ಹುಬ್ಬಳ್ಳಿ: ಬಿಜೆಪಿಯ ಲಕ್ಕಿ ಗ್ರೌಂಡ್ನಲ್ಲಿ (BJP Lucky Ground) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಗ್ರೌಂಡ್ನಲ್ಲಿ ಕಾರ್ಯಕ್ರಮ ಮಾಡಿದಾಗಲೆಲ್ಲಾ ಬಿಜೆಪಿಗೆ (BJP) ಹೆಚ್ಚು ಸೀಟು ಬಂದಿರೋದ್ರಿಂದ ಇದು ಲಕ್ಕಿ ಗ್ರೌಂಡ್ ಎನಿಸಿಕೊಂಡಿದೆ. ಅದೇ ಕಾರಣಕ್ಕೆ ಧಾರವಾಡದ (Dharwad) ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಲ್ಲಿ (Hubballi) ಉದ್ಘಾಟನೆ ಭಾಗ್ಯ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ರೈಲ್ವೇ ಮೈದಾನ (Hubballi Railway Ground) ಬಿಜೆಪಿಯ ಲಕ್ಕಿ ಗ್ರೌಂಡ್. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಪಿಎಂ ಆಗಿದ್ದಾಗ ಇದೇ ಗ್ರೌಂಡ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
2004 ರಲ್ಲಿ ವಿಜಯ ಸಂಕಲ್ಪ ಯಾತ್ರೆ ಮಾಡಿದ್ದ ಬಿಜೆಪಿ, 44 ಸೀಟುಗಳಿಂದ 79 ಸೀಟುಗಳಿಗೆ ಏರಿಕೆ ಮಾಡಿಕೊಂಡಿತ್ತು. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚು ಸೀಟು ಗೆದ್ದು ಬಿಜೆಪಿ ಗೆಲುವಿನ ನಗೆ ಬೀರಿತ್ತು. ಈ ಅವಧಿಯಲ್ಲಿಯೇ ಜೆಡಿಎಸ್ ಜೊತೆ ಸೇರಿ ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಅದೇ ಕಾರಣಕ್ಕೆ ಇದೇ ರೈಲ್ವೇ ಮೈದಾನದ ಮೂಲಕ ಚುನಾವಣಾ ರಣಕಹಳೆ ಮೊಳಗಿಸಲು ಮುಂದಾಗಿದೆ.
ದಿಢೀರಾಗಿ ಹುಬ್ಬಳ್ಳಿಗೆ ಶಿಫ್ಟ್
ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ದಿಢೀರಾಗಿ ಹುಬ್ಬಳ್ಳಿಗೆ ಶಿಫ್ಟ್ ಮಾಡಲಾಗಿದೆ. ಐದು ದಿನಗಳ ಕಾಲ ಯುವ ಜನೋತ್ಸವ ನಡೆಯಲಿದೆ. ಯುವಜನೋತ್ಸವದ ಎಲ್ಲಾ ಕಾರ್ಯಕ್ರಮ ಕೆಸಿಡಿ ಕಾಲೇಜು ಆವರಣದಲ್ಲಿ ನಡೆಯುತ್ತಿವೆ. ಆದ್ರೆ ಉದ್ಘಾಟನೆ ಮಾತ್ರ ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ಅನ್ನೋದು ವಿಶೇಷ.
ಒಂದು ಏಟು, ಎರಡು ಹಕ್ಕಿ
ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯೋಕೆ ಬಿಜೆಪಿ ಮುಂದಾಗಿದೆ. ಒಂದು ಕಡೆ ಯುವ ಸಮುದಾಯದಲ್ಲಿ ಚುನಾವಣಾ ಕಿಚ್ಚು ಹಚ್ಚೋದು, ಮತ್ತೊಂದು ಕಡೆ ಲಕ್ಕಿ ಗ್ರೌಂಡ್ ಮೂಲಕ ಚುನಾವಣಾ ರಣಕಹಳೆ ಮೊಳಗಿಸೋ ಉದ್ದೇಶ ಹೊಂದಿದೆ.
ಬಿಜೆಪಿ ನಾಯಕರು ಹೇಳೋದೇನು?
ಟಾರ್ಗೆಟ್ 150 ರೀಚ್ ಆಗೋಕೆ ರೈಲ್ವೆ ಮೈದಾನದಿಂದ ರಣಕಹಳೆ ಮೊಳಗಿಸಲು ಬಿಜೆಪಿ ಮುಂದಾಗಿದೆ. ರೈಲ್ವೇ ಮೈದಾನ ನಮಗೆ ಲಕ್ಕಿ ಗ್ರೌಂಡ್. ಇಲ್ಲಿ ಕಾರ್ಯಕ್ರಮ ಮಾಡಿದಾಗಲೆಲ್ಲಾ ಒಳ್ಳೆಯದಾಗಿದೆ. ರೈಲ್ವೇ ಮೈದಾನದಲ್ಲಿ ಸಮಾವೇಶ ಮಾಡಿದಾಗ ಹೆಚ್ಚು ಸೀಟು ಗೆದ್ದಿದ್ದೇವೆ ಎಂದು ಸ್ಥಳೀಯ ಬಿಜೆಪಿ ನಾಯಕರು ಹೇಳುತ್ತಾರೆ.
ಈ ಸಮಾವೇಶಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಯುವ ಸಮುದಾಯ ಪ್ರೇರೇಪಿಸಲು ಮೋದಿ ಬರುತ್ತಿದ್ದಾರೆ. ಇದರಿಂದ ನಮ್ಮ ಪಕ್ಷಕ್ಕೆ ಲಾಭ ಆದ್ರೆ ಆಗಬಹುದು ಎಂದು ಬಿಜೆಪಿ ವಕ್ತಾರ ರವಿ ನಾಯಕ್ (Ravi Naik, BJP Spoke person) ಹೇಳುತ್ತಾರೆ.
ಕರ್ನಾಟಕಕ್ಕೆ ಮೋದಿ
ಜನವರಿ 19ಕ್ಕೆ ಕಲಬುರಗಿಯಲ್ಲಿ ಐತಿಹಾಸಿಕ ಬಂಜಾರ ಸಮಾವೇಶ ಆಯೋಜಿಸಿದ್ದು, ಅಲ್ಲೂ ಉತ್ತರ ಕರ್ನಾಟಕ ಜನರನ್ನ ಸೆಳೆಯೋಕೆ ಪ್ರಧಾನಿಯವರನ್ನು ಆಹ್ವಾನಿಸಿದ್ದಾರೆ. 12 ಫೆಬ್ರವರಿ 2023ಕ್ಕೆ ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿಯವರು ಬರ್ತಿದ್ದಾರೆ. ಶಿವಮೊಗ್ಗ ಕಾರ್ಯಕ್ರಮದ ಮೂಲಕ ಮಲೆನಾಡು ಭಾಗದಲ್ಲಿ ಮತಬೇಟೆಗೆ ಬಿಜೆಪಿ ಲಗ್ಗೆ ಹಾಕ್ತಿದೆ.
ಇದನ್ನೂ ಓದಿ: Siddaramaiah: ಸಿದ್ದರಾಮಯ್ಯನವರ ಆಯ್ಕೆ ಕೋಲಾರವೇ ಏಕೆ? ಮಾಜಿ ಸಿಎಂಗೆ ಸಿಗುತ್ತಾ ಗೆಲುವಿನ ಗಣಿ?
ಕಾಂಗ್ರೆಸ್ಗೆ ಶಕ್ತಿ ತುಂಬಲು ಪ್ರಿಯಾಂಕಾ ಎಂಟ್ರಿ
ಬಿಜೆಪಿಯವರನ್ನ ಹೋದಲ್ಲಿ ಬಂದಲ್ಲಿ ಇಕ್ಕಟ್ಟಿಗೆ ಸಿಲುಕಿಸ್ತಿರೋ ಕಾಂಗ್ರೆಸ್ಸಿಗರು ಫುಲ್ ಜೋಶ್ನಲ್ಲಿದ್ದಾರೆ. ಇದೇ ಜೋಶ್ನಲ್ಲೇ ಮುನ್ನುಗ್ಗಿ ನಡೆಯಿರಿ ಅಂತ ಶಕ್ತಿ ತುಂಬೋಕೆ ಪ್ರಿಯಾಂಕಾ ವಾದ್ರಾ ರಾಜ್ಯಕ್ಕೆ ಬರ್ತಿದ್ದಾರೆ. ಜನವರಿ 16ರಂದು ಪ್ರಿಯಾಂಕಾ ಗಾಂಧಿ ವಾದ್ರಾ (Congress Leader Priyanka Gandhi Vadra) ರಾಜ್ಯಕ್ಕೆ ಬರುವ ಸಾಧ್ಯತೆಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ