• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • CT Ravi: ಕಿವಿಗೆ ಹೂವಿಟ್ಟ ಕಾಂಗ್ರೆಸ್‌ ನಾಯಕರನ್ನು ಮಂಗಳಮುಖಿಯರಿಗೆ ಹೋಲಿಸಿದ್ರಾ ಸಿಟಿ ರವಿ?!

CT Ravi: ಕಿವಿಗೆ ಹೂವಿಟ್ಟ ಕಾಂಗ್ರೆಸ್‌ ನಾಯಕರನ್ನು ಮಂಗಳಮುಖಿಯರಿಗೆ ಹೋಲಿಸಿದ್ರಾ ಸಿಟಿ ರವಿ?!

ಸಿ.ಟಿ ರವಿ

ಸಿ.ಟಿ ರವಿ

ಬಿಜೆಪಿ ಪಕ್ಷದಲ್ಲಿ ನಾಯಕತ್ವ ಇಲ್ಲ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಗೆ ರಿಯಾಕ್ಷನ್ ಕೊಟ್ಟ ಸಿಟಿ ರವಿ, ಬಿಜೆಪಿ ಪಕ್ಷದ ಒಳಗೆ ಗೊಂದಲ ಹುಟ್ಟಿ ಹಾಕಬೇಕೆಂಬ ಕಾರಣದಿಂದ ಕೆಲ ರಾಜಕೀಯ ಪಕ್ಷದವರು ಈ ರೀತಿ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಆಯಾ ರಾಜಕೀಯ ಪಕ್ಷದ ಮನೆ ಜಗಳ ಮುನ್ನೆಲೆಗೆ ಬಂದಾಗ ನಮ್ಮ ಪಕ್ಷದ ನಾಯಕತ್ವದ ಬಗ್ಗೆ ಮಾತನಾಡ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟರು.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Karwar, India
 • Share this:

ಕಾರವಾರ: ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮಂಡಿಸಿದ ರಾಜ್ಯ ಬಜೆಟ್‌ಗೂ ಮುನ್ನ ಕಿವಿಯಲ್ಲಿ ಹೂವು ಇಟ್ಟುಕೊಂಡು ಬಂದು ಭಾರೀ ಸುದ್ದಿಯಾಗಿದ್ದ ಕಾಂಗ್ರೆಸ್ ನಾಯಕರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಕಾರವಾರದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಿ.ಟಿ ರವಿ, ಕಾಂಗ್ರೆಸ್‌ (Congress Leaders) ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.


ಮಂಗಳಮುಖಿಯರಿಗೆ ಹೋಲಿಕೆ?!


ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ ನಾಯಕರು ಬಜೆಟ್‌ ದಿನ ಕಿವಿಯಲ್ಲಿ ಹೂವು ಇಟ್ಟುಕೊಂಡು ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಾಸಕ ಸಿ.ಟಿ ರವಿ, ಕಾಂಗ್ರೆಸ್‌ ನಾಯಕರನ್ನು ಪರೋಕ್ಷವಾಗಿ ಮಂಗಳ ಮುಖಿಯರಿಗೆ ಹೋಲಿಕೆ ಮಾಡಿದ್ದಾರೆ. ಚೆಂಡು ಹೂವು ಅವರಿಗೆ ಚಂದ ಕಾಣ್ತದೆ. ಬೆಂಗಳೂರಿನ ಜಯನಗರದಲ್ಲಿ ಒಂದು ಬ್ಲಾಕ್‌ನಲ್ಲಿ ಅಲ್ಲಿ ಇಲ್ಲಿ ನಿಂತ್ಕಂಡ್ ಇರ್ತಾರೆ, ಹಾಗೆ ಕಾಣ್ತಾರೆ ಕಾಂಗ್ರೆಸ್‌ನವರು ಎನ್ನುವ ಮೂಲಕ ಸಿ.ಟಿ ರವಿ ಪರೋಕ್ಷವಾಗಿ ಮಂಗಳಮುಖಿಯರಿಗೆ ಹೋಲಿಸುವಂತಹ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ: Karnataka Election: ಸಿಟಿ ರವಿಗೆ ಸಿಎಂ ಬೊಮ್ಮಾಯಿ ಪರೋಕ್ಷ ಟಾಂಗ್! ಕುಚುಕು ಗೆಳೆಯನ ಬಗ್ಗೆ ಶ್ರೀರಾಮುಲು ಅಚ್ಚರಿ ಹೇಳಿಕೆ


ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ


ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಬಿಜೆಪಿ ಪಕ್ಷದಲ್ಲಿ ನಾಯಕತ್ವ ಇಲ್ಲ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಗೆ ರಿಯಾಕ್ಷನ್ ಕೊಟ್ಟರು. ಬಿಜೆಪಿ ಪಕ್ಷದ ಒಳಗೆ ಗೊಂದಲ ಹುಟ್ಟಿ ಹಾಕಬೇಕೆಂಬ ಕಾರಣದಿಂದ ಕೆಲ ರಾಜಕೀಯ ಪಕ್ಷದವರು ಈ ರೀತಿ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಆಯಾ ರಾಜಕೀಯ ಪಕ್ಷದ ಮನೆ ಜಗಳ ಮುನ್ನೆಲೆಗೆ ಬಂದಾಗ ನಮ್ಮ ಪಕ್ಷದ ನಾಯಕತ್ವದ ಬಗ್ಗೆ ಮಾತನಾಡ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟರು.


ಡಿಎನ್‌ಎ ಮೂಲಕ ನಾಯಕತ್ವ


ಇನ್ನು ಕಾಂಗ್ರೆಸ್‌ ಡಿಎನ್‌ಎ ಮೂಲಕ ನಾಯಕತ್ವ ಬರುತ್ತೆ ಎಂದು ಭಾವಿಸುತ್ತದೆ, ಇವರಿಗೆ ಹಿಂದಿನಿಂದಲೂ ಕುಟುಂಬ ನಾಯಕತ್ವ ರೂಪಿಸಿ ರೂಢಿ ಎಂದು ವ್ಯಂಗ್ಯವಾಡಿದ ಶಾಸಕ ಸಿ.ಟಿ ರವಿ, ಆದ್ರೆ ನಾಯಕತ್ವ ಅನ್ನೋದು ಜನರೊಟ್ಟಿಗೆ ಬೆರೆತುಕೊಂಡು ಅವರಿಗೆ ಸ್ಪಂದಿಸುವ ಮೂಲಕ ಬರುತ್ತದೆ. ಕಾಂಗ್ರೆಸ್‌ನವರಿಗೆ ಕುಟುಂಬದಿಂದ ನಾಯಕತ್ವ ಬರ್ತಿದೆ. ಇದ್ರಿಂದ ಅವರಿಗೆ ನಾಯಕತ್ವದ ಬಗ್ಗೆ ಗೊತ್ತಿಲ್ಲ. ಆದರೆ ನಾವು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆಗೆ ಹೋಗ್ತೆವೆ ಎಂದು ಹೇಳಿದರು.


ಇದನ್ನೂ ಓದಿ: Pramod Mutalik: ಸಚಿವ ಸುನೀಲ್ ಕುಮಾರ್ ಸುತ್ತಮುತ್ತ ಇರುವವರೆಲ್ಲ ಕಾಂಗ್ರೆಸ್ಸಿನವರು: ಪ್ರಮೋದ್ ಮುತಾಲಿಕ್ ಕಿಡಿ


ಗೋವಾದಲ್ಲೇನಾಯ್ತು?


ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಮತ್ತೆ ಕಾಂಗ್ರೆಸ್ ಪಕ್ಷದ ಶಾಸಕರನ್ನ ಬಿಜೆಪಿಗೆ ಕರೆತರುತ್ತೇನೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಟಿ ರವಿ, ರಾಜಕಾರಣದಲ್ಲಿ ಏನು ಬೇಕಾದ್ರೂ ಆಗಬಹುದು. ಗೋವಾದಲ್ಲಿ ಕಾಂಗ್ರೆಸ್‌ನಿಂದ 12 ಶಾಸಕರು ಗೆದ್ದು ಬಂದಿದ್ರು, ಬಿಜೆಪಿಯಿಂದ 20 ಜನ ಆಯ್ಕೆ ಆಗಿದ್ರು, ನಾವು ಪಕ್ಷೇತರರ ಬೆಂಬಲ ಪಡೆದು ಗೋವಾದಲ್ಲಿ ಸರ್ಕಾರ ರಚನೆ ಮಾಡಿದ್ವಿ. ನಮ್ಮ ಪಕ್ಷ ಬಹುಮತದಲ್ಲಿ ಇತ್ತು, ಆದರೂ ಕಾಂಗ್ರೆಸ್‌ನವರು 8 ಜನ ಪಕ್ಷ ಬಿಟ್ಟು ಬಂದ್ರು. ಇದು ಅಪರಾಧ ಆಗುತ್ತಾ? ಹಾಗೆ ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿ ಇರುವವರು ಹಾಗೆ ಹೇಳಿರಬಹುದು ಎಂದರು.


ರಮೇಶ್ ಜಾರಕಿಹೊಳಿ ಅವರಿಗೆ ಏನು ಚಿಂತೆ ಮಾಡಬೇಡ ಅಣ್ಣಾ. ನಾನು ಕಾಂಗ್ರೆಸ್‌ನಲ್ಲಿ ಇದ್ದರೂ ಕೂಡ, ನೀವು ಯಾವಾಗ ಕರೀತೀರೀ ಅವಾಗ ಬರ್ತೀನಿ ಅಂತಾ ಹೇಳಿರಬಹುದು. ಅದರಲ್ಲಿ ಏನಿದೆ ಎಂದು ಜಾರಕಿಹೊಳಿ ಹೇಳಿಕೆಗೆ ಸಿಟಿ ರವಿ ಧ್ವನಿಗೂಡಿಸಿದರು.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು