Jodo Yatra: ಒಂದೇ ದಿನ ಮಂದಿರ, ಮಸೀದಿ, ಚರ್ಚ್​ಗೆ ರಾಹುಲ್ ಗಾಂಧಿ ಭೇಟಿ; ರಾಜ್ಯದಲ್ಲಿ ರಾಗಾ ಸಖತ್ ಆ್ಯಕ್ಟೀವ್


ಮುಳುಗುವ ಹಡಗಿಗೆ ಅಮ್ಮ ಬಂದರೇನು? ತಂಗಿ ಬಂದರೇನು?


ಮುಳುಗುವ ಹಡಗಿಗೆ ಅಮ್ಮ ಬಂದರೇನು? ತಂಗಿ ಬಂದರೇನು? ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಗೆ ರಾಜ್ಯ ಬಿಜೆಪಿ ವ್ಯಂಗ್ಯವಾಡಿದ್ದಾರೆ. ಮಾನ್ಯ ರಾಹುಲ್ ಗಾಂಧಿ ಅವರೇ, ಕಾಂಗ್ರೆಸ್ ಸರ್ಕಾರ 1 ರೂಪಾಯಿ ಜನರಿಗೆ ಕೊಟ್ಟರೆ, ಅದರಲ್ಲಿ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದು ನಿಮ್ಮ ತಂದೆ ರಾಜೀವ್ ಗಾಂಧಿ ಹೇಳಿದ್ದು ಮರೆತು ಹೋಯಿತೇ.? ಮುಳುಗುವ ಹಡಗಿಗೆ ಯಾರು ನಾಯಕ ಆದರೇನು ರಾಹುಲ್​ ಗಾಂಧಿ ಅವರೇ? ಅಮ್ಮ ಬಂದರೂ ಅಷ್ಟೇ, ತಂಗಿ ಬಂದರೂ ಅಷ್ಟೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Published by:ಪಾವನ ಎಚ್ ಎಸ್
First published: