ಡಿಕೆಶಿ ಶಕುನಿ ಇದ್ದಂಗೆ, ಸರ್ಕಾರ ಬಿದ್ದ ಮೇಲೆ ಇವರ ಬಣ್ಣ ಬಯಲಾಗಲಿದೆ: ಶ್ರೀರಾಮುಲು

ಇನ್ನು ಮಾಜಿ ಸಚಿವ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರ ಕಿರುಕುಳವೇ ಕಾರಣ ಎಂದು ಶ್ರೀರಾಮುಲು ಕುಂದಗೋಳ ಉಪಚುನಾವಣೆ ಪ್ರಚಾರದ ವೇಳೆ ಗಂಭೀರ ಆರೋಪ ಮಾಡಿದ್ದರು. ಇದರ ವಿರುದ್ಧ ದೂರು ಸಚಿವ ಡಿಕೆ ಶಿವಕುಮಾರ್ ಕೂಡ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Ganesh Nachikethu | news18
Updated:June 24, 2019, 11:55 AM IST
ಡಿಕೆಶಿ ಶಕುನಿ ಇದ್ದಂಗೆ, ಸರ್ಕಾರ ಬಿದ್ದ ಮೇಲೆ ಇವರ ಬಣ್ಣ ಬಯಲಾಗಲಿದೆ: ಶ್ರೀರಾಮುಲು
ಸಚಿವ ಡಿ ಕೆ ಶಿವಕುಮಾರ್ ಹಾಗೂ ಶಾಸಕ ಬಿ ಶ್ರೀರಾಮುಲು
  • News18
  • Last Updated: June 24, 2019, 11:55 AM IST
  • Share this:
ಬೆಂಗಳೂರು(ಜೂನ್​​​.22): ತನ್ನನ್ನು ಶಕುನಿ ಎಂದು ಕರೆದಿದ್ದ ಸಚಿವ ಡಿ.ಕೆ ಶಿವಕುಮಾರ್​​ ವಿರುದ್ಧ ಬಿಜೆಪಿ ಹಿರಿಯ ನಾಯಕ ಮತ್ತು ಶಾಸಕ ಶ್ರೀರಾಮುಲು ಕಿಡಿಕಾರಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ. ಡಿ.ಕೆ ಶಿವಕುಮಾರ್​​ ಶಕುನಿ ಇದ್ದಂಗೆ. ಯುದ್ದ ಮುಗಿದ ಮೇಲೆ ನಿಜವಾದ ಶಕುನಿ ಯಾರೆಂದು? ಗೊತ್ತಾಗಲಿದೆ ಎಂದು ಶ್ರೀರಾಮುಲು ಕುಹಕವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತಾಡಿದ ಶಾಸಕ ಶ್ರೀರಾಮುಲು, ಮಹಾ ಭಾರತ ಕಾಲದಲ್ಲಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಶಕುನಿ ಆಟಕ್ಕೆ ಹೇಗೆ ಕೌರವರು ಬಲಿಯಾದರು? ಎಂಬುದು ಕೇಳಿದ್ದೇವೆ. ಹಾಗೆಯೇ ಸಚಿವ ಡಿ.ಕೆ ಶಿವಕುಮಾರ್​​ ಶಕುನಿ ಆಟಕ್ಕೆ ಮೈತ್ರಿ ಸರ್ಕಾರ ಕೂಡ ಪತನವಾಗಲಿದೆ. ಸದ್ಯದಲ್ಲೇ ಇವರ ನಿಜವಾದ ಬಣ್ಣ ಬಯಲಾಗಲಿದೆ ಎಂದರು.

ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ನನಗೆ ಲಗಾಮು ಹಾಕುತ್ತೇನೆ ಎಂದು ಹೇಳಿಕೊಂಡು ಡಿ.ಕೆ.ಶಿವಕುಮಾರ್ ತಿರುಗಾಡುತ್ತಿದ್ದರು. ಸ್ಥಳೀಯ ಮಾಜಿ-ಹಾಲಿ ಶಾಸಕರು ಮತ್ತು ಮಂತ್ರಿಗಳು ಬಳ್ಳಾರಿಯಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಎಷ್ಟೇ ಸರ್ಕಸ್​​ ನಡೆಸಿದರೂ, ಸೋತು ಹೋದರು. ನಾನು ಬೀಸಿದ ಕತ್ತಿಗೆ ಕಾಂಗ್ರೆಸ್​​ ದಿಗ್ಗಜರೇ ಬಲಿಯಾದರು. ಅಂದಿನಿಂದಲೇ ಕಾಂಗ್ರೆಸ್​​ ಪಕ್ಷದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಮೂಲೆ ಗುಂಪಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಶ್ರೀರಾಮುಲು-ರೆಡ್ಡಿ ಪಾಳೆಯಕ್ಕೆ ಸೆಡ್ಡು ಹೊಡೆಯುವ ಏಕೈಕ ನಾಯಕ ಡಿಕೆಶಿ; ಬಳ್ಳಾರಿ ಉಸ್ತುವಾರಿಯಾಗಿ ಮುಂದುವರಿಕೆ!

ಬಿಜೆಪಿ ಸೇರಲು ನನಗೆ ಶ್ರೀರಾಮುಲು ಆಫರ್​​ ಕೊಟ್ಟಿದ್ದರು ಎಂದು ಆರೋಪಿಸಿದ್ದರು. ಬಳ್ಳಾರಿಯಲ್ಲಿ ನಾನೇ ಸುಪ್ರೀಂ ಎಂದು ಮರೆಯುತ್ತಿದ್ದರು. ಚುನಾವಣೆಯಲ್ಲಿ ಸೋತ ಮೇಲೆ ಇತ್ತ ಮುಖ ಕೂಡ ಹಾಕುತ್ತಿಲ್ಲ. ಈ ಶಕುನಿ ಆಟ ಗೊತ್ತಾಗಿದ್ದು ಯುದ್ಧ‌ಮುಗಿದ ಮೇಲೆಯೇ. ಇದೇ ರೀತಿ ಕಾಂಗ್ರೆಸ್​​ನಲ್ಲಿ ಸಾಕಷ್ಟು ನಾಯಕರಿದ್ದಾರೆ. ಪ್ರಚಾರದ ಹುಚ್ಚಿನಿಂದ ಡಿಕೆಶಿ ಹೀಗೆ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಸದಾ ರಾಜಕೀಯ ವೈರುಧ್ಯಗಳಲ್ಲಿ ಮುಳುಗಿ ತೇಲುವ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಶಾಸಕ ಶ್ರೀರಾಮುಲು ಇತ್ತೀಚೆಗೆ ಲೋಕಾಭಿರಾಮವಾಗಿ ಮುಖಾಮುಖಿಯಾಗಿದ್ದರು. ರಾಜಕೀಯ ಕಡುವೈರಿಗಳು ಎಂದೇ ಬಿಂಬಿತರಾಗಿದ್ದ ಇಬ್ಬರೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದರು. ಕುಂದಗೋಳ ಉಪಚುನಾವಣೆಗಾಗಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದ ವೇಳೆ ಉಭಯ ನಾಯಕರು ಹೀಗೆ ಎದುರುಗೊಂಡಿದ್ದರು.

ಇದನ್ನೂ ಓದಿ: ಶ್ರೀರಾಮುಲು V/s ಡಿಕೆಶಿ: ಬಳ್ಳಾರಿ ಉಪಚುನಾವಣೆಯಲ್ಲಿ ಗೆಲುವು ಯಾರಿಗೆ? ಇಲ್ಲಿದೆ ಕಂಪ್ಲೀಟ್​​​ ಡೀಟೇಲ್ಸ್​​..ಇನ್ನು ಮಾಜಿ ಸಚಿವ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರ ಕಿರುಕುಳವೇ ಕಾರಣ ಎಂದು ಶ್ರೀರಾಮುಲು ಕುಂದಗೋಳ ಉಪಚುನಾವಣೆ ಪ್ರಚಾರದ ವೇಳೆ ಗಂಭೀರ ಆರೋಪ ಮಾಡಿದ್ದರು. ಇದರ ವಿರುದ್ಧ ದೂರು ಸಚಿವ ಡಿಕೆ ಶಿವಕುಮಾರ್ ಕೂಡ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದರು.
---------------
First published:June 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ