Congress ಪಕ್ಷದ ಒಂಟಿ ಒಂಟಿ ನಾಯಕರೇ ಹತ್ತಾರು ಪ್ರಶ್ನೆ ಎತ್ತುವ ಮುನ್ನ ಒಂದು ಪ್ರಶ್ನೆಗೆ ಉತ್ತರಿಸಿ: BJP

ಸುಳ್ಳು ಪ್ರತಿಪಾದನೆಗೆ ಹೊರಟಿರುವ ಕಾಂಗ್ರೆಸ್  ಪಕ್ಷದ ಒಂಟಿ ಒಂಟಿ ನಾಯಕರೇ, ಹತ್ತಾರು ಪ್ರಶ್ನೆ ಎತ್ತುವ ಮುನ್ನ ನಮ್ಮ ಒಂದು ಪ್ರಶ್ನೆಗೆ ಉತ್ತರಿಸಿ. ಮೇಕೆದಾಟು ಯೋಜನೆಗೆ (Mekedatu Project) ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದ್ದು ಯಾರು ಎಂದು ಪ್ರಶ್ನೆ ಮಾಡಿದೆ.

ಬಿಜೆಪಿ-ಕಾಂಗ್ರೆಸ್

ಬಿಜೆಪಿ-ಕಾಂಗ್ರೆಸ್

  • Share this:
Congress Mekedatu Padayatra: ಕೊರೊನಾ ವೈರಸ್, ಓಮೈಕ್ರಾನ್ ಮತ್ತು ವೀಕೆಂಡ್ ಕರ್ಫ್ಯೂ (Weekend Curfew) ವೇಳೆ ಪಾದಯಾತ್ರೆ ಮಾಡಲು ಹೊರಟಿರುವ ಕಾಂಗ್ರೆಸ್ (Congress) ವಿರುದ್ಧ ಬಿಜೆಪಿ (BJP) ಸಾಲು ಸಾಲು ಟ್ವೀಟ್ ಮೂಲಕ ಪ್ರಶ್ನೆಗಳನ್ನು ಎತ್ತಿದೆ. ಜಂಟಿ ಪತ್ರಿಕಾಗೋಷ್ಠಿ (Press meet)ಮೂಲಕ ಸುಳ್ಳು ಪ್ರತಿಪಾದನೆಗೆ ಹೊರಟಿರುವ ಕಾಂಗ್ರೆಸ್  ಪಕ್ಷದ ಒಂಟಿ ಒಂಟಿ ನಾಯಕರೇ, ಹತ್ತಾರು ಪ್ರಶ್ನೆ ಎತ್ತುವ ಮುನ್ನ ನಮ್ಮ ಒಂದು ಪ್ರಶ್ನೆಗೆ ಉತ್ತರಿಸಿ. ಮೇಕೆದಾಟು ಯೋಜನೆಗೆ (Mekedatu Project) ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದ್ದು ಯಾರು ಎಂದು ಪ್ರಶ್ನೆ ಮಾಡಿದೆ.

ಬಿಜೆಪಿ ಟ್ವೀಟ್: ಮೇಕೆದಾಟು ಯೋಜನೆಗೆ ತಡೆ ಕೋರಿ ಯಾರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೋ, ಆ ಸರ್ಕಾರದೊಂದಿಗೆ ತಮಿಳುನಾಡಿನಲ್ಲಿ‌ ಕಾಂಗ್ರೆಸ್ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಮೈತ್ರಿಯಲ್ಲಿದೆ. ಸೋನಿಯಾ ಗಾಂಧಿ ಕುಮ್ಮಕ್ಕಿನಿಂದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇ?

ಇದನ್ನೂ ಓದಿ:  ಮೇಕೆದಾಟು ಬಳಿ ಹೋಟೆಲ್​​ಗಳಿಗೆ ನಿರ್ಬಂಧ ಹಾಕಿದ್ದಾರೆ, ನಾವು ನದಿ ಪಕ್ಕ ಮಲಗ್ತೀವಿ: DK Shivakumar

ಬಿಜೆಪಿ ಟ್ವೀಟ್:  ತಮಿಳುನಾಡಿನಲ್ಲಿ ಕಾಂಗ್ರೆಸ್‌ ಪಕ್ಷ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದೆ.  ಹಾಗಾದರೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಬೇಕಿರುವುದು ಯಾರ ವಿರುದ್ಧ? ಡಿಕೆಶಿಯವರೇ, ಮೇಕೆದಾಟು ಈಗ ಸ್ಟ್ಯಾಲಿನ್ ಸರ್ಕಾರದ ಅಂಗಳದಲ್ಲಿದೆ. ನೀವು ಸುಳ್ಳಿನ ಜಾತ್ರೆ ಮಾಡುವ ಬದಲು, ಅವರೊಂದಿಗೆ ಮಾತುಕತೆ ನಡೆಸಿ.

ಬಿಜೆಪಿ ಟ್ವೀಟ್:  ಮಾನ್ಯ ಡಿಕೆಶಿ ಅವರೇ ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕುವುದು ಬೇಡ. ಪ್ರಧಾನಿ ಮೋದಿಯೋ, ರಾಹುಲ್ ಗಾಂಧಿಯೋ ಎಂದು ಸಿದ್ದರಾಮಯ್ಯ ಪ್ರಶ್ನಿಸುವುದೂ ಬೇಡ. ನೀವಿಬ್ಬರೂ ಸೇರಿ ಸ್ಟ್ಯಾಲಿನ್ ಮನವೊಲಿಸಿ ಸುಪ್ರೀಂ‌ಕೋರ್ಟ್‌ನಲ್ಲಿ ಸಲ್ಲಿಕೆಯಾದ ದಾವೆ ವಾಪಾಸ್ ತೆಗಿಸಿ. ನಿಮ್ಮ ತಾಕತ್ತನ್ನು ಅಲ್ಲಿ ಪ್ರದರ್ಶಿಸಿ.

ರಾಜ್ಯದ ವಿರೋಧ ಕೆಲಸ ಮಾಡ್ತಿಲ್ಲ

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್,  ಪಾದಯಾತ್ರೆ ಕುರಿತು ಸಿಎಂ‌ ಬಸವರಾಜ್ ಬೊಮ್ಮಾಯಿ (CM Basavaaj Bommai)  ಮತ್ತು ಶಾಸಕರಿಗೂ ಪತ್ರ ಬರೆದಿದ್ದೇನೆ. ರಾಜ್ಯದ ವಿರೋಧ ಕೆಲಸ‌ ಮಾಡಲು ಪಾದಯಾತ್ರೆ ಮಾಡುತ್ತಿಲ್ಲ. ನಾವು ಪಾದಯಾತ್ರೆ ‌ಮಾಡುತ್ತೇವೆ ಅಂತ ರಾಮನಗರ  (Ramanagara) ಡಿಸಿಯಿಂದ ನಿರ್ಬಂಧ ಹಾಕಿಸುತ್ತಿದ್ದಾರೆ.

ಇದನ್ನೂ ಓದಿ:  ಪಟ್ಟು ಬಿಡದೆ ಪಾದಯಾತ್ರೆಗೆ ಮುಂದಾಗಿರುವ Congress ನಾಯಕರಿಗೆ ಮೃದುವಾಗೇ ವಾರ್ನಿಂಗ್ ಕೊಟ್ಟ CM

ರಾಮನಗರದಲ್ಲಿ ನಮ್ಮವರ ಮೇಲೆ ಕೇಸ್ ಹಾಕಿಸಿದ್ದಾರೆ. ಜೈಲಿಗೆ ಹೋಗಿದ ತಕ್ಷಣ ನಮ್ಮ ಪ್ರಾಣ ಹೋಗಲ್ಲ. ನಮ್ಮ ಪಾದಯಾತ್ರೆಗೆ ಅರ್ಚಕರು ಬೆಂಬಲ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲೋದಿಲ್ಲ ಎಂದು ಡಿ.ಕೆ.ಶಿವಕುಮಾರ್ ಪುನರುಚ್ಚಿಸಿದರು.

 ರಾಜ್ಯ ಸರ್ಕಾರ ತಮ್ಮದೇ ಆದ ನಿಯಮ ಜಾರಿ ಮಾಡಿದೆ. ನೀರಿಗೋಸ್ಕರ ನಡೆಯುವ ಕಾರ್ಯಕ್ರಮ ಇತ್ತು, ಅದಕ್ಕೆ ಸಿಗುವ ವ್ಯಾಪಕ ಬೆಂಬಲ ತಡೆಯೋಕೆ ಆಗದೇ ಈ ರೀತಿ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲನ್ನು ಅರಗಿಸಿಕೊಳ್ಳೊಕೆ ಆಗದೆ, ಇವತ್ತು ನಮ್ಮ ಯಾತ್ರೆ ತಡೆಯಲು ದೊಡ್ಡ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

 ಅಶೋಕಣ್ಣರ ಬಗ್ಗೆ ಮಾತನಾಡಲು ಶಕ್ತಿ ಇಲ್ಲ 

ಮೇಕೆದಾಟು DPR  ಮಾಡಲು ಕುಮಾರಸ್ವಾಮಿ ಸರ್ಕಾರ ಬೇಕಿತ್ತಾ ಎಂಬ ಕಾರಜೋಳ ಪ್ರಶ್ನೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು. ಕಾರಜೋಳ, ಕುಮಾರಸ್ವಾಮಿ, ಅಶೋಕಣ್ಣರ ಬಗ್ಗೆ ಮಾತನಾಡಲು ಶಕ್ತಿ ಇಲ್ಲ  ನಾವು ಏನೂ ಮಾಡಿಲ್ಲ,  ಎಲ್ಲ ಅವರೇ ಮಾಡಿದ್ದು. ಅಶೋಕಣ್ಣ ಮೇಕೆ ಮಾಂಸ ತಿನ್ಞಲು ಹೋಗ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಕೋವಿಡ್ ನಿಯಮಾವಳಿ ಪ್ರಕಾರ ಪಾದಯಾತ್ರೆ

ಕೋವಿಡ್ ನಿಯಮಾವಳಿ ಪ್ರಕಾರವೇ ಪಾದಯಾತ್ರೆ ನಡೆಯುತ್ತದೆ. ನಡೆಯೋದಕ್ಕೆ ಯಾಕೆ ತಡೆ ಹಾಕ್ತಾರೆ. ನಿಷೇದಾಜ್ಞೆ ಹಾಕಿದ್ರೆ  ನಾನು ಮತ್ತು ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ. ನಾವ್ಯಾರಾದ್ರೂ ಬಿದ್ದು ಹೋದ್ರೆ ಹೊತ್ತುಕೊಂಡು ಬರೋಕೆ ನೀವ್ಯಾರಾದ್ರೂ ಇರ್ತೀರಾ ಎಂದು ಪ್ರಶ್ನೆ ಮಾಡಿದರು.
Published by:Mahmadrafik K
First published: