ಚಿತ್ರದುರ್ಗ(ಜ.04): ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections) ಸಮೀಪಿಸುತ್ತಿದೆ. ರಾಜ್ಯದಲ್ಲಿ ಈ ಸಂಬಂಧ ಭರದ ಸಿದ್ಧತೆಗಳು ನಡೆಯುತ್ತಿವೆ. ಒಂದೆಡೆ ವಿವಿಧ ಪಕ್ಷಗಳು ಪ್ರಚಾರ ಕಾರ್ಯ ಆರಂಭಿಸಿದರೆ, ಮತ್ತೊಂದೆಡೆ ನಾಯಕರ ವಾಕ್ಸಮರ ಸದ್ದು ಮಾಡುತ್ತಿದೆ. ಈ ನಡುವೆ ರಾಷ್ಟ್ರೀಯ ಪಕ್ಷಗಳ ಹಿರಿಯ ನಾಯಕರ ರಾಜ್ಯ ಪ್ರವಾಸ ಜೋರಾಗುತ್ತಿದೆ. ಈಗಾಗಲೇ ಬಿಜೆಪಿ ನಾಯಕರ ದಂಡು ಕರ್ನಾಟಕ ಭೇಟಿ ಆರಂಭಿಸಿದೆ. ಅತ್ತ ಅಮಿತ್ ಶಾ ಭೇಟಿ ಬೆನ್ನಲ್ಲೇ ಇತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ (JP Nadda) ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ಅವರು ಗುರುವಾರದಂದು ಕೋಟೆನಾಡು ಚಿತ್ರದುರ್ಗದ ವಿವಿಧ ಮಠಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಎಸ್ಸಿ, ಎಸ್ಟಿ, ಓಬಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Cabinet Expansion: ಸಂಪುಟ ವಿಸ್ತರಣೆಗೆ ಅಮಿತ್ ಶಾ ಗ್ರೀನ್ ಸಿಗ್ನಲ್; ಹೊಸ ಮುಖಗಳಿಗೆ ಸಿಗುತ್ತಾ ಅವಕಾಶ?
ಹೌದು ನಾಳೆ ತುಮಕೂರಿನಿಂದ ಮಧ್ಯಾಹ್ನ 3:15ಕ್ಕೆ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಲಿರುವ ಬಿಜೆಪಿ ಅದ್ಯಕ್ಷ ಜೆ.ಪಿ ನಡ್ಡಾ ಮುರುಘರಾಜೇಂದ್ರ ಸ್ಟೇಡಿಯಂನ ಹೆಲಿಪ್ಯಾಡ್ನಿಂದ, ಅಲ್ಲಿಂದ ಮದಕರಿ ನಾಯಕ ವೃತ್ತ, ಒನಕೆ ಓಬವ್ವ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತಗಳಿಗೆ ತೆರಳಿ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.
3:45ಕ್ಕೆ ಮುರುಘಾಮಠದ ಆವರಣದಲ್ಲಿನ ಅನುಭವ ಮಂಟಪ ಸಭಾಂಗಣಕ್ಕೆ ಆಗಮಿಸಿ, ಬಿಜೆಪಿ ಆಯೋಜಿಸಿದ ಎಸ್ಸಿ, ಎಸ್ಟಿ, ಓಬಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Chitradurga: ನಡ್ಡಾ ನಂತರ ಮುರುಘಾ ಮಠಕ್ಕೆ ಭೇಟಿ ಕೊಟ್ಟ ಡಿಕೆಶಿ! ಕಾಂಗ್ರೆಸ್ ಕಾಡುತ್ತಿರುವ ಭಯ ಏನು?
ಇನ್ನು ಬಿಜೆಪಿ ಆಯೋಜಿಸಿದ ಎಸ್ಸಿ, ಎಸ್ಟಿ, ಓಬಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಸುಮಾರು 5ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಸಂಜೆ 5.05ಕ್ಕೆ ಶಿವಶರಣ ಮಾದಾರ ಚನ್ನಯ್ಯ ಮಠಕ್ಕೆ ಭೇಟ ನೀಡಿ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ ದರ್ಶನ ಪಡೆಯಲಿದ್ದಾರೆ. ಸಂಜೆ 5.50ಕ್ಕೆ ಸಿರಿಗೆರೆ ಗ್ರಾಮದ ತರಳಬಾಳು ಮಠಕ್ಕೆ ಭೇಟಿ ನೀಡಿ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ದರ್ಶನ ಪಡೆಯಲಿದ್ದಾರೆ. ತದ ನಂತರ ಸಂಜೆ 6:20ಕ್ಕೆ ದಾವಣಗೆರೆಯ ಜೆಎಂಐಟಿ ಗೆಸ್ಟ್ ಹೌಸ್ ನತ್ತ ಪ್ರಯಾಣ ನಡೆಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ