ರಾಜ್ಯಸಭೆ ಟಿಕೆಟ್ ಸಿಕ್ಕಿದ್ದು ಕೆಲಸ ಮಾಡುವ ಉತ್ಸಾಹ ಹೆಚ್ಚಿಸಿದೆ: ಡಾ. ಕೆ ನಾರಾಯಣ
ನಿನ್ನೆ ಮಧ್ಯಾಹ್ನದವರೆಗೂ ನನಗೆ ಸುಳಿವು ಇರಲಿಲ್ಲ. ಸಂಘ ಪರಿವಾರದ ಕಾರ್ಯಗಳಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿದ್ದ ನನ್ನಂಥ ಸಾಮಾನ್ಯ ಕಾರ್ಯಕರ್ತನನ್ನ ಪರಿಗಣಿಸಿರುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ರಾಜ್ಯಸಭಾ ಅಭ್ಯರ್ಥಿ ಕೆ ನಾರಾಯಣ ತಿಳಿಸಿದ್ಧಾರೆ.
news18-kannada Updated:November 18, 2020, 2:39 PM IST

ಡಾ. ಕೆ ನಾರಾಯಣ
- News18 Kannada
- Last Updated: November 18, 2020, 2:39 PM IST
ಬೆಂಗಳೂರು, ನ. 18: ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಡಾ. ಕೆ ನಾರಾಯಣ ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಕೆ.ಎಸ್. ಈಶ್ವರಪ್ಪ, ನಾರಾಯಣ ಗೌಡ, ಆರ್ ಅಶೋಕ್, ಬಿಜೆಪಿ ಮುಖ್ಯ ಸಚೇತಕ ಸುನೀಲ್ ಕುಮಾರ್ ಮೊದಲಾದವರು ಬಿಜೆಪಿ ಅಭ್ಯರ್ಥಿ ಜೊತೆ ಇದ್ದರು. ಇದಕ್ಕೂ ಮುನ್ನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ನಾರಾಯಣ ಅವರು, ತಾನುನು ನಿರೀಕ್ಷೆ ಮಾಡದೇ ಇರುವ ರಾಜ್ಯಸಭೆ ಟಿಕೆಟ್ ಅನ್ನು ಪಕ್ಷ ನೀಡಿದೆ. ಇದರಿಂದ ಕೆಲಸ ಮಾಡುವ ಉತ್ಸಾಹ ಮತ್ತಷ್ಟು ಹೆಚ್ಚಿದೆ ಎಂದು ತಿಳಿಸಿದರು.
ಯಾವ ನಿರೀಕ್ಷೆಯನ್ನೂ ನಾನು ಇರಿಸಿಕೊಂಡಿರಲಿಲ್ಲ. ನಿನ್ನೆ ಮಧ್ಯಾಹ್ನದವರೆಗೂ ನನಗೆ ಏನೂ ಗೊತ್ತಿರಲಿಲ್ಲ. ಮಧ್ಯಾಹ್ನ ನನಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಲಾಯಿತು. ದೆಹಲಿ ನಾಯಕರು ನನ್ನ ಹೆಸರು ಆಯ್ಕೆ ಮಾಡಿದ್ದಾರೆ. ಯಾವ ರೀತಿ ಆಯ್ಕೆ? ಮಾನದಂಡವೇನು? ಎನ್ನುವುದು ನನಗೆ ಗೊತ್ತಿಲ್ಲ. ಪರಿಷತ್, ಜಿಲ್ಲಾ ಪಂಚಾಯತ್ ನಂತಹ ಸ್ಥಾನದಲ್ಲಿ ಯಾವ ಕೆಲಸವನ್ನು ನಾನು ಮಾಡಿಲ್ಲ. ನಾಲ್ಕೈದು ದಶಕಗಳಿಂದ ಸಮಾಜ ಸೇವೆ ಮಾಡಿದ್ದೇನೆ. ಬಿಜೆಪಿ ಹಾಗೂ ಸಂಘ ಪರಿವಾರದ ಜೊತೆ ಸಂಪರ್ಕ ಮಾತ್ರ ಇತ್ತು. ಅದರ ಜೊತೆ ಕೆಲಸ ಮಾಡಿಕೊಂಡಿದ್ದೆ ಎಂದರು. ಇದನ್ನೂ ಓದಿ: ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದ ಅಜಿತ್ ಪವಾರ್ ಹೇಳಿಕೆಗೆ ವ್ಯಾಪಕ ಖಂಡನೆ
ಬಿಜೆಪಿಯಲ್ಲಿ ಮಾತ್ರ ಇಂತಹ ಬೆಳವಣಿಗೆ ಆಗುತ್ತದೆ. ಬೇರೆ ಕಡೆ ಆಗಲು ಸಾಧ್ಯವಿಲ್ಲ. ಸಾಮಾನ್ಯ ಕಾರ್ಯಕರ್ತನನ್ನು ಹುಡುಕಿ ಅವಕಾಶ ಕೊಡುವ ಗುಣ ಈ ಪಕ್ಷದಲ್ಲಿ ಬಂದಿದೆ, ಮೋದಿ ಬಂದ ನಂತರ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಹೆಚ್ಚು ಸಿಗುತ್ತಿದೆ. ಎಲ್ಲಾ ಕಾರ್ಯಕರ್ತರಿಗೆ ಮುಂದೆ ಇದು ಸ್ಫೂರ್ತಿಯಾಗಲಿದೆ. ನಮಗೂ ಕೂಡ ಹೆಚ್ಚಿನ ಕೆಲಸ ಮಾಡಲು ಇದು ಸ್ಫೂರ್ತಿಯಾಗಲಿದೆ, ಆಸಕ್ತಿ ಬರಲಿದೆ. ರಾಜ್ಯಸಭಾ ಸ್ಥಾನಕ್ಕೆ ನನ್ನ ಹೆಸರು ಪರಿಗಣನೆ ಮಾಡಿದ ಕೇಂದ್ರದ ಎಲ್ಲ ನಾಯಕರಿಗೂ ರಾಜ್ಯದ ಎಲ್ಲ ನಾಯಕರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ಇದನ್ನೂ ಓದಿ: ಮಕ್ಕಳ ಮಧ್ಯಾಹ್ನದ ಊಟ ನೀಡಲು ಯೋಗ್ಯತೆಯಿಲ್ಲ, ಈಗ ಪ್ರಾಧಿಕಾರಕ್ಕೆ ಹಣ ಎಲ್ಲಿಂದ ಬಂತು; ಸಿದ್ದರಾಮಯ್ಯ ಪ್ರಶ್ನೆ
ಇದೇ ವೇಳೆ, ಡಾ. ನಾರಾಯಣ್ ಅವರು ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿ ಆಗಿರುವುದಕ್ಕೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಂತಸ ವ್ಯಕ್ತಪಡಿಸಿದರು. ನಲವತ್ತೈದು ವರ್ಷಗಳಿಂದ ನಮ್ಮ ಒಡನಾಟದಲ್ಲಿ ಇದ್ದಾರೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಕಹಳೆ ಎನ್ನುವ ಪತ್ರಿಕೆ ನಡೆಸಿದವರು ಅವರು. ನಮ್ಮ ಸಂಘ ಪರಿವಾರದ ಜೊತೆ ನಿರಂತರವಾಗಿ ನಿಂತವರು. ಅಂಥ ಕಾರ್ಯಕರ್ತರಿಗೆ ಇಂದು ಉನ್ನತ ಸ್ಥಾನಕ್ಕೆ ಪಕ್ಷ ಆಯ್ಕೆ ಮಾಡಿದೆ. ಇದು ಕಾರ್ಯಕರ್ತರಿಗೆ ನೀಡುವ ಪ್ರೋತ್ಸಾಹವಾಗಿದೆ ಎಂದು ಕಟೀಲ್ ಅಭಿಪ್ರಾಯಪಟ್ಟರು.
ಡಾ. ಕೆ ನಾರಾಯಣ್ ಅವರು ಸ್ಪಾನ್ ಪ್ರಿಂಟ್ ಎಂಬ ಮುದ್ರಣ ಸಂಸ್ಥೆಯನ್ನ ಬೆಂಗಳೂರಿನಲ್ಲಿ ಹೊಂದಿದ್ದಾರೆ. ಭಾರತದ ಏಕೈಕ ಸಂಸ್ಕೃತ ನಿಯತಕಾಲಿಕೆಯನ್ನ ಇವರು ಪ್ರಕಟಿಸುತ್ತಿದ್ದಾರೆ. ನಾಲ್ಕೈದು ದಶಕಗಳಿಂದ ಸಂಘ ಪರಿವಾರದ ವಿವಿಧ ಹಂತಗಳ ಚಟುವಟಿಕೆಗಳಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿದ್ದಾರೆ. ಈಗ ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಇವರ ಆಯ್ಕೆ ಅವಿರೋಧವಾಗಿ ನಡೆಯುವ ನಿರೀಕ್ಷೆ ಇದೆ.ವರದಿ: ಶ್ರೀನಿವಾಸ ಹಳಕಟ್ಟಿ
ಯಾವ ನಿರೀಕ್ಷೆಯನ್ನೂ ನಾನು ಇರಿಸಿಕೊಂಡಿರಲಿಲ್ಲ. ನಿನ್ನೆ ಮಧ್ಯಾಹ್ನದವರೆಗೂ ನನಗೆ ಏನೂ ಗೊತ್ತಿರಲಿಲ್ಲ. ಮಧ್ಯಾಹ್ನ ನನಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಲಾಯಿತು. ದೆಹಲಿ ನಾಯಕರು ನನ್ನ ಹೆಸರು ಆಯ್ಕೆ ಮಾಡಿದ್ದಾರೆ. ಯಾವ ರೀತಿ ಆಯ್ಕೆ? ಮಾನದಂಡವೇನು? ಎನ್ನುವುದು ನನಗೆ ಗೊತ್ತಿಲ್ಲ. ಪರಿಷತ್, ಜಿಲ್ಲಾ ಪಂಚಾಯತ್ ನಂತಹ ಸ್ಥಾನದಲ್ಲಿ ಯಾವ ಕೆಲಸವನ್ನು ನಾನು ಮಾಡಿಲ್ಲ. ನಾಲ್ಕೈದು ದಶಕಗಳಿಂದ ಸಮಾಜ ಸೇವೆ ಮಾಡಿದ್ದೇನೆ. ಬಿಜೆಪಿ ಹಾಗೂ ಸಂಘ ಪರಿವಾರದ ಜೊತೆ ಸಂಪರ್ಕ ಮಾತ್ರ ಇತ್ತು. ಅದರ ಜೊತೆ ಕೆಲಸ ಮಾಡಿಕೊಂಡಿದ್ದೆ ಎಂದರು.