ಕೆಆರ್ ಪೇಟೆ ಉಪಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಇಲ್ಲಿವೆ ಪ್ರಮುಖ ಆಶ್ವಾಸನೆಗಳು

ಕೆಆರ್ ಪೇಟೆಯ ಶೇ. 80ರಷ್ಟು ಹಳ್ಳಿಗಳಲ್ಲಿ ಸರಿಯಾದ ರಸ್ತೆ ಇಲ್ಲ. ಹಲವು ಭಾಗಗಳಲ್ಲಿ ನೀರಿನ ಹಾಹಾಕಾರವಿದೆ. ಯುವಕರು ಉದ್ಯೋಗಕ್ಕೆ ಬೇರೆ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆದು ಇಲ್ಲೇ ಉದ್ಯೋಗ ಸೃಷ್ಟಿಯಾಗುವಂತೆ ಮಾಡಬೇಕು. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಮಾಡಿದ್ದೇವೆ ಎಂದು ವಿಜಯೇಂದ್ರ ಹೇಳಿದ್ಧಾರೆ.

news18
Updated:December 2, 2019, 6:30 PM IST
ಕೆಆರ್ ಪೇಟೆ ಉಪಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಇಲ್ಲಿವೆ ಪ್ರಮುಖ ಆಶ್ವಾಸನೆಗಳು
ಬಿವೈ ವಿಜಯೇಂದ್ರ
  • News18
  • Last Updated: December 2, 2019, 6:30 PM IST
  • Share this:
ಮಂಡ್ಯ(ಡಿ. 03): ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ ತೀವ್ರ ಹಣಾಹಣಿ ಕಾಣುತ್ತಿರುವ ಕ್ಷೇತ್ರಗಳಲ್ಲಿ ಕೆಆರ್ ಪೇಟೆಯೂ ಒಂದು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಮಧ್ಯೆ ಯಾವಾಗಲೂ ನೇರ ಪೈಪೋಟಿ ಕಾಣುವ ಈ ಕ್ಷೇತ್ರದಲ್ಲಿ ಇದೆ ಮೊದಲ ಬಾರಿಗೆ ಬಿಜೆಪಿಯಿಂದ ಪ್ರಬಲ ಪೈಪೋಟಿಯಾಗಿ ತ್ರಿಕೋನ ಫೈಟ್ ನಡೆದಿದೆ. ಯಡಿಯೂರಪ್ಪ ಹುಟ್ಟೂರು ಬೂಕನಕೆರೆ ಇದೇ ಕ್ಷೇತ್ರದಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹೆಚ್ಚು ಅಸ್ಥೆಯಿಂದ ಪ್ರಚಾರ ಮಾಡುತ್ತಿದ್ಧಾರೆ. ಬಿಎಸ್​ವೈ ಮಗ ಬಿ.ವೈ. ರಾಘವೇಂದ್ರ ಅವರು ಕ್ಷೇತ್ರದ ಮೇಲೆ ಹೆಚ್ಚು ಹರಿಸಿದ್ದಾರೆ.

ಇಂದು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಿದ ಬಿ.ವೈ. ವಿಜಯೇಂದ್ರ ಹಾಗೂ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಧ್ಯೇಯೋದ್ದೇಶಗಳನ್ನೊಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. “ನವ ಕೃಷ್ಣರಾಜಪೇಟೆ ನಿರ್ಮಾಣ, ಭಾರತೀಯ ಜನತಾ ಪಾರ್ಟಿ ವಾಗ್ದಾನ” ಶೀರ್ಷಿಕೆಯ ಈ ಪ್ರಣಾಳಿಕೆಯಲ್ಲಿ ಕೃಷಿ ನೀರಾವರಿ ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಹೊಸ ಸರ್ಕಾರವಲ್ಲ, ಫಲಿತಾಂಶದ ಬಳಿಕ ಕಾಂಗ್ರೆಸ್​ ಕಚೇರಿಗೆ ದೀಪ ಹಚ್ಚೋರೂ ಗತಿಯಿರಲ್ಲ; ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯ

ಬಿಜೆಪಿ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು:

1) ಕೆ ಆರ್ ಪೇಟೆಯನ್ನ ಅಭಿವೃದ್ದಿ ಹೊಂದಿದ ತಾಲೂಕಾಗಿ ಮಾಡುವುದು.
2) ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮುಕ್ತಗೊಳಿಸುವುದು.
3) ಕೃಷಿ ನೀರಾವರಿಗೆ ಹೆಚ್ಚಿನ ಆದ್ಯತೆ ಕೊಡುವುದು.4) ನೀರಾವರಿ ಕೊರತೆ ನೀಗಿಸಲು ಶಾಶ್ವತ ನೀರಾವರಿ ಯೋಜನೆ ಜಾರಿ.
5) ಹೇಮಾವತಿ ನಾಲೆಗಳ ದುರಸ್ಥಿ ಸೇರಿದಂತೆ ನೀರಾವರಿ ಮತ್ತು ಕೃಷಿಗೆ ಸಂಬಂಧಪಟ್ಟಂತೆ ಸಮಗ್ರ ಅಭಿವೃದ್ಧಿ.
6) ಕ್ಷೇತ್ರದ ಎಲ್ಲಾ ಹಳ್ಳಿಗಳ ರಸ್ತೆಗಳ ಅಭಿವೃದ್ದಿ.
7) ಅಗತ್ಯವಿರುವ ಕಡೆ ಸರ್ಕಾರಿ ಶಾಲಾ ಕಟ್ಟಡಗಳ ನವೀಕರಣ.
8) ಕ್ಷೇತ್ರದ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು.

ಕೆಆರ್ ಪೇಟೆ ಅಭಿವೃದ್ಧಿ ಯಡಿಯೂರಪ್ಪ ಕನಸು: ವಿಜಯೇಂದ್ರ

ಕೆಆರ್ ಪೇಟೆಯು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹುಟ್ಟೂರಿನ ಕ್ಷೇತ್ರವಾಗಿದೆ. ಇದರ ಸಮಗ್ರ ಅಭಿವೃದ್ಧಿಯ ಮಾಡುವ ಕನಸು ಅವರಿಗಿದೆ. ಅತ್ಯಂತ ಹಿದುಳಿದಿರುವ ಈ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರಣಾಳಿಕೆಗಳ ಮೂಲಕ ಈ ಅಭಿವೃದ್ಧಿ ಆಶಯಗಳ ಪಟ್ಟಿ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ಕುಮಟಳ್ಳಿಯನ್ನು ಗೆಲ್ಲಿಸಿ ಅಥಣಿ ಮತದಾರರು ಗಂಡಸರು ಎಂದು ತೋರಿಸಿ: ಲಕ್ಷ್ಮಿ ಹೆಬ್ಬಾಳ್ಕರ್​​ಗೆ ಯತ್ನಾಳ ತಿರುಗೇಟು

ಕೆಆರ್ ಪೇಟೆಯ ಶೇ. 80ರಷ್ಟು ಹಳ್ಳಿಗಳಲ್ಲಿ ಸರಿಯಾದ ರಸ್ತೆ ಇಲ್ಲ. ಹಲವು ಭಾಗಗಳಲ್ಲಿ ನೀರಿನ ಹಾಹಾಕಾರವಿದೆ. ಯುವಕರು ಉದ್ಯೋಗಕ್ಕೆ ಬೇರೆ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆದು ಇಲ್ಲೇ ಉದ್ಯೋಗ ಸೃಷ್ಟಿಯಾಗುವಂತೆ ಮಾಡಬೇಕು. ಮಂಡ್ಯ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಗಳನ್ನು ಪುನಾರಂಭಿಸಬೇಕು. ಮಹಿಳೆಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಬೇಕು. ಕೋಡಿ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂಬ ಕೂಗು ಇದೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಮಾಡಿದ್ದೇವೆ ಎಂದು ವಿಜಯೇಂದ್ರ ಹೇಳಿದ್ಧಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ| ಕೆ. ಅಶ್ವತ್ಥ ನಾರಾಯಣ, ಯಡಿಯೂರಪ್ಪಗೆ ಅಧಿಕಾರ ದೊರೆತಾಗೆಲ್ಲಾ ಕೆಆರ್ ಪೇಟೆ ಕ್ಷೇತ್ರವನ್ನ ಅಭಿವೃದ್ಧಿಪಡಿಸಿದ್ದಾರೆ. 2008ರಲ್ಲಿ ಈ ಕ್ಷೇತ್ರಕ್ಕೆ 800 ಕೋಟಿಗೂ  ಹೆಚ್ಚು ಅನುದಾನ ಕೊಟ್ಟಿದ್ದರು. ಅವರ ಮಗ ವಿಜಯೇಂದ್ರ ಅವರಿಗೆ ಈ ಕ್ಷೇತ್ರದೊಂದಿಗೆ ಭಾವನಾತ್ಮಕ ಸಂಬಂಧ ಇದೆ. ಅವರು ತುಂಬಾ ಆಸಕ್ತಿಯಿಂದ ಇಲ್ಲಿ ಕೆಲಸ ಮಾಡುತ್ತಿದ್ಧಾರೆ ಎಂದು ಬಿ.ವೈ.ವಿ.ಯನ್ನು ಡಿಸಿಎಂ ಹಾಡಿಹೊಗಳಿದ್ದಾರೆ.

ಜೆಡಿಎಸ್ ಪಕ್ಷದಲ್ಲಿದ್ದ ನಾರಾಯಣಗೌಡ ಅವರು ಬಿಜೆಪಿಗೆ ಪಕ್ಷಾಂತರಗೊಂಡು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಕೆ.ಬಿ. ಚಂದ್ರಶೇಖರ್, ಜೆಡಿಎಸ್​ನಿಂದ ಬಿ.ಎಲ್. ದೇವರಾಜು ಅವರು ಕಣದಲ್ಲಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading