• Home
  • »
  • News
  • »
  • state
  • »
  • B. J. Puttaswamy: ರಾಜಕೀಯದಿಂದ ಸನ್ಯಾಸತ್ವದ ಕಡೆಗೆ ಬಿ.ಜೆ ಪುಟ್ಟಸ್ವಾಮಿ, ಗಾಣಿಗ ಸ್ವಾಮೀಜಿಯಾಗಿ ಪಟ್ಟಾಭಿಷೇಕಕ್ಕೆ ಸಿದ್ಧತೆ

B. J. Puttaswamy: ರಾಜಕೀಯದಿಂದ ಸನ್ಯಾಸತ್ವದ ಕಡೆಗೆ ಬಿ.ಜೆ ಪುಟ್ಟಸ್ವಾಮಿ, ಗಾಣಿಗ ಸ್ವಾಮೀಜಿಯಾಗಿ ಪಟ್ಟಾಭಿಷೇಕಕ್ಕೆ ಸಿದ್ಧತೆ

ಬಿ.ಜೆ ಪುಟ್ಟಸ್ವಾಮಿ

ಬಿ.ಜೆ ಪುಟ್ಟಸ್ವಾಮಿ

ಮಾಜಿ ಸಹಕಾರ ಸಚಿವ, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ, ಬಿಜೆಪಿ ಹಿರಿಯ ನಾಯಕ ಬಿಜೆಪಿ ತೊರೆದು ಸ್ವಾಮೀಜಿ ಆಗ್ತಿದ್ದಾರೆ. ಬಿ.ಜೆ ಪುಟ್ಟಸ್ವಾಮಿ ಸ್ವಾಮೀಜಿಯಾಗಿ ಪಟ್ಟಾಭಿಷೇಕ ಮಾಡಿಸಿಕೊಳ್ಳಲು ರೆಡಿಯಾಗಿದ್ದಾರೆ.

  • Share this:

ಬೆಂಗಳೂರು (ಏ.5) : ಮಾಜಿ ಸಹಕಾರ ಸಚಿವ, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ, ಬಿಜೆಪಿ ಹಿರಿಯ ನಾಯಕ  ಬಿ.ಜೆ ಪುಟ್ಟಸ್ವಾಮಿ (B. J. Puttaswamy)  ಗಾಣಿಗ ಸ್ವಾಮೀಜಿಯಾಗ್ತಿದ್ದಾರೆ.  82 ವರ್ಷ ವಯಸ್ಸಾಗಿರೋ ಬಿ.ಜೆ ಪುಟ್ಟಸ್ವಾಮಿ ಅವ್ರು ಸಂಸಾರ ತೊರೆದು ಸನ್ಯಾಸತ್ವದ (Asceticism) ಕಡೆಗೆ ತೆರಳಿದ್ದಾರೆ. ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ (B.S Yediyurappa) ಅವ್ರ ಅತ್ಯಾಪ್ತನಾಗಿದ್ದ ಬಿ.ಜೆ ಪುಟ್ಟಸ್ವಾಮಿ ಇದೀಗ ಸಂಸಾರ ಹಾಗೂ ರಾಜಕೀಯದ ಜಂಜಾಟ ತೊರೆದು ಸ್ವಾಮೀಜಿ  ಆಗ್ತಿದ್ದಾರೆ. ಬಿ.ಜೆ ಪುಟ್ಟಸ್ವಾಮಿ ಅವ್ರನ್ನು ಗಾಣಿಗ ಸ್ವಾಮೀಜಿಯಾಗಿ ಪಟ್ಟಾಭಿಷೇಕ (Coronation) ಮಾಡಲಾಗ್ತಿದೆ.  ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.


ಬಿ.ಜೆ ಪುಟ್ಟಸ್ವಾಮಿ ದಿಢೀರ್ ಸನ್ಯಾಸತ್ವಕ್ಕೆ ಕಾರಣವೇನು


ಸನ್ಯಾಸ್ವ ಪಡೆದು ಸ್ವಾಮೀಜಿ ಆಗಲು ಹೊರಟಿರೋ ಬಿ.ಜೆ ಪುಟ್ಟಸ್ವಾಮಿ, ಗಾಣಿಗ ಸಮುದಾಯದ ಮೊದಲ ಸ್ವಾಮೀಜಿ ಆಗ್ತಿದ್ದಾರೆ. ಅವರೇ ಈ ಬಗ್ಗೆಅಧಿಕೃತವಾಗಿ ಘೋಷಿಸಿದ್ದಾರೆ. ಅಷ್ಟೆ ಅಲ್ಲದೇ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ರಾಜಕೀಯ ನಾಯಕರಿಗೆ ಖುದ್ದು ಆಹ್ವಾನ ನೀಡುತ್ತಿದ್ದಾರೆ.  ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಸಿದ್ದರಾಮಯ್ಯಗೆ ಶಾಲು ಹೊದಿಸಿ ಮೈಸೂರು ಪೇಠ ತೊಡಿಸಿ, ಹಾರ ಹಾಕಿ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಬಿ.ಜೆ ಪುಟ್ಟಸ್ವಾಮಿ


ಬಿಜೆ ಪುಟ್ಟಸ್ವಾಮಿ  ಅಲ್ಲ ಶ್ರೀ ಪೂರ್ಣಾನಂದ ಪುರಿ ಸ್ವಾಮಿ 


ಗಾಣಿಗ ಸ್ವಾಮೀಜಿಗಳಾಗಿ ಪಟ್ಟಾಭಿಷೇಕ ಮಾಡಿಸಿಕೊಳ್ಳಲು ರೆಡಿಯಾಗಿರೋ ಬಿ.ಜೆ ಪುಟ್ಟಸ್ವಾಮಿ ಅವರ ಹೆಸರನ್ನು ಸಹ ಬದಲಾಯಿಸಲಾಗ್ತಿದೆ. ಬಿ.ಜೆ ಪುಟ್ಟಸ್ವಾಮಿಗೆ ಶ್ರೀ ಪೂರ್ಣಾನಂದ ಪುರಿ ಸ್ವಾಮಿ ಎಂದು ನಾಮಕರಣ ಮಾಡಲಾಗ್ತಿದೆ.


ಯಡಿಯೂರಪ್ಪ ಅವರ ಅತ್ಯಾಪ್ತರಾಗಿದ್ರು


ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿ.ಜೆ ಪುಟ್ಟಸ್ವಾಮಿ ಅವರು ರಾಜಕೀಯ ಕಾರ್ಯದರ್ಶಿ ಆಗಿದ್ದರು. ಯಡಿಯೂರಪ್ಪ ಜೊತೆಗೆ ಕೆಜೆಪಿಗೆ ಹೋಗಿ ಪರಿಷತ್ ಸ್ಥಾನ ಕಳೆದುಕೊಂಡಿದ್ದರು.  ಹಾವೇರಿಯಲ್ಲಿ ನಡೆದ B. S. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ  ಜಾಥದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿತ್ತು.


ಯಡಿಯೂರಪ್ಪ ವಿರೋಧ ಕಟ್ಟಿಕೊಂಡಿದ್ರು


ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತ ಬಿ.ಜೆ.ಪುಟ್ಟಸ್ವಾಮಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಪರಿಷತ್ ಸ್ಥಾನಕ್ಕೆ ಆಯ್ಕೆ ವಿಚಾರದಲ್ಲಿ ಅವರು ಯಡಿಯೂರಪ್ಪ ವಿರುದ್ದ ಅಸಮಾಧಾನಗೊಂಡಿದ್ದರು. ಆ ನಂತರ ಯಡಿಯೂರಪ್ಪ ವಿರೋಧ ಕಟ್ಟಿಕೊಂಡಿದ್ದರು. ಈಗಲೂ ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಆಗಿದ್ದರು.


ಇದನ್ನೂ ಓದಿ: ಪ್ರಧಾನಿ ಸ್ಥಾನ ಬಿಟ್ಟು ಬಂದ ಕುಟುಂಬ ನಮ್ಮದು; ಇದ್ಯಾವುದೋ ಸಿಎಂ ಕುರ್ಚಿ ಮೇಲೆ ಆಸೆನಾ?; HDK


ಯಡಿಯೂರಪ್ಪ ಬಗ್ಗೆ ದಾಖಲೆಗಳ ಸರಮಾಲೆ


ಈಗಲೂ ಬಿ.ಜೆ ಪುಟ್ಟಸ್ವಾಮಿ ಅವ್ರು ಯಡಿಯೂರಪ್ಪ ವಿರೋಧಿ ಬಣದಲ್ಲೇ ಗುರುತಿಸಿಕೊಂಡಿದ್ರು. ಹಾಗಾಗೇ ಯಡಿಯೂರಪ್ಪ ವಿರುದ್ಧ ಸಿಟ್ಟು ಹೊರಹಾಕುತ್ತಿದ್ದರು. ಯಡಿಯೂರಪ್ಪ ಕುರಿತು ದಾಖಲೆಗಳ ಸರಮಾಲೆಯನ್ನೆ ಇಟ್ಟುಕೊಂಡಿರುವ ಬಿಜೆ ಪುಟ್ಟಸ್ವಾಮಿ ತಮ್ಮ ನಿವಾಸದಲ್ಲಿ ದಾಖಲೆಗಳ ಪ್ರದರ್ಶನ ಮಾಡಿದ್ದಾರೆ.


ರಾಜೀನಾಮೆ ಹಿಂಪಡೆದಿದ್ದ ಪುಟ್ಟಸ್ವಾಮಿ

ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ನಾಯಕರಾದ ಬಿ.ಜೆ.ಪುಟ್ಟಸ್ವಾಮಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ತಾವು ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದರು. ರಾಜ್ಯ ವಿರೋಧ ಪಕ್ಷದ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಧಾನದ ಬಳಿಕ ಪುಟ್ಟಸ್ವಾಮಿ ತಮ್ಮ ರಾಜೀನಾಮೆ ಹಿಂದೆ ಪಡೆದಿದ್ರು. ಹಾಗೇ ಅವರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಮುಂದುವರಿಯಲು ಒಪ್ಪಿಕೊಂಡಿದ್ರು
ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ ಪುಟ್ಟಸ್ವಾಮಿ "ಯಡಿಯೂರಪ್ಪ  ತನ್ನೊಂದಿಗೆ ನಡೆಸೊ ಮಾತುಕತೆ, ನೀಡಿದ ಆದೇಶವನ್ನು ಮನ್ನಿಸಿರುವ ನಾನು ಪ್ರಧಾನಿ ಮೋದಿ ಅವರ ಕಾರ್ಯಕ್ಷಮತೆಯನ್ನು ಬೆಂಬಲಿಸುವುದರೊಡನೆ  ತಾನು ನೀಡಿದ್ದ ರಾಜೀನಾಮೆಯನ್ನು ಹಿಂಪಡೆಯುತ್ತೇನೆ" ಎಂದು ಬರೆದುಕೊಂಡಿದ್ರು.

Published by:ಪಾವನ ಎಚ್ ಎಸ್
First published: