HOME » NEWS » State » BJP PARTY WAS MODIS FAN CLUB KODIHALLI CHANDRASHEKAR ZP

ಬಿಜೆಪಿ ಪಕ್ಷ ಮೋದಿಯವರ ಅಭಿಮಾನಿಗಳ ಸಂಘ, ಕೇವಲ ಸಮರ್ಥನೆ ಮಾಡೋಕೆ ಇದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್

ಬಿಜೆಪಿ ಪಕ್ಷ ಅಂದರೆ ನರೇಂದ್ರ ಮೋದಿ ಅವರ ಅಭಿಮಾನ ಸಂಘ ಅನ್ನುವಂತಾಗಿದೆ. ಕೃಷಿ  ಕಾಯ್ದೆಗಳು ಜಾರಿಗೆ ಬರಲು ನಾವು  ಬಿಡುವುದಿಲ್ಲ. ಬಂದರೆ ದೇಶದಲ್ಲಿ ಸಿವಿಲ್‌ ವಾರ್‌ ಆಗುತ್ತೆ ಎಚ್ಚರ ಎಂದರು.

news18-kannada
Updated:January 17, 2021, 9:57 PM IST
ಬಿಜೆಪಿ ಪಕ್ಷ ಮೋದಿಯವರ ಅಭಿಮಾನಿಗಳ ಸಂಘ, ಕೇವಲ ಸಮರ್ಥನೆ ಮಾಡೋಕೆ ಇದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್
kodihalli chandrashekhar
  • Share this:
ಕೋಲಾರ: ಬಿಜೆಪಿ ಪಕ್ಷ ನರೇಂದ್ರ ಮೋದಿಯವರ ಅಭಿಮಾನಿಗಳ ಸಂಘವಾಗಿದೆ. ಇಲ್ಲಿ ಅಭಿಮಾನಿಗಳು ಕೇವಲ ಸಮರ್ಥನೆ ಮಾಡೋಕೆ ಇದ್ದಾರೆ ರೈತಸಂಘದ ರಾಜ್ಯಾದ್ಯಕ್ಷ್ಯ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ. ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಚಂದ್ರಶೇಖರ್, ದೇಶದಲ್ಲಿ ಮತ್ತು ರಾಜ್ಯದಲ್ಲಿ, ಬಿಜೆಪಿ ಯವರು ಮಾತನಾಡುವುದಕ್ಕೂ ಈ ರೀತಿ ಮಾಡೋದಕ್ಕೂ ಸರಿಯಾಗಿದೆ. ಇದರ ಅರ್ಥ ಇನ್ಮುಂದೆ ಬಜೆಟ್‌ ಗಳನ್ನು ಜನಸಾಮಾನ್ಯರು ಗಂಭೀರವಾಗಿ  ಪರಿಗಣಿಸಬಾರದು ಅನ್ನೋದಾಗಿದೆ. ದೇಶದ ಆರ್ಥಿಕತೆ ಕುಸಿದು ಹೋಗಿದೆ. ಜಿಎಸ್‌ಟಿ, ಕಪ್ಪು ಹಣ ವಾಪಸ್ಸು ತರೋದು, ಗಂಗಾಕಲ್ಯಾಣ ಯೋಜನೆ ಸಹ ಪೂರ್ಣಗೊಂಡಿಲ್ಲ. ಜನರಿಗೆ ಗೊಂದಲು ಸೃಷ್ಟಿಸಿ ತಪ್ಪು ಗ್ರಹಿಕೆ ಮಾಡುವ ಕೆಲಸ ಬಿಜೆಪಿ ಸರ್ಕಾರಗಳು ಮಾಡುತ್ತಿದೆ ಎಂದರು.

ಎರಡು ದಿನಗಳ ಕಾಲ ಶಿವಮೊಗ್ಗದಲ್ಲಿ ಬಿಜೆಪಿ ಪಕ್ಷದ ಸಭೆ ನಡೆದಿದೆ. ನರೇಂದ್ರ ಮೋದಿ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನ , ಯಡಿಯೂರಪ್ಪ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾಯ್ದೆಗಳಲ್ಲಿ ಭೂ ಸುಧಾರಣೆ, ಜಾನುವಾರು ಹತ್ಯೆ ಕಾಯ್ದೆಗಳನ್ನ, ನಾವು ಸಮರ್ಥಿಸಿಕೊಳ್ಳಬೇಕು ಎಂದು ತೀರ್ಮಾನ ಆಗಿದೆ.  ಬಿಜೆಪಿಯಲ್ಲಿ ಎಂಪಿ ಯಿಂದ ಹಿಡಿದು ಗ್ರಾಮ ಪಂಚಾಯತಿ ಸದಸ್ಯನ ವರೆಗೂ ಹಳ್ಳಿ ಹಳ್ಳಿಗೂ ಹೋಗಿ ಕಾಯ್ದೆ ತಂದಿರುವುದು ಸರಿಯಿದೆ, ರೈತರಿಗೆ ಉದ್ಯೋಗ ಸೃಷ್ಟಿ ಆಗುತ್ತೆ ಅಂತ ಜನರಿಗೆ ತಿಳಿಸಬೇಕು ಅಂತ ಸೂಚನೆ ಕೊಟ್ಟಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.

ಸರ್ಕಾರಿ ಹಣದಲ್ಲಿ ಕಾರ್ಯಕ್ರಮ ಮಾಡಿ ರೈತರ ಮುಖಂಡರೂ ಹೇಳುವುದನ್ನು ನಂಬಬೇಡಿ. ಸರ್ಕಾರ ಹೇಳುವುದು ನೂರಕ್ಕೇ ನೂರು ಸತ್ಯ ಎಂದು ಪ್ರಚಾರ ಮಾಡುತ್ತಿದ್ದಾರೆ. ಮೂರು ಕಾಯ್ದೆಗಳ ಬಗ್ಗೆ ನೂರು ಸುಳ್ಳುಗಳು ಹೇಳುವ ಕೆಲಸ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್‌ ಅವರನ್ನು ವ್ಯಂಗ್ಯವಾಡಿದರು.

ಇನ್ನು ಗೋ ಹತ್ಯೆ ನಿಷೇಧ ಕಾನೂನು ಬಗ್ಗೆ ಕಿಡಿಕಾರಿದ ಕೋಡಿಹಳ್ಳಿ ಚಂದ್ರಶೇಖರ್, ಗೋಹತ್ಯೆ ಕಾನೂನು  ಇವತ್ತಿನದು, ನಿನ್ನೆಯದಲ್ಲಾ .ಅಶೋಕನ ಕಾಲದಲ್ಲೂ ಇತ್ತು,  ಔರಂಗಜೇಬನ ಕಾಲದಲ್ಲಿ ಸಹ ಇತ್ತು.  ಗೋವುಗಳ ಸಂಖ್ಯೆ, ಹಾಲು ಉತ್ಪನ ಕಡಿಮೆ ಆದಾಗ ಗೋ ಹತ್ಯೆ ನಿಷೇದ ಮಾಡಿದ್ದರು. 1964  ಇಸವಿಯಲ್ಲೇ ಭಾರತ ದೇಶದಲ್ಲಿ ನೆಹರೂ ಸಾಹೇಬರು ಸಹ ನಿಷೇಧ ಮಾಡಿದ್ದರು, ಆ ವೇಳೆ ಭಾರತೀಯ ಜನತಾ ಪಕ್ಷವಿತ್ತಾ ಎಂದು ಪ್ರಶ್ನಿಸಿದರು.

ನಂತರದಲ್ಲಿ ಅದೂ ಮುಂದುವರೆಯಿತು. ಸಧ್ಯ ಒಂದೂವರೆ ಕೋಟಿ ಲೀಟರ್‌ ಹಾಲು ಉತ್ಪಾದನೆ ಆಗುತ್ತಿದೆ.  ಆದರೂ ಸಹ ಹಾಲಿನ ಕೊರತೆ ಆಗಿದೆ.  ಸಿಎಂ ಯಡಿಯೂರಪ್ಪ ಹೇಳಲಿ, ಬೇಕಾದರೆ ಒಂದು ವರ್ಷದಲ್ಲಿ ಹಾಲು ಉತ್ಪನ್ನ ಹೆಚ್ಚಳ ಮಾಡೋಣ, ಪ್ರತಿ ಲೀಟರ್ ಗೆ  5 ರುಪಾಯಿ ಹೆಚ್ಚಾಗಿ ಹಣ ಕೊಟ್ಟರೆ  ಸಹಜವಾಗಿ,  ಹಾಲು ಉತ್ಪಾದನೆ ಹೆಚ್ಚಳವಾಗುತ್ತೆ. ಅಥವಾ ಜಾನುವಾರುಗಳ ಸಂಖ್ಯೆ ಕಡಿಮೆ ಆಗಿದ್ದರೆ ಅದನ್ನೂ ಹೆಚ್ಚಳ ಮಾಡೋದಕ್ಕೆ ಪ್ರಯತ್ನ ಮಾಡೋಣ.

ಆದರೆ ನೀವು ತಂದಿರೋ ಗೋ ಹತ್ಯೆ ನಿಷೇದ ಕಾಯ್ದೆ ಅಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ಈಗ ತಂದಿರುವ ಕಾನೂನಿನಲ್ಲಿ ಗೋ ಜೊತೆಗೆ ಎತ್ತು, ಹಸುವಿನ ಕರು, ಎಮ್ಮೆ,ಕೋಣ ಇವೆಲ್ಲಾ ಸೇರಿಸಿ ಗೋಹತ್ಯೆ ನಿಷೇದ ಕಾಯ್ದೆ ಅಂತ ತಂದಿದ್ದಾರೆ. ಇವರಿಗೇನು ತಲೆಬುಡ ಇದೀಯ ಸಾಬರು,  ದನ ಮಾಂಸ ತಿಂತಾರೆ ಅದಕ್ಕೆ ನಿಷೇಧ ಮಾಡಿದ್ದೀವಿ ಅಂತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರು ಫಿಜ್ಜಾ ಬರ್ಗರ್ ತಿನ್ನೋರು ಎಂಬ ಬಿಜೆಪಿ ನಾಯಕರ ಹೇಳಿಕೆಗೆ  ಗರಂ ಆದ ಕೋಡಿಹಳ್ಳಿ ಚಂದ್ರಶೇಖರ್‌, ಬಿಜೆಪಿ ಅವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದರು.  ಎಮ್ಮೆ, ದನ, ಸಗಣಿ ಗಂಜಲ ಗೊತ್ತಿಲ್ಲದ ಇರೋರು ನಮಗೆ ಹೇಳಿಕೊಡೋದಕ್ಕೆ ಬಂದಿದ್ದಾರೆ. ನರೇಂದ್ರ ಮೋದಿ ಏನು ಮಾಡುವರೊ ಅದನ್ನು ಸಮರ್ಥನೆ ಮಾಡುವುದು  ಮಾತ್ರ ತಿಳಿದಿದೆ. ಬಿಜೆಪಿ ಪಕ್ಷ ಅಂದರೆ ನರೇಂದ್ರ ಮೋದಿ ಅವರ ಅಭಿಮಾನ ಸಂಘ ಅನ್ನುವಂತಾಗಿದೆ. ಕೃಷಿ  ಕಾಯ್ದೆಗಳು ಜಾರಿಗೆ ಬರೋದಕ್ಕೆ ನಾವು  ಬಿಡೋದಿಲ್ಲ, ಬಂದರೆ ದೇಶದಲ್ಲಿ ಸಿವಿಲ್‌ ವಾರ್‌ ಆಗುತ್ತೆ ಎಚ್ಚರ ಎಂದು ವಾಗ್ದಾಳಿ ನಡೆಸಿದರು.
Published by: zahir
First published: January 17, 2021, 9:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories