ಆರ್​ಎಸ್​ಎಸ್​​ ಅನ್ನು ಮುಗಿಸಲು ಇಂದಿರಾ ಗಾಂಧಿಯಿಂದಲೇ ಆಗಲಿಲ್ಲ: ಇನ್ನು ಸಿದ್ದರಾಮಯ್ಯ ಯಾವ ಲೆಕ್ಕ ಎಂದ ಕೆ.ಎಸ್ ಈಶ್ವರಪ್ಪ​

ಇಡೀ ವಿಶ್ವದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ನರೇಂದ್ರ ಮೋದಿಯೋರ್ವ ಆರ್​ಎಸ್​ಎಸ್ ಸ್ವಯಂ ಸೇವಕ.  ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವ ನೀಡಲು ಆರ್​ಎಸ್​ಎಸ್​ ಕಾರಣ- ಕೆ.ಎಸ್​​ ಈಶ್ವರಪ್ಪ

Ganesh Nachikethu | news18
Updated:April 8, 2019, 11:41 AM IST
ಆರ್​ಎಸ್​ಎಸ್​​ ಅನ್ನು ಮುಗಿಸಲು ಇಂದಿರಾ ಗಾಂಧಿಯಿಂದಲೇ ಆಗಲಿಲ್ಲ: ಇನ್ನು ಸಿದ್ದರಾಮಯ್ಯ ಯಾವ ಲೆಕ್ಕ ಎಂದ ಕೆ.ಎಸ್ ಈಶ್ವರಪ್ಪ​
ಸಚಿವ ಈಶ್ವರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
  • News18
  • Last Updated: April 8, 2019, 11:41 AM IST
  • Share this:
ಬಾಗಲಕೋಟೆ(ಏ.08): "ಸಿಎಂ ಎಚ್​​​.ಡಿ ಕುಮಾರಸ್ವಾಮಿಗೆ ಅಯೋಗ್ಯ ಅನ್ನೋ ಪದ ಬೇಸರ ತಂದಿರಬಹುದು. ಹೀಗಾಗಿ ಅಯೋಗ್ಯ ಅನ್ನೋ ಪದ ಬಿಟ್ಟು ಯೋಗ್ಯತೆ ಇಲ್ಲದ ಸಿಎಂ ಅಂತೀನಿ. ನಾಳೆ ಐಟಿ ರೇಡ್ ಮಾಡ್ತಾರೆ ಅಂತ ಸಿಎಂ ಹೇಳಿದಾರೆ. ಇದು ಕಳ್ಳರನ್ನ ತಪ್ಪಿಸಿಕೊಳ್ಳಿ ಅಂತ ಬಾಯ್ಬಿಟ್ಟು ಹೇಳಿದಾಗೇ. ನಿಮ್ಮಲ್ಲಿರೋ ಅಕ್ರಮ ಸಂಪತ್ತು ಮುಚ್ಚಿ ಹಾಕಿಕೊಳ್ಳಿ ಅಂದಹಾಗೇ" ಎಂದು ಮುಖ್ಯಮಂತ್ರಿಗಳು ವಿರುದ್ಧ ಬಿಜೆಪಿ ಹಿರಿಯ ನಾಯಕ ಕೆ.ಎಸ್​​​ ಈಶ್ವರಪ್ಪ ಕಿಡಿಕಾರಿದ್ಧಾರೆ.

ನಗರದಲ್ಲಿ ಸುದ್ದಿಗಾರರ ಜತೆಗೆ ಮಾತಾಡಿದ ಇವರು, ಸಿಎಂ ಹೇಳಿಕೆ ನೀಡಿದ  ಮಾರನೆ ದಿನವೇ ಐಟಿ  ದಾಳಿ ಮಾಡಿದಂಗಾಯ್ತು. ಆದರೂ, ಬರೀ ಸಿಕ್ಕಿದ್ದು ಕೇವಲ 36 ಸಾವಿರ ಅಂತೇಳಿದ್ರು. ಸಿಎಂ ಐಟಿ ದಾಳಿ ಸೂಚನೆ ನೀಡದ ಕೂಡಲೇ ತಮ್ಮ ಶಿಷ್ಯಂದಿರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ರು. ಐಟಿ ರೇಡ್​ನಲ್ಲಿ ಮತ್ತೇ ಹಣ ಸಿಕ್ಕಿದೆ. ಅಧಿಕಾರಿಗಳು ಮತ್ತು ಗುತ್ತಿದಾರರಿಗೆ ದಾಳಿಯಿಂದ ತಪ್ಪಿಸಿಕೊಳ್ಳಿ ಎಂದು ಸೂಚನೆ ನೀಡಿದರು. ಹಾಗಾಗಿ ಸಿಎಂ ಒಬ್ಬ ಅಯೋಗ್ಯ ಅನ್ನೋ ಬದಲು ಯೋಗ್ಯತೆ ಇಲ್ಲದ ಮುಖ್ಯಮಂತ್ರಿ ಸಿಎಂ ಎಂದರು.

ಇನ್ನು ಹೀಗೆ ಮಾತು ಮುಂದುವರೆಸಿದ ಬಿಜೆಪಿ ಶಾಸಕ ಕೆ.ಎಸ್​​ ಈಶ್ವರಪ್ಪನವರು,  ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನೇ ಮುಗಿಸಾಯ್ತು. ಅವರು ಸಿಎಂ ಆಗಿದ್ದಾಗ ಮತ್ತೇ ಮುಂದೆ ಸಿಎಂ ಆಗ್ತೀನಿ ಅಂದಿದ್ರು. ಅಮೇಲೆ ಕಾಂಗ್ರೆಸ್​​ 78ಕ್ಕೆ ಇಳಿದು ಅಸ್ತಿತ್ವವನ್ನೇ ಕಳೆದುಕೊಳ್ತು. ಈಗ ಜೆಡಿಎಸ್ ಮುಗಿಸೋ ಕೆಲಸವನ್ನ ಸಿದ್ದರಾಮಯ್ಯ ಶೇ. ನೂರಕ್ಕೆ ನೂರರಷ್ಟು ಮಾಡುತ್ತಿದ್ಧಾರೆ. ಯಾವ ಕಾರಣಕ್ಕೂ ಸಿದ್ದರಾಮಯ್ಯ ಜೆಡಿಎಸ್ ಗೆಲ್ಲಿಸೋಕೆ ಬಿಡಲ್ಲ ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2019 Pre-poll survey: ಯಾವ ಪಕ್ಷ ಎಷ್ಟು ಸೀಟು ಗೆಲ್ಲಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ನನ್ನ ಸೋಲಿಸಿದ್ರು ಅಂತಾರೆ. ಪರಮೇಶ್ವರನನ್ನ ಕೊರಟಗೇರೆಯಲ್ಲಿ ಸೋಲಿಸಿದವರು, ಜೆಡಿಎಸ್​​ ಪಕ್ಷವನ್ನ ಹೇಗೆ ಬಿಡ್ತಾರೇ. ಸ್ನೇಹ ಮೈತ್ರಿ ಅನ್ನೋದೆ ಕಾಂಗ್ರೆಸ್ ಗೊತ್ತಿಲ್ಲ, ಸ್ನೇಹ ಅಂದ್ರೆ ಬೆನ್ನಿಗೆ ಚೂರಿ ಹಾಕೋದು ಅಂದುಕೊಂಡಿದ್ದಾರೆ. ಇವರ ಮೈತ್ರಿ ಯಶಸ್ವಿ ಆಗಲ್ಲ, ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುತ್ತೇ ಎಂದು ವ್ಯಂಗ್ಯವಾಡಿದರು.

ಹಾಗೆಯೇ ಬಿಜೆಪಿ ಟಿಕೆಟ್ ಸೇಲ್ ಮಾಡುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಗುಂಡೂರಾವ್​​ಗೆ ಹುಚ್ಚ ಹಿಡಿದಿದೆ, ತಲೆಕೆಟ್ಟಿದೆ. ಆರ್​ಎಸ್​​ಎಸ್​​ ಬಗ್ಗೆ ಅವರಿಗೆ ಕಲ್ಪನೆಯೇ ಇಲ್ಲ. ಅದು ರಾಷ್ಟ್ರದಲ್ಲಿ ಯುವಕರಿಗೆ ರಾಷ್ಟ್ರ ಭಕ್ತಿ ಕಲಿಸೋ ಪವಿತ್ರ ಸಂಸ್ಥೆ. ಆರ್​ಎಸ್​​ಎಸ್​ ಹಿಂದುತ್ವದ ಬಗ್ಗೆ ಹೇಳುತ್ತಿದೆ, ಇದು ದಿನೇಶ ಗುಂಡೂರಾವ್​​ಗೆ ಗೊತ್ತಿಲ್ಲ ಎಂದು ಕುಹಕವಾಡಿದರು.

ಗುಂಡೂರಾವ್​​ ಮುಸ್ಲಿಂ ಮಹಿಳೆಯನ್ನ ಮದುವೆಯಾಗಿದ್ದಾರೆ. ಅವರು ನಮಗೆ ಸಹೋದರಿ ಸಮಾನ. ಅದರ ಬಗ್ಗೆ ನಮಗೆ ಯಾವುದೇ ಅನುಮಾನ ಇಲ್ಲ. ಗುಂಡೂರವ್​​ ಅವರನ್ನ ಯಾರು ಬೇಕಾದರೂ ಮದುವೆ ಮಾಡಿಕೊಳ್ಳಲಿ. ಆರ್​ಎಸ್​ಎಸ್​ ನಮ್ಮ ಜೀವನ ಪದ್ದತಿ. ದಿನೇಶ್​​ ಹಾಗೇ ನಮಗೆ ಬಿಟ್ಟಿ ಪ್ರಚಾರ ಬೇಕಿಲ್ಲ. ಈತ ನಿಕೃಷ್ಟ ರಾಜಕಾರಣಿ. ಆರ್​ಎಸ್​ಎಸ್​ ಬಗ್ಗೆ ಮಾತಾಡುವುದು, ಒಂದು ದೊಡ್ಡ ಸಿಂಹದ ಬಗ್ಗೆ ಇರುವೆ ಕೂಗಿದ ಹಾಗೆ ಆಯ್ತು ಎಂದು ಲೇವಡಿ ಮಾಡಿದರು.ಇದನ್ನೂ ಓದಿ: ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್​​-ಬಿಜೆಪಿ ಸರ್ಕಸ್​​; ರಾಜ್ಯದಲ್ಲಿ ಒಂದೇ ದಿನ ಮೋದಿ, ರಾಹುಲ್‌ ದಾಂಗುಡಿ

ಇಡೀ ವಿಶ್ವದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ನರೇಂದ್ರ ಮೋದಿಯೋರ್ವ ಆರ್​ಎಸ್​ಎಸ್ ಸ್ವಯಂ ಸೇವಕ.  ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವ ನೀಡಲು ಆರ್​ಎಸ್​ಎಸ್​ ಕಾರಣ. ನಮ್ಮಂತ ಕೋಟಿ ಕೋಟಿ ಸೇವಕರಿಗೆ ಹೆಮ್ಮೆ. ದಿನೇಶ್ ಗುಂಡೂರಾರ್​​ಗೆ ಆರ್​​ ಎಸ್​ಎಸ್​ ಬಗ್ಗೆ ಏನು ಗೊತ್ತಿಲ್ಲ. ಸಂಘಪರಿವಾರವನ್ನ ಟೀಕಿಸಿದ ಇಂದಿರಾ ಗಾಂಧಿ, ನೆಹರು ಉದ್ಧಾರ ಆಗಲಿಲ್ಲ. ಆರ್​ಎಸ್​ಎಸ್​​ ಅನ್ನು ಮಟ್ಟ ಹಾಕ್ತೀನಿ ಎಂದು ಸಿದ್ದರಾಮಯ್ಯ ಹೇಳಿದ್ರು. ಆರ್​ಎಸ್​ಎಸ್​ ಬೆಳೆಯೋಕೆ ಬಿಡಲ್ಲ  ಎಂದಿದ್ದ ಇಂದಿರಾ ಗಾಂಧಿಯಿಂದಲೇ ಏನು ಮಾಡಲಾಗಲಿಲ್ಲ. ಇನ್ನೂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಯಾವ ಲೆಕ್ಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಪುಲ್ವಾಮಾ ದಾಳಿ 2 ವಷ೯ದ ಹಿಂದೆಯೇ ಗೊತ್ತಿತ್ತು ಎಂದಿದ್ದ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಕೂಡ ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ಧಾರೆ. ಸಿಎಂ ಹೇಳಿಕೆಯೇ ಅವರಿಗೆ ನಮ್ಮ ದೇಶ ಮತ್ತು ರಾಜ್ಯದ ಬಗ್ಗೆ ಎಷ್ಟು ಗೌರವ ಇದೆ ಅನ್ನೋದು ತೋರಿಸುತ್ತಿದೆ. ಸೈನ್ಯವೇ ಉಗ್ರಗಾಮಿಗಳಿಗೆ ಸಹಕಾರ ನೀಡ್ತಿದೆ ಅನ್ನೋ ತರದಲ್ಲಿ ಸಿಎಂ ಹೇಳುತ್ತಿದ್ಧಾರೆ. ಎರಡು ವಷ೯ ಮುಂಚೆ ಗೊತ್ತಿದರೇ ಸೈನಿಕರು ಸಾಯಲಿ ಅಂತ ಕೂತಿದ್ರಾ? ಈ ಮಾತು ಕೇಳಿ ನಿಜಕ್ಕೂ ನೋವಾಗಿದೆ ಎಂದು ತಿಳಿಸಿದರು.
-------------
First published:April 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading