ಬಜೆಟ್ ಅಧಿವೇಶನ ಮುಗಿಯುವವರೆಗೂ ಸುಮ್ಮನಿರಿ: ಉಮೇಶ್ ಕತ್ತಿಗೆ ಬಿಜೆಪಿ ಹೈಕಮಾಂಡ್ ಎಚ್ಚರಿಕೆ ಸಂದೇಶ

ಜೂನ್ ಅಥವಾ ಜುಲೈ ತಿಂಗಳಲ್ಲಿ ಸಚಿವ ಸಂಪುಟದ ಪುನಾರಚನೆಯಾಗುವುದು ನಿಶ್ಚಿತ. ಅಲ್ಲಿಯವರೆಗೆ ನೀವು ಕಾಯಲೇಬೇಕು ಎಂದೂ ನಡ್ಡಾ ಸ್ಪಷ್ಟವಾಗಿ ತಿಳಿಸಿದ್ದಾರೆ. ನಡ್ಡಾ ಅವರ ಮಾತಿಗೆ ಉಮೇಶ್ ಕತ್ತಿ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ ಎನ್ನುತ್ತವೆ ಮೂಲಗಳು.

news18-kannada
Updated:February 26, 2020, 9:52 AM IST
ಬಜೆಟ್ ಅಧಿವೇಶನ ಮುಗಿಯುವವರೆಗೂ ಸುಮ್ಮನಿರಿ: ಉಮೇಶ್ ಕತ್ತಿಗೆ ಬಿಜೆಪಿ ಹೈಕಮಾಂಡ್ ಎಚ್ಚರಿಕೆ ಸಂದೇಶ
ಶಾಸಕ ಉಮೇಶ್​ ಕತ್ತಿ
  • Share this:
ಬೆಂಗಳೂರು(ಫೆ. 26): ಇತ್ತೀಚೆಗೆ ನಡೆದ ಬಿಎಸ್​ವೈ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗಲಿಲ್ಲವೆಂದು ಹಲವು ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ. ಕೆಲವರು ಬಹಿರಂಗವಾಗಿ ತಮ್ಮ ಅಸಂತೋಷವನ್ನು ಹೊರಹಾಕುತ್ತಿದ್ದಾರೆ. ಅವರಲ್ಲಿ ಉಮೇಶ್ ಕತ್ತಿ ಪ್ರಮುಖರು. ರಾಜ್ಯ ಸರ್ಕಾರದ ವಿರುದ್ಧ ಅವರು ಆಗಾಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲೆನೋವು ಸೃಷ್ಟಿಸಿರುವುದು ವೇದ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಧ್ಯಪ್ರವೇಶ ಮಾಡಿ ಉಮೇಶ್ ಕತ್ತಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಹಾಗೆಯೇ ಮುಂದಿನ ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಭರವಸೆಯನ್ನೂ ನೀಡಿದ್ಧಾರೆ.

ರಾಜ್ಯದ ಬಜೆಟ್ ಅಧಿವೇಶನ ಮುಗಿಯುವವರೆಗೂ ಸುಮ್ಮನಿರಿ. ಪಕ್ಷಕ್ಕೆ ಮುಜುಗರ ಉಂಟಾಗುವ ಕೆಲಸ ಮಾಡಬೇಡಿ. ಪಕ್ಷದ ವಿರುದ್ಧ ಮಾತನಾಡುವುದು, ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುವುದನ್ನು ನಿಲ್ಲಿಸಿ ಎಂದು ಉಮೇಶ್ ಕತ್ತಿ ಅವರಿಗೆ ನಡ್ಡಾ ತಿಳಿಹೇಳಿದ್ಧಾರೆನ್ನಲಾಗಿದೆ.

 ಇದನ್ನೂ ಓದಿ: ಪಾಕ್​ ಪರ ಘೋಷಣೆ ವಿವಾದ; ಆರೋಪಿ ಅಮೂಲ್ಯಾಳನ್ನು 4 ದಿನ ಪೊಲೀಸ್ ವಶಕ್ಕೆ ನೀಡಿದ ಕೋರ್ಟ್​

ಮಾರ್ಚ್ 2ರಂದು ಬಜೆಟ್ ಅಧಿವೇಶನ ಪ್ರಾರಂಭಗೊಳ್ಳುತ್ತದೆ. ಮಾರ್ಚ್ 5ರಂದು ಯಡಿಯೂರಪ್ಪ ಬಜೆಟ್ ಮಂಡಿಸುತ್ತಾರೆ. ಅದು ಬಹಳ ಮುಖ್ಯವಾದ ಕೆಲಸ. ಯಡಿಯೂರಪ್ಪ ಆ ಕೆಲಸದ ಮೇಲೆ ಗಮನ ಹರಿಸುವುದು ಅಗತ್ಯವಿದೆ. ನೀವು ತಂಟೆ ತಕರಾರು ಮಾಡಿದರೆ ಅವರಿಗೆ ಕಷ್ಟವಾಗುತ್ತದೆ. ಯಾವುದೇ ತೊಂದರೆ ಇಲ್ಲದೇ ಬಜೆಟ್ ಮಂಡನೆಯಾಗಬೇಕು. ಎರಡೂ ಸದನದಲ್ಲೂ ಅದು ನಿರ್ಘ್ನವಾಗಿ ಅನುಮೋದನೆಯಾಗಬೇಕು. ಅಲ್ಲಿಯವರೆಗೆ ನೀವು ಯಾವುದೇ ಒತ್ತಡ ಹಾಕಲು ಹೋಗಬೇಡಿ ಎಂದು ಪಕ್ಷಾಧ್ಯಕ್ಷರು ಉಮೇಶ್ ಕತ್ತಿಗೆ ಸೂಚನೆ ನೀಡಿದ್ಧಾರೆ.

ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಉಮೇಶ್ ಕತ್ತಿ ಅವರು ಬಜೆಟ್ ಅಧಿವೇಶನಕ್ಕೆ ಮುನ್ನವೇ ಎರಡನೇ ಸುತ್ತಿನ ಸಂಪುಟ ವಿಸ್ತರಣೆ ಆಗಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ನಡ್ಡಾ ಅವರು ದೂರವಾಣಿ ಕರೆ ಮಾಡಿ ಕತ್ತಿಗೆ ಬುದ್ಧಿ ಹೇಳಿದ್ದಾರೆನ್ನಲಾಗಿದೆ.

ಜೂನ್ ಅಥವಾ ಜುಲೈ ತಿಂಗಳಲ್ಲಿ ಸಚಿವ ಸಂಪುಟದ ಪುನಾರಚನೆಯಾಗುವುದು ನಿಶ್ಚಿತ. ಅಲ್ಲಿಯವರೆಗೆ ನೀವು ಕಾಯಲೇಬೇಕು ಎಂದೂ ನಡ್ಡಾ ಸ್ಪಷ್ಟವಾಗಿ ತಿಳಿಸಿದ್ದಾರೆ. ನಡ್ಡಾ ಅವರ ಮಾತಿಗೆ ಉಮೇಶ್ ಕತ್ತಿ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ ಎನ್ನುತ್ತವೆ ಮೂಲಗಳು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: February 26, 2020, 9:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading