• Home
  • »
  • News
  • »
  • state
  • »
  • Belagavi Politics: ಸಿದ್ದರಾಮೋತ್ಸವ ಬೆನ್ನಲ್ಲೇ ಲಿಂಗಾಯತ ನಾಯಕನ ಬರ್ತ್ ಡೇಗೆ ಬಿಜೆಪಿ ಪ್ಲಾನ್; ರಾಜ್ಯಪಾಲ ಆಗ್ತಾರಾ ಆ ಮುಖಂಡ?

Belagavi Politics: ಸಿದ್ದರಾಮೋತ್ಸವ ಬೆನ್ನಲ್ಲೇ ಲಿಂಗಾಯತ ನಾಯಕನ ಬರ್ತ್ ಡೇಗೆ ಬಿಜೆಪಿ ಪ್ಲಾನ್; ರಾಜ್ಯಪಾಲ ಆಗ್ತಾರಾ ಆ ಮುಖಂಡ?

ಸಿದ್ದರಾಮೋತ್ಸವ

ಸಿದ್ದರಾಮೋತ್ಸವ

ಡಾ,. ಪ್ರಭಾಕರ ಕೋರೆ ಅಮೃತ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ ಸಿಂಗ್, ನಿತಿನ್ ಗಡ್ಕರಿಗೆ ಆಹ್ವಾನ ನೀಡಲು ಚಿಂತನೆ ನಡೆಸಲಾಗಿದೆ.

  • Share this:

ಬೆಳಗಾವಿ: ಬಣ ಜಗಳ, ಚುನಾವಣೆ (Election) ಮೊದಲೇ ಸಿಎಂ ಸ್ಥಾನಕ್ಕೆ ಕಿತ್ತಾಡಿ ಸುದ್ದಿಯಾಗುತ್ತಿದ್ದ ಕಾಂಗ್ರೆಸ್ ನಾಯಕರು (Congress Leaders) ಈಗ ಒಗ್ಗಟ್ಟು ಪ್ರದರ್ಶನ ಮೂಲಕ ಸದ್ದಿ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Opposition Leader Siddaramaiah) ಅದ್ಧೂರಿ ಹುಟ್ಟಹಬ್ಬದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ಡೋಸ್ ನೀಡಿದಂತೆ ಆಗಿದೆ. ಇದು ಬಿಜೆಪಿ (BJP) ಹಾಗೂ ಜೆಡಿಎಸ್ (JDSS) ಪಕ್ಷಕ್ಕೆ ತಳಮಳವನ್ನು ಉಂಟು ಮಾಡಿದೆ. ಹೀಗಾಗಿ ಉತ್ತರ ಕರ್ನಾಟಕದ (North Karnataka) ಪ್ರಭಾವಿ ಲಿಂಗಾಯತ ನಾಯಕನ (Lingayat) ಹುಟ್ಟುಹಬ್ಬದ ಅದ್ದೂರಿ ಆಚರಣೆಗೆ ತೆರೆಮರೆಯಲ್ಲಿ ಪ್ಲ್ಯಾನ್ ರೂಪಿಸಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಅಕ್ಟೋಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ(Belagavi) ಬೃಹತ್ ಸಮಾವೇಶ ನಡೆಯಲಿದೆ.


ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಬಿಜೆಪಿಯಿಂದ ಎರಡು ಸಲ ರಾಜ್ಯಸಭೆಗೆ ಆಯ್ಕೆಯಾಗಿ ಕೆಲಸ ಮಾಡಿದ್ದಾರೆ.  ಅಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ವಿಧಾನ ಪರಿಷತ್ ನಲ್ಲಿಯೂ ಕೆಲಸ ಮಾಡಿದ್ದಾರೆ. ಜತೆಗೆ ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರಾಗಿ ತಮ್ಮ  ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.


ಆಗಸ್ಟ್ 1ರಂದು ಡಾ. ಪ್ರಭಾಕರ್ ಕೋರೆ 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಅಮೃತ ಮಹೋತ್ಸವನ್ನು ಡಾ. ಪ್ರಭಾಕರ ಕೋರೆ ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.


ಇದನ್ನೂ ಓದಿ:  Amit Shah: ಸಿದ್ದರಾಮೋತ್ಸವ ಬೆನ್ನಲ್ಲೇ ರಾಜ್ಯಕ್ಕೆ ಅಮಿತ್ ಶಾ ಆಗಮನ; ಇದರ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?


ಹೈಕಮಾಂಡ್ ನಾಯಕರಿಗೆ ಆಹ್ವಾನ ಸಾಧ್ಯತೆ


ಈಗಾಗಲೇ ಅಭಿಮಾನಿಗಳು, ಸಂಸ್ಥೆಯ ಕೆಲ ಪ್ರಮುಖರ ಈ ಬಗ್ಗೆ ಚಿಂತನೆ ನಡೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಆಹ್ವಾನ ನೀಡಲು ಸಹ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.


BJP Plan to celebrate Dr Prabhakar kore 75th birthday csb mrq
ಸಿದ್ದರಾಮೋತ್ಸವ


ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಜನ ಸಾಗರವೇ ಹರಿದು ಬಂದಿದೆ. ಈ ಕಾರ್ಯಕ್ರಮ ಇಡೀ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ಡೋಸ್ ನೀಡಿದಂತೆ ಆಗಿದ್ದು, ಕಾರ್ಯಕರ್ತರು, ಮುಖಂಡರು ಉತ್ಸಹದಲ್ಲಿ ಕೆಲಸ ಆರಂಭಿಸಿದ್ದಾರೆ.


ಲಿಂಗಾಯತ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಪ್ಲಾನ್


ಈಗ ಇದೇ ಮಾದರಿಯಲ್ಲಿ ಬೆಳಗಾವಿಯಲ್ಲಿ ಅದ್ದೂರಿ ಅಮೃತ ಮಹೋತ್ಸವಕ್ಕೆ ಪ್ಲ್ಯಾನ್ ನಡೆದಿದೆ. ಈ ಮೂಲಕ ಲಿಂಗಾಯತ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಡಾ,. ಪ್ರಭಾಕರ ಕೋರೆ ಅಮೃತ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ ಸಿಂಗ್, ನಿತಿನ್ ಗಡ್ಕರಿಗೆ ಆಹ್ವಾನ ನೀಡಲು ಚಿಂತನೆ ನಡೆಸಲಾಗಿದೆ. ನಾಲ್ವರಲ್ಲಿ ಒಬ್ಬರನ್ನು ಕರೆಸಿ ಸಾವಿರಾರು ಜನ ಸೆರಿಸಿ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಲಾಗಿದೆ.


ಮಹತ್ವದ ಹುದ್ದೆಗೆ ಕೋರೆ ಹೆಸರು


ಬಿಜೆಪಿಯಲ್ಲಿ ಎರಡು ಸಲ ರಾಜ್ಯಸಭೆ ಸದಸ್ಯರಾಗಿ ಕೆಲಸ ಮಾಡಿರೋ ಪ್ರಭಾಕರ್ ಕೋರೆ ರಾಜ್ಯಪಾಲರಾಗಲಿದ್ದಾರೆ ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿ ಬಂದಿವೆ. ಕೇಂದ್ರ ಬಿಜೆಪಿ ತಂಡ ಸಮೀಕ್ಷೆ ನಡೆಸಿದ್ದು, ಪ್ರಭಾವಿ ಲಿಂಗಾಯತ ನಾಯಕನಿಗೆ ರಾಜ್ಯಪಾಲ ಹುದ್ದೆ ಕೊಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.


BJP Plan to celebrate Dr Prabhakar kore 75th birthday csb mrq
ಸಿದ್ದರಾಮೋತ್ಸವ


ಇದನ್ನೂ ಓದಿ:  Siddaramotsava: ವಿಶೇಷ ಕಾಣಿಕೆಗಳ ಜೊತೆ ಸಿದ್ದರಾಮೋತ್ಸವಕ್ಕೆ ಬಂದ ಅಭಿಮಾನಿಗಳು


ಪ್ರಭಾಕರ್ ಕೋರೆ ಮಾತು


ಈ ಬಗ್ಗೆ ಮಾತನಾಡಿದ ಪ್ರಭಾಕರ್ ಕೋರೆ, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದೇ ವೇಳೆಯಲ್ಲಿ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ. ಯಾರೇ ಹುಟ್ಟುಹಬ್ಬ ಮಾಡಿದರೂ ನಾನು ಪಾಲ್ಗೊಳ್ಳುತ್ತೇನೆ. ಅದ್ಧೂರಿ ಹುಟ್ಟುಹಬ್ಬದ ಆಚರಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಡಾ. ಪ್ರಬಾಕರ್ ಕೋರೆ ಹೇಳಿದ್ದಾರೆ.

Published by:Mahmadrafik K
First published: