ಬಿಜೆಪಿ ಇಂದು ಬ್ರಾಹ್ಮಣರ ಪಕ್ಷವಾಗಿ ಉಳಿದಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ 

ಬಿಜೆಪಿ ಈಗ ಕೇವಲ ಬ್ರಾಹ್ಮಣರ ಪಕ್ಷವಾಗಿ ಉಳಿದಿಲ್ಲ. ಎಲ್ಲಾ ಸಮುದಾಯದವರಿಗೂ ಪಕ್ಷದಲ್ಲಿ ಅವಕಾಶ ನೀಡಲಾಗಿದೆ

ನಳೀನ್​ ಕುಮಾರ್​ ಕಟೀಲ್​

ನಳೀನ್​ ಕುಮಾರ್​ ಕಟೀಲ್​

  • Share this:
ಚಾಮರಾಜನಗರ ( ಜ.  28) : ಬಿಜೆಪಿ  ಒಂದು ಕಾಲ ಘಟ್ಟದಲ್ಲಿ ಬ್ರಾಹ್ಮಣರ ಹಾಗೂ ನಗರ ಕೇಂದ್ರೀಕೃತ ಪಕ್ಷವಾಗಿತ್ತು. ಆದರೆ, ಇಂದು ಇದು ಬ್ರಾಹ್ಮಣರ  ಪಾರ್ಟಿಯಾಗಿ ಉಳಿದಿಲ್ಲ, ದೇಶದ ಮೂಲೆ ಮೂಲೆಗಳಲ್ಲಿ ರುವ   ಹಳ್ಳಿ ಹಳ್ಳಿಗಳಲ್ಲೂ ವ್ಯಾಪಿಸಿ ಸರ್ವಸ್ಪರ್ಶಿ ಸರ್ವಗ್ರಾಹಿ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ನಗರದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಈಗ ಕೇವಲ ಬ್ರಾಹ್ಮಣರ ಪಕ್ಷವಾಗಿ ಉಳಿದಿಲ್ಲ. ಎಲ್ಲಾ ಸಮುದಾಯದವರ ಪಕ್ಷ ಇದಾಗಿದೆ. ಇದು ಕೇವಲ ನಗರ ಕೇಂದ್ರೀಕೃತವಾಗಿಲ್ಲ. ಹಳ್ಳಿಹಳ್ಳಿಗಳ ಮತಗಟ್ಟೆಗಳ ಪಕ್ಷವಾಗಿ ಪರಿವರ್ತನೆ ಆಗಿದೆ. ಬಿಜೆಪಿ ಸರ್ವವ್ಯಾಪಿಯಾಗಬೇಕು. ಎಲ್ಲಾ ಸಮುದಾಯವರಿಗೂ ಸ್ಪಂದಿಸುವ ಪಕ್ಷವಾಗಬೇಕು ಎಂಬುದೇ ನಮ್ಮ ಉದ್ದೇಶ ಎಂದರು.

ಕಾಂಗ್ರೆಸ್ ನಿಂದ ಒಂದು ವಿದ್ಯುತ್ ಕಂಬ ನಿಲ್ಲಿಸಿದರೂ ಗೆಲುವು ನಿಶ್ಚಿತ ಎಂಬ ಕಾಲವಿತ್ತು,  ಆದರೆ, ಕಾಂಗ್ರೆಸ್ ಗೆ ಅಂಬೇಡ್ಕರ್ ಶಾಪ ತಟ್ಟಿದೆ,  ಇಂದು ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರು ಸ್ಫರ್ಧಿಸಲು ಕ್ಷೇತ್ರವಿಲ್ಲದೆ ಅಲೆಮಾರಿ ಗಳಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಜನರು ವರುಣಾ ಕ್ಷೇತ್ರ ದಿಂದ ಗುಡಿಸಿ ಹೊರ ಹಾಕಿದ್ದಾರೆ, ಅವರು ಸಹ ಕ್ಷೇತ್ರ ಹುಡುಕಿಕೊಂಡು ಅಲೆದಾಡುವಂತಾಗಿದೆ ಎಂದು ಟೀಕಿಸಿದರು.

ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಂಡ ಕಾಂಗ್ರೆಸ್ ಗೆ ಅಂಬೇಡ್ಕರ್ ಭಾವಚಿತ್ರ ಹಾಗೂ ಅವರ ಮತ ಬ್ಯಾಂಕ್ ಬೇಕು  ಅಷ್ಟೆ. ಆದರೆ, ಅಂಬೇಡ್ಕರ್ ಬೇಡವಾಗಿದ್ದಾರೆ, ಸರ್ವಶ್ರೇಷ್ಠ ಸಂವಿಧಾನ ಕೊಟ್ಟವರು ಅಂಬೇಡ್ಕರ್ , ಚಹಾ ಮಾರುವವರ ಮಗ ದೇಶದ ಪ್ರಧಾನಿ ಆಗಲು ಅಂಬೇಡ್ಕರ್ ಕಾರಣ ಎಂದ ಅವರು  ಎಸ್ಸಿಎಸ್ಟಿ ಜನಾಂಗದ ಬಗ್ಗೆ ಕಣ್ಣೀರು ಹಾಕಿದ ಕಾಂಗ್ರೆಸ್  ಅವರನ್ನು ಉದ್ದಾರ ಆಗಲು ಬಿಡಲಿಲ್ಲ. ಶಿಕ್ಷಣ, ಉದ್ಯೋಗ ನೀಡದೆ ಕೇವಲ ಮತಬ್ಯಾಂಕ್ ಮಾಡಿಕೊಂಡಿತ್ತು ಎಂದು ವಾಗ್ದಾಳಿ ನಡೆಸಿದರು

ಉದ್ಭವ್ ಠಾಕ್ರೆ ಗೆ ಕಾಂಗ್ರೆಸ್ ಕುಮ್ಮಕ್ಕು

ಕಾಂಗ್ರೆಸ್ ಕುಮ್ಮಕ್ಕಿನಿಂದ  ಕರ್ನಾಟಕದಲ್ಲಿನ ಮರಾಠಿ ಭಾಷಿಕ ಪ್ರದೇಶಗಳನ್ನು ಸೇರಿಸುವುದಾಗಿ  ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಹೇಳಿದ್ದಾರೆಂದು ಇದೇ ವೇಳೆ ಅವರು ಆರೋಪಿಸಿದರು. ಕರ್ನಾಟಕದ ಒಂದಿಂಚು ನೆಲವನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ: ಅಮಾನವೀಯ ಕೃತ್ಯ: ಹುಳಿಮಾವಿನಲ್ಲಿ ಬೀದಿನಾಯಿ ಮೇಲೆ ಕಾರು​ ಹತ್ತಿಸಿದ ನಿವೃತ್ತ ಸಬ್​ ಇನ್ಸ್​ಪೆಕ್ಟರ್​

ಮಹಾರಾಷ್ಟ್ರದಲ್ಲಿ ಉದ್ಭವ್ ಠಾಕ್ರೆ ಜನರಿಂದ ತಿರಸ್ಕಾರಗೊಳ್ಳುತ್ತಿದ್ದಾರೆ, ಅವರ ಆಡಳಿತದಿಂದ ಅಲ್ಲಿನ  ಜನ  ಬೇಸತ್ತಿದ್ದಾರೆ. ಹಾಗಾಗಿ ಜನರ ಗಮನ ಬೇರೆಡೆ ಸೆಳೆಯಲು ಗಡಿ ವಿಚಾರ ಎತ್ತಿದ್ದಾರೆ. ಕೇವಲ ಪ್ರಚಾರಕ್ಕೋಸ್ಕರ ಮಾತನಾಡುತ್ತಿದ್ದಾರೆ ಎ‌ಂದು. ಠಾಕ್ರೆಗೆ ಪ್ರೇರಣೆ ನೀಡುತ್ತಿರುವ  ಕಾಂಗ್ರೆಸ್ ಇದಕ್ಕೆ ಉತ್ತರ ಕೊಡಬೇಕಿದೆ ಎಂದು ಅವರು ಹೇಳಿದರು

ದೆಹಲಿ ಗಲಭೆಗೆ ಕಾಂಗ್ರೆಸ್ ಷಡ್ಯಂತ್ರ

ದೆಹಲಿಯ ಕೆಂಪುಕೋಟೆಯಲ್ಲಿ ಖಾಲಿಸ್ತಾನ್​ ಧ್ವಜ  ಹಾರಿಸಿ ಗಲಭೆ ನಡೆಸಿದ್ದು ರೈತರು ಮಾಡಿದ ಕೃತ್ಯವಲ್ಲ. ಪ್ರಧಾನಿ ಮೋದಿ ಜನಪ್ರಿಯತೆ ಸಹಿಸಲಾಗದೆ, ವಿರೋಧಪಕ್ಷಗಳ ಕೃತ್ಯ. ಇದು ಕಾಂಗ್ರೆಸ್  ಷಡ್ಯಂತ್ರವಾಗಿದ್ದು, ಪೂರ್ವನಿಯೋಜಿತ ಕೃತ್ಯವಾಗಿದೆ. ಪ್ರಧಾನಿ ಮೋದಿ ಅವರನ್ನು ಹೀಗೆಯೇ ಬಿಟ್ಟರೆ ಇನ್ನೂ 15-20 ವರ್ಷ ವಿಪಕ್ಷ ಸ್ಥಾನ ಗ್ಯಾರಂಟಿ ಎಂದು ಅರಾಜಕತೆ, ಅಶಾಂತಿ ಹಾಗೂ  ದಂಗೆ ಸೃಷ್ಟಿಸಲು ಕಾಂಗ್ರೆಸ್ ಮಾಡಿದ ಕುತಂತ್ರ ಎಂದು ಆರೋಪಿಸಿದರು

ಕೃಷಿ ಕಾಯ್ದೆಗಳ ವಿರುದ್ದ ಬೆಂಗಳೂರಿನಲ್ಲಿ ಹೋರಾಟ ಮಾಡಿದವರು ರೈತರಲ್ಲ, ಅದರಲ್ಲಿ ಭಾಗವಹಿಸಿದ್ದವರು ಕಾಂಗ್ರೆಸ್ ಕಾರ್ಯಕರ್ತರು. ರೈತರ ಹೆಸರಿನಲ್ಲಿ ರಾಜಕಾರಣ ಮಾಡುವವರು ಹೋರಾಟ ಮಾಡುತ್ತಿದ್ದಾರೆ,   ದೇಶದಲ್ಲಿ  2004 ರಿಂದ 2014 ರ ವರೆಗೆ   ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು, ಸಿದ್ದರಾಮಯ್ಯ ಅವಧಿಯಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಆ ಬಗ್ಗೆ ಸಿದ್ದರಾಮಯ್ಯ ಕಣ್ಣಲ್ಲಿ ನೀರು ಬರಲಿಲ್ಲ ಎಂದು ಟೀಕಿಸಿದರು.

 (ವರದಿ: ಎಸ್.ಎಂ.ನಂದೀಶ್ )
Published by:Seema R
First published: