• Home
  • »
  • News
  • »
  • state
  • »
  • ಕಾವೇರಿದ ಶಿರಾ ಉಪಚುನಾವಣೆ: ಬಿಜೆಪಿ ಎಲೆಕ್ಷನ್​​ ಗಿಮಿಕ್​​, ಹಲವು ಕಾಮಗಾರಿಗಳಿಗೆ ಚಾಲನೆ

ಕಾವೇರಿದ ಶಿರಾ ಉಪಚುನಾವಣೆ: ಬಿಜೆಪಿ ಎಲೆಕ್ಷನ್​​ ಗಿಮಿಕ್​​, ಹಲವು ಕಾಮಗಾರಿಗಳಿಗೆ ಚಾಲನೆ

ಬಿಜೆಪಿ

ಬಿಜೆಪಿ

ಮಾಜಿ ಸಚಿವ ಜಯಚಂದ್ರರ ಕಾಲವಧಿಯಲ್ಲಿ ಮಿನಿ ವಿಧಾನಸೌಧಕ್ಕೆ ಹಣ ಬಿಡುಗಡೆಯಾಗಿ ಕಟ್ಟಡ ನಿರ್ಮಾಣವಾಗಿತ್ತು. ಆದರೂ ಸೌಜನ್ಯಕ್ಕೂ ಉದ್ಘಾಟನಾ ಕಾರ್ಯಕ್ರಮಕ್ಕೆ ಟಿ.ಬಿ ಜಯಚಂದ್ರರನ್ನು ಆಹ್ವಾನಿಸಿಲ್ಲ. ಆಡಳಿತ ಪಕ್ಷದ ಧೋರಣೆಯನ್ನು ಮಾಜಿ ಸಚಿವ ಜಯಚಂದ್ರ ಖಂಡಿಸಿದ್ದಾರೆ.

  • Share this:

ತುಮಕೂರು(ಸೆ. 11): ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆ ಇನ್ನೂ ಬಾಕಿ ಇದೆ. ಘೋಷಣೆ ಆಗುವ ಮುನ್ನವೇ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಆಡಳಿತ ಪಕ್ಷ ಬಿಜೆಪಿ ಭರ್ಜರಿ ಪ್ಲಾನ್ ಮಾಡುತ್ತಿದೆ. ಕಟ್ಟಡಗಳ ಉದ್ಘಾಟನೆ ಮಾಡುವ, ಕಾಮಗಾರಿಗಳಿಗೆ ಚಾಲನೆ ಕೊಡುವ ಕೆಲಸ ಮಾಡುತಿದ್ದಾರೆ. ಇಂದು ಕಂದಾಯ ಸಚಿವ ಆರ್ ಅಶೋಕ್​​ ತರಾತುರಿಯಲ್ಲಿ  ಮಿನಿ ವಿಧಾನ ಸೌಧ ಉದ್ಘಾಟಿಸಿದ್ದಾರೆ. ಇದು ವಿರೋಧ ಪಕ್ಷಗಳ ವಿರೋಧಕ್ಕೆ ಕಾರಣವಾಗಿದೆ. ಉಪಚುನಾವಣೆ ಮುಂದಿಟ್ಟುಕೊಂಡು ಬಿಜೆಪಿ ಗಿಮಿಕ್ ಮಾಡುತ್ತಿದೆ ಎಂದು ಮಾಜಿ ಸಚಿವ ಜಯಚಂದ್ರ ಕಿಡಿಕಾರಿದ್ದಾರೆ. ಜೆಡಿಎಸ್ ಶಾಸಕ ಸತ್ಯ ನಾರಾಯಣ್ ನಿಧನದಿಂದ ತೆರವಾದ ಶಿರಾ ಕ್ಷೇತ್ರದ ಸ್ಥಾನಕ್ಕೆ ಬಹುಶಃ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಬಹುದು. ಇದನ್ನರಿತ ಬಿಜೆಪಿ ಸರ್ಕಾರ ಮತದಾರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ಘೋಷಣೆಗಳನ್ನು ಮಾಡುತ್ತಾ ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಿ ಕಟ್ಟಡಗಳನ್ನು ಉದ್ಘಾಟಿಸುತ್ತಿದೆ.


ಗುರುವಾರ ತರಾತುರಿಯಲ್ಲಿ ಶಿರಾ ಪಟ್ಟಣದ ಹೊರ ವಲಯದಲ್ಲಿರುವ ಮಿನಿ ವಿಧಾನ ಸೌಧವನ್ನು ಕಂದಾಯ ಸಚಿವ ಆರ್. ಅಶೋಕ ಉದ್ಘಾಟಿಸಿದ್ದಾರೆ. ಸುಮಾರು 13 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡಕ್ಕೆ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಹಣ ಬಿಡುಗಡೆಯಾಗಿ ಶೇ.70ರಷ್ಟು ಕೆಲಸ ಪೂರ್ಣಗೊಂಡಿತ್ತು. ಬಾಕಿ ಉಳಿದ ಕೆಲಸ ಈವರ್ಷ ಪೂರ್ಣಗೊಂಡಿದೆ. ಇನ್ನೂ ಪಿಠೋಪಕರಣಗಳ ಕೆಲಸ ಬಾಕಿ ಇದೆ. ಆದರೂ ಕಂದಾಯ ಸಚಿವರು ಬಂದು ಉದ್ಘಾಟಿಸಿದ್ದಾರೆ.


ಮಾಜಿ ಸಚಿವ ಜಯಚಂದ್ರರ ಕಾಲವಧಿಯಲ್ಲಿ ಮಿನಿ ವಿಧಾನಸೌಧಕ್ಕೆ ಹಣ ಬಿಡುಗಡೆಯಾಗಿ ಕಟ್ಟಡ ನಿರ್ಮಾಣವಾಗಿತ್ತು. ಆದರೂ ಸೌಜನ್ಯಕ್ಕೂ ಉದ್ಘಾಟನಾ ಕಾರ್ಯಕ್ರಮಕ್ಕೆ ಟಿ.ಬಿ ಜಯಚಂದ್ರರನ್ನು ಆಹ್ವಾನಿಸಿಲ್ಲ. ಆಡಳಿತ ಪಕ್ಷದ  ಧೋರಣೆಯನ್ನು ಮಾಜಿ ಸಚಿವ ಜಯಚಂದ್ರ ಖಂಡಿಸಿದ್ದಾರೆ. ಅಪ್ಪ ಅಮ್ಮರ ಹೆಸರಿಲ್ಲದೇ ಬರ್ತಡೆ ಮಾಡಿದ ಹಾಗೆ ಉದ್ಘಾಟನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.


ಇದನ್ನೂ ಓದಿ: ಭಿನ್ನಲಿಂಗೀಯರಂತೆಯೇ 8 ವರ್ಷ ಜೊತೆಗೆ ವಾಸಿಸಿದ್ದ ಸಲಿಂಗಿ ದಂಪತಿಗಳು; ಶವ ಪರೀಕ್ಷೆಯ ನಂತರ ಸತ್ಯ ಬಹಿರಂಗ


ಜನರಿಗೆ ಗೊತ್ತಿದೆ ಯಾರ ಕಾಲದಲ್ಲಿ ಕಟ್ಟಡ ಮಂಜೂರು ಮಾಡಿರೋದು ಎಂದು ಜಯಚಂದ್ರ ಪ್ರತಿಕ್ರಿಯಿಸಿದ್ದಾರೆ. ಚುನಾವಣೆ ಘೋಷಣೆ ಆಗುವ ಹಿನ್ನೆಲೆಯಲ್ಲಿ ಬಿಜೆಪಿ ನಾಟಕವಾಡುತಿದೆ ಎಂದು ಟೀಕಿಸಿದ್ದಾರೆ. ಉಪ ಚುನಾವಣೆ ಕಾವು ನಿಧಾನವಾಗಿ ಏರುತ್ತಿರುವ ಜತೆಯಲ್ಲೇ ಪರಸ್ಪರ ಟೀಕೆಗಳು, ಆರೋಪ ಪ್ರತ್ಯಾರೋಗಳ ಕಾವೂ ಏರುತ್ತಿದೆ. ಒಟ್ನಲ್ಲಿ ಮೂರೂ ಪಕ್ಷಗಳು ಜೋರಾಗಿ ಉಪ ಚುನಾವಣೆ ತಯಾರಿ ನಡೆಸುತಿದೆ.‌

Published by:Ganesh Nachikethu
First published: