ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ಪಡೆಯುತ್ತಿದ್ದಾರೆ, ದೆಹಲಿ ಗಲಭೆಗೆ ಅವರೇ ಹೊಣೆ; ಹೆಚ್​ಡಿಕೆ

ಇದು ಹಿಂದೂ ರಾಷ್ಟ್ರವೇ, ಬಿಜೆಪಿಯವರು ಹೊಸದಾಗಿ ಏನನ್ನೂ ಮಾಡುವ ಅಗತ್ಯವಿಲ್ಲ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಅಮಾಯಕರನ್ನು ಬಲಿಕೊಡದಿದ್ದರೆ ಅಷ್ಟೇ ಸಾಕು. ಪ್ರಸ್ತುತ ದೆಹಲಿ ಗಲಭೆಗೆ ಕೇಂದ್ರ ಬಿಜೆಪಿ ನಾಯಕರೇ ಕಾರಣ, ಕಾಲಚಕ್ರ ಬದಲಾದಂತೆ ಜನ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ

  • Share this:
ರಾಮನಗರ (ಫೆಬ್ರವರಿ 27); ದೆಹಲಿಯಲ್ಲಿ ನಡೆಯುತ್ತಿರುವ ಗಲಭೆ ಮತ್ತು ಹಿಂಸಾಚಾರಕ್ಕೆ ಕೇಂದ್ರ ಬಿಜೆಪಿ ಸರ್ಕಾರವೇ ಹೊಣೆ, ಬಿಜೆಪಿ ನಾಯಕರು ತಮ್ಮ ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ಪಡೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ದೆಹಲಿ ಗಲಭೆಯ ಕುರಿತು ಇಂದು ರಾಮನಗರದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಕುಮಾರಸ್ವಾಮಿ, “ಬಿಜೆಪಿ ನಾಯಕರು ಒಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕರೆದುಕೊಂಡು ಗುಜರಾತ್​ನಲ್ಲಿ ಮೆರವಣಿಗೆ ಮಾಡ್ತಾರೆ, ಮತ್ತೊಂದೆಡೆ ದೆಹಲಿಯಲ್ಲಿ ಗಲಭೆಯನ್ನೂ ಮಾಡ್ತಾರೆ. ಹೀಗೆ ಮಾಡಿದರೆ ನಮ್ಮ ದೇಶದ ಬಗ್ಗೆ ಅವರಿಗೆ ಯಾವ ಮಟ್ಟದ ಗೌರವ ಬರಬಹುದು.

ಇದು ಹಿಂದೂ ರಾಷ್ಟ್ರವೇ, ಬಿಜೆಪಿಯವರು ಹೊಸದಾಗಿ ಏನನ್ನೂ ಮಾಡುವ ಅಗತ್ಯವಿಲ್ಲ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಅಮಾಯಕರನ್ನು ಬಲಿಕೊಡದಿದ್ದರೆ ಅಷ್ಟೇ ಸಾಕು. ಪ್ರಸ್ತುತ ದೆಹಲಿ ಗಲಭೆಗೆ ಕೇಂದ್ರ ಬಿಜೆಪಿ ನಾಯಕರೇ ಕಾರಣ, ಕಾಲಚಕ್ರ ಬದಲಾದಂತೆ ಜನ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ" ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಎಚ್​.ಎಸ್. ದೊರೆಸ್ವಾಮಿ ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆಂದು ಗೊತ್ತಿದೆ; ಫೇಸ್​ಬುಕ್​ನಲ್ಲಿ ಯತ್ನಾಳ್ ವಾಗ್ದಾಳಿ

“ದೆಹಲಿಯ ಗಲಭೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ಕುರಿತು ಸರ್ಕಾರದ ಗಮನ ಸೆಳೆದು ಗಲಭೆಗೆ ಕಡಿವಾಣ ಹಾಕುವುದು ನ್ಯಾಯಾಲಯಗಳ ಕರ್ತವ್ಯ. ಆದರೆ, ಈ ಬಗ್ಗೆ ನ್ಯಾಯಾಧೀಶ ಮುರಳೀಧರ್ ಕೇಂದ್ರ ಸರ್ಕಾರದ ಪ್ರತಿಕ್ರಿಯಿ ನೀಡಿದ ಮಾತ್ರಕ್ಕೆ ಇಂದು ಅವರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ಯಾರು ಏನೇ ಮಾತನಾಡಿದರೂ ಇದೇ ನಡೆಯುತ್ತಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧವೂ ಮಾತನಾಡಿರುವ ಕುಮಾರಸ್ವಾಮಿ, “ದೊರೆಸ್ವಾಮಿಯವರು ಸ್ವಾತಂತ್ರ್ಯ ಹೋರಾಟ ಮಾಡುವಾಗ ಇವರು ಹುಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಅವರ ಹೋರಾಟದ ಬೆಲೆ ಈ ಮನುಷ್ಯನಿಗೆ ಹೇಗೆ ತಾನೆ ಗೊತ್ತಾಗಬೇಕು? ಯಾವ್ದೋ ಆರ್​ಎಸ್ಎಸ್ ತಿಲಕ, ಫಲಕ ಇಟ್ಕಂಡು ಬಂದು ಇವು ಆಟ ಆಡ್ತಿವೆ, ಆಡಲಿ ಬಿಡಿ. ಈ ವ್ಯಕ್ತಿ ಸಿಎಂ ಬಗ್ಗೆಯೂ ಹಾಗೆಯೇ ಮಾತಾನಾಡ್ತಾರೆ ಹೀಗಾಗಿ ಇಂತವರ ಮಾತಿಗೆ ಗೌರವ ನೀಡುವ ಅವಶ್ಯಕತೆ ಇಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ದೊರೆಸ್ವಾಮಿಯವರು ಪಕ್ಷಾತೀತರಾಗಿ ನಡೆದುಕೊಳ್ಳಬೇಕು; ಯತ್ನಾಳ್​ ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ
First published: