ಸಿಎಂ ಕುಮಾರಸ್ವಾಮಿ ಅನಾರೋಗ್ಯ? ಬಿಜೆಪಿಗೆ ವಿಶ್ವಾಸಮತದ್ದೇ ಟೆನ್ಷನ್

Karnataka Political Crisis: ಸೋಮವಾರ ಮೈತ್ರಿಪಕ್ಷಗಳು ಸಲ್ಲಿಸಿರುವ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಬರುತ್ತಿದೆ. ಅದು ಬಿಜೆಪಿಯ ಮುಂದನ ನಡೆಯ ಮೇಲೆ ಪ್ರಭಾವ ಬೀರಲಿದೆ.

news18
Updated:July 21, 2019, 8:38 PM IST
ಸಿಎಂ ಕುಮಾರಸ್ವಾಮಿ ಅನಾರೋಗ್ಯ? ಬಿಜೆಪಿಗೆ ವಿಶ್ವಾಸಮತದ್ದೇ ಟೆನ್ಷನ್
ಬಿ.ಎಸ್​. ಯಡಿಯೂರಪ್ಪ
news18
Updated: July 21, 2019, 8:38 PM IST
ಬೆಂಗಳೂರು(ಜುಲೈ 21): ಮೈತ್ರಿ ಸರ್ಕಾರದ ಹಣೆಬರಹ ನಿರ್ಧಾರಕ್ಕೆ ನಾಳೆ ಡೇಟ್ ಫಿಕ್ಸ್ ಆಗಿದೆ. ಸೋಮವಾರವೇ ವಿಶ್ವಾಸ ಮತ ಯಾಚನೆ ಮಾಡುವಂತೆ ಸ್ಪೀಕರ್ ಅವರು ಶುಕ್ರವಾರವೇ ಸೂಚನೆ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಸಮಸ್ಯೆ ಇರುವ ಸುದ್ದಿ ಈ ನಡುವೆ ಕೇಳಿ ಬಂದಿದೆ. ಇದು ವಿಪಕ್ಷಕ್ಕೆ ಚಿಂತೆಗೀಡು ಮಾಡಿದೆ. ಅನಾರೋಗ್ಯ ಕಾರಣದಿಂದ ಮುಖ್ಯಮಂತ್ರಿಯೇ ಗೈರಾಗಿಬಿಟ್ಟರೆ ಸೋಮವಾರ ವಿಶ್ವಾಸ ಮತ ನಡೆಯದೇ ಹೋದರೆ ಏನು ಗತಿ ಎಂಬ ಭಯ ಬಿಜೆಪಿಗೆ ಇದೆ. ಆದರೆ, ಸಿಎಂ ಗೈರಾದರೂ ಸ್ಪೀಕರ್ ಅವರು ವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಬಹುದೆಂಬ ವಿಶ್ವಾಸದಲ್ಲಿಯೂ ಇದ್ದಾರೆ.

ಕುಮಾರಸ್ವಾಮಿ ಆರೋಗ್ಯ ನೆಪದಿಂದ ರಾಜೀನಾಮೆ ನೀಡಲು ತಡ ಮಾಡಿದರೆ ಯಾವೆಲ್ಲಾ ರಣತಂತ್ರ ರೂಪಿಸಬೇಕು; ಸದನದಲ್ಲಿ ಆಡಳಿತ ಪಕ್ಷಗಳ ಕಾನೂನಾತ್ಮಕ ಮಾತುಗಳಿಗೆ ಯಾವ ಉತ್ತರ ಕೊಡಬೇಕು ಇತ್ಯಾದಿ ವಿಚಾರಗಳನ್ನು ಇವತ್ತಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗುತ್ತಿದೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಸಿಎಂ ಪಟ್ಟ? ಮಾಜಿ ಸಿಎಂ ಭೇಟಿ ಮಾಡಿದ ಜೆಡಿಎಸ್ ನಿಯೋಗ

ನಾಳೆ ಮೈತ್ರಿಪಕ್ಷಗಳು ಸಲ್ಲಿಸಿರುವ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಬರುತ್ತಿದೆ. ಅದು ಬಿಜೆಪಿಯ ಮುಂದನ ನಡೆಯ ಮೇಲೆ ಪ್ರಭಾವ ಬೀರಲಿದೆ.

ಇನ್ನು, ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನಕ್ಕೆ ಕೂರಿಸಿ ಆ ಮೂಲಕ ಅತೃಪ್ತರನ್ನು ಓಲೈಸುವ ಕೆಲಸವನ್ನು ಜೆಡಿಎಸ್ ಪಕ್ಷ ಮಾಡುತ್ತಿರುವುದು ಬಿಜೆಪಿಯನ್ನು ಅಧೀರಗೊಳಿಸಿದಂತಿಲ್ಲ. ಮೈತ್ರಿಪಾಳಯದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಅತೃಪ್ತರು ಸದನಕ್ಕೆ ಬರೋದಿಲ್ಲ. ಸರ್ಕಾರ ಏನೇ ತಂತ್ರ ಉಪಯೋಗಿಸಿದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸಾಧ್ಯವಿಲ್ಲ ಎಂಬ ವಿಶ್ವಾಸದಲ್ಲಿ ಕಮಲ ಪಾಳಯ ಇದೆ.

ಇದೇ ವೇಳೆ, ಕುಮಾರಸ್ವಾಮಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿಗಳೂ ವೈರಲ್ ಆಗಿ ಹಬ್ಬಿವೆ. ಮುಖ್ಯಮಂತ್ರಿಗಳೇ ಸ್ವತಃ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ತಾವು ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಹೆಚ್​ಡಿಕೆ ಅವರು ಸೋಮವಾರದ ಅಧಿವೇಶನಕ್ಕೆ ಹಾಜರಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:July 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...