Congress Guarantee: ದಾರಿಯಲ್ಲಿ ಹೋಗುವವರು ಕನ್ನಡಿಗರೇ ಅಲ್ಲವೇ? ಬಿಜೆಪಿ ಪ್ರಶ್ನೆ

ಸಿದ್ದರಾಮಯ್ಯ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

ಸಿದ್ದರಾಮಯ್ಯ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

BJP Questioned Congress: ಈಗಿನ ಗ್ಯಾರಂಟಿಗಳೂ ಜನರ ಒಂದು ಜೇಬಿನಿಂದ ತೆಗೆದು ಇನ್ನೊಂದು ಜೇಬಿಗೆ ಹಾಕುವ ನಾಟಕ.

  • Share this:

ಬೆಂಗಳೂರು: ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ (Congress) ಮುಂದೆ ಸಾಲು ಸಾಲು ಸವಾಲುಗಳಿವೆ. ಐದು ಗ್ಯಾರಂಟಿಗಳನ್ನು ಕನ್ನಡಿಗರ (Kannadigas) ಮುಂದೆ ಇರಿಸಿ ಕಾಂಗ್ರೆಸ್ ಮತ ಕೇಳಿತ್ತು. ಇದೀಗ ಇದೇ ಐದು ಗ್ಯಾರಂಟಿಗಳಿಗೆ (Congress Five Guarantee) ಸಿದ್ದರಾಮಯ್ಯ ಸರ್ಕಾರ (Siddaramaiah Government) ತಾತ್ವಿಕ ಒಪ್ಪಿಗೆ ನೀಡಿದೆ. ಆದ್ರೆ ಗ್ಯಾರಂಟಿಗಳ ಸ್ಪಷ್ಟತೆ ಇಲ್ಲ ಎಂದು ಬಿಜೆಪಿ (BJP) ಆರೋಪಿಸಿದೆ. ಟ್ವೀಟ್ ಮಾಡಿರುವ ಬಿಜೆಪಿ, ಈಡೇರಿಸಲಾಗದ ಗ್ಯಾರಂಟಿಗಳನ್ನು ತರಲಾಗಿದೆ ಎಂದು ಕಿಡಿಕಾರಿದೆ. ನೀಡಲು ಸಾಧ್ಯವಿಲ್ಲದ ಗ್ಯಾರಂಟಿಗಳನ್ನು ಮುಂದಿಟ್ಟು, ಜನತೆಯನ್ನು ವಂಚಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಈಗ ಸಾಬೀತಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಜಾರಿಗೆ ತರುತ್ತೇವೆ ಎಂದಿದ್ದ ಗ್ಯಾರಂಟಿಗಳ ಲಾಭವನ್ನು ಯಾರಿಗೆ ಮತ್ತು ಹೇಗೆ ಕೊಡುತ್ತೇವೆ ಎಂಬ ಯಾವುದೇ ವಿವರ ನೀಡದೇ ಸಿದ್ದರಾಮಯ್ಯ ಸರ್ಕಾರ ಆದೇಶ ನೀಡುವ ನಾಟಕವಾಡಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.


ಇವು ಕೊಡುವ ಗ್ಯಾರಂಟಿಗಳಲ್ಲ, ಬದಲಾಗಿ ಕೈ ಎತ್ತುವ ಗ್ಯಾರಂಟಿಗಳು ಎಂಬುದನ್ನು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರ ಹಾವಭಾವಗಳೇ ಸುಸ್ಪಷ್ಟವಾಗಿ ತೋರಿಸಿದೆ. ಈಡೇರಿಸಲಾಗದ ಗ್ಯಾರಂಟಿಗಳನ್ನು ಕೇಂದ್ರ ಸರ್ಕಾರದ ಮೇಲೆ ಹಾಕುವ ಉದ್ದೇಶದಿಂದ ಈಗ ಸಂಪನ್ಮೂಲ ಕ್ರೋಢೀಕರಣ ಎಂಬ ಸಬೂಬು ಹೇಳಲಾಗುತ್ತಿದೆಯಷ್ಟೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.


ಕಾಂಗ್ರೆಸ್​ಗೆ ಬಿಜೆಪಿ ಪ್ರಶ್ನೆ


ಗ್ಯಾರಂಟಿಗಳನ್ನು ದಾರಿಯಲ್ಲಿ ಹೋಗುವವರಿಗೆಲ್ಲಾ ಕೊಡಲಾಗುತ್ತದೆಯೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಈಗ ಕೇಳುತ್ತಿದ್ದಾರೆ. ಚುನಾವಣೆಗೂ ಮುನ್ನ ಹಾದಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕಾರ್ಡ್‌ ನೀಡಿ ಈಗ ಈ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಹಾಗಾದರೆ ದಾರಿಯಲ್ಲಿ ಹೋಗುವವರು ಕನ್ನಡಿಗರಲ್ಲವೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.




ಇದನ್ನೂ ಓದಿ: Siddaramaiah- DK Shivakumar: ಸಿದ್ದು ಬಂದ್ರು, ಡಿಕೆಶಿ ಹೋದ್ರು! ‘ಟಗರು-ಬಂಡೆ’ ನಡುವೆ ಮೈಮನಸ್ಸು ವೇದಿಕೆ ಮೇಲೆಯೇ ಬಯಲಾಯ್ತಾ?


ಇವರ ಗ್ಯಾರಂಟಿಯ ಅಸಲಿಯತ್ತು


ರಾಜ್ಯದ ಇತಿಹಾಸದಲ್ಲೇ ಅತಿಹೆಚ್ಚು ಸಾಲ ಮಾಡಿ ಅದರ ಹೊಣೆಯನ್ನು ಮುಂದಿನ ಸರ್ಕಾರಗಳ ಹೆಗಲಿಗೆ ಹಾಕಿದ ಅಪಕೀರ್ತಿ ಸಿದ್ದರಾಮಯ್ಯ ಅವರದ್ದು. ಈಗಿನ ಗ್ಯಾರಂಟಿಗಳೂ ಜನರ ಒಂದು ಜೇಬಿನಿಂದ ತೆಗೆದು ಇನ್ನೊಂದು ಜೇಬಿಗೆ ಹಾಕುವ ನಾಟಕ. ಅದರಲ್ಲೂ ಸೋರಿಕೆಯಾಗಿ ಕಾಂಗ್ರೆಸ್ಸಿಗರ ಜೇಬುಗಳು ತುಂಬಿ ತುಳುಕಲಿರುವುದು ಇವರ ಗ್ಯಾರಂಟಿಯ ಅಸಲಿಯತ್ತು ಎಂದು ಗಂಭೀರ ಆರೋಪ ಮಾಡಿದೆ.

top videos
    First published: