ಬಿಜೆಪಿ-ಜೆಡಿಎಸ್ ಬೆಂಬಲಿಗರ​ ನಡುವೆ ಮಾರಾಮಾರಿ; ಸೂರಜ್​ ರೇವಣ್ಣ ವಿರುದ್ಧ ಎಫ್​ಐಆರ್​ ದಾಖಲು

ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದೀರಿ ಎಂದು ಯುವಕರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ನವೀನ್ ಮತ್ತು ಆನಂದ್ ಬೆಂಗಳೂರಿನಿಂದ ಬಂದು ಹಣ ಹಂಚುತ್ತಿದ್ದಾರೆಂದು ಆರೋಪವೂ ಇದೆ. ಸಂತೋಷ್ ಮತ್ತು ಗಿರೀಶ್ ಇತ್ತೀಚಿಗೆ ಬಿಜೆಪಿ ಸೇರ್ಪಡೆಯಾಗಿದ್ದರು.

Latha CG | news18-kannada
Updated:December 4, 2019, 10:58 AM IST
ಬಿಜೆಪಿ-ಜೆಡಿಎಸ್ ಬೆಂಬಲಿಗರ​ ನಡುವೆ ಮಾರಾಮಾರಿ; ಸೂರಜ್​ ರೇವಣ್ಣ ವಿರುದ್ಧ ಎಫ್​ಐಆರ್​ ದಾಖಲು
ಸೂರಜ್​ ರೇವಣ್ಣ
  • Share this:
ಹಾಸನ,(ಡಿ.04): ಉಪಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಎಲ್ಲರ ಚಿತ್ತ ನಾಳೆಯ ಮತದಾನದ ಕಡೆಗೆ ನೆಟ್ಟಿದೆ. ಹೈ ವೋಲ್ಟೇಜ್​ ಕ್ಷೇತ್ರವಾಗಿರುವ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್​ ನಡುವೆ ಮಾರಾಮಾರಿ ನಡೆದಿದ್ದು, ಮಾಜಿ ಸಚಿವ ರೇವಣ್ಣ ಪುತ್ರ ಸೂರಜ್​ ರೇವಣ್ಣ ವಿರುದ್ಧ ಎಫ್​ಐಆರ್​ ದಾಖಲಾಗಿದೆ. 

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಸಂತೋಷ್​​ ಎಂಬುವರ ತೋಟದ ಮನೆಯಿಂದ ಕೆ.ಆರ್​.ಪೇಟೆ ಉಪಚುನಾವಣೆಗೆ ಹಣ ಸಾಗಿಸುತ್ತಿದ್ದಾರೆಂದು, ಮಾಜಿ ಸಚಿವ ರೇವಣ್ಣ ಪುತ್ರ ಸೂರಜ್​ ರೇವಣ್ಣ ಬೆಂಬಲಿಗರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಿಜೆಪಿ ಮತ್ತು ಜೆಡಿಎಸ್​ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

ರಾಣೆಬೆನ್ನೂರು ಕೈ ಅಭ್ಯರ್ಥಿ ಕೋಳಿವಾಡ ಮನೆ ಮೇಲೆ ಐಟಿ ದಾಳಿ; ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಹೀಗಾಗಿ ಸೂರಜ್​ ರೇವಣ್ಣ ವಿರುದ್ಧ ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಕೊಲೆ ಯತ್ನ ಮಾಡಿದ್ದಾರೆ ಎಂದು ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಸೂರಜ್​ ವಿರುದ್ಧ ಎಫ್​​ಐಆರ್​​ ದಾಖಲಾಗಿದೆ. ಸೂರಜ್​ ರೇವಣ್ಣ ಸೇರಿ ಮೋಹನ, ಸುಮಂತ, ಮಂಜು ಅಲಿಯಾಸ್ ಚಿಟ್ಟೆ ಮಂಜು, ಪ್ರದೀಪ್ ಮತ್ತು ಕಿರಣ ಎಂಬುವರ ವಿರುದ್ದ ಎಫ್ ಐಆರ್ ದಾಖಲಾಗಿದೆ.

ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದೀರಿ ಎಂದು ಯುವಕರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ನವೀನ್ ಮತ್ತು ಆನಂದ್ ಬೆಂಗಳೂರಿನಿಂದ ಬಂದು ಹಣ ಹಂಚುತ್ತಿದ್ದಾರೆಂದು ಆರೋಪವೂ ಇದೆ. ಸಂತೋಷ್ ಮತ್ತು ಗಿರೀಶ್ ಇತ್ತೀಚಿಗೆ ಬಿಜೆಪಿ ಸೇರ್ಪಡೆಯಾಗಿದ್ದರು.

ಮನೆ ಮನೆ ಪ್ರಚಾರಕ್ಕೆ ಇಂದೇ ಕೊನೆ; 15 ಕ್ಷೇತ್ರದ ಎಲ್ಲಾ ಮನೆಗಳಿಗೂ ತೆರಳುವಂತೆ ಕಾರ್ಯಕರ್ತರಿಗೆ ಸೂಚಿಸಿದ ಬಿಎಸ್​ವೈ
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading