HOME » NEWS » State » BJP NATIONAL GENERAL SECRETARY CT RAVI SAYS BS YEDIYURAPPA ONLY LEADER OF BJP NOT OWNER KGV LG

ಯಡಿಯೂರಪ್ಪ ಪಕ್ಷದ ನಾಯಕರೇ ಹೊರತು ಮಾಲೀಕರಲ್ಲ; ಇಲ್ಲಿ ವಂಶಪಾರಂಪರ್ಯ ಆಡಳಿತ ಇಲ್ಲ; ಸಿ.ಟಿ.ರವಿ

ಯಡಿಯೂರಪ್ಪ ನಾಯಕ ಆದರೆ ಕಾರ್ಯಕರ್ತರೇ ಮಾಲೀಕರು. ಓನರ್ ಶಿಪ್ ಬೇರೆ, ನಾಯಕರ ಮಕ್ಕಳು‌ ರಾಜಕೀಯಕ್ಕೆ ಬರುವುದು ಬೇರೆ. ಇತರ ಪಕ್ಷದಲ್ಲಿ ಅಂತಿಮ ನಿರ್ಧಾರ ಯಾವುದೋ ಒಬ್ಬ ನಾಯಕನ ಕುಟುಂಬ ತೆಗೆದುಕೊಳ್ಳಲಿದೆ ಎಂದರು.

news18-kannada
Updated:April 6, 2021, 9:05 AM IST
ಯಡಿಯೂರಪ್ಪ ಪಕ್ಷದ ನಾಯಕರೇ ಹೊರತು ಮಾಲೀಕರಲ್ಲ; ಇಲ್ಲಿ ವಂಶಪಾರಂಪರ್ಯ ಆಡಳಿತ ಇಲ್ಲ; ಸಿ.ಟಿ.ರವಿ
ಸಿ ಟಿ ರವಿ
  • Share this:
ಬೆಂಗಳೂರು(ಏ.06): ಕರ್ನಾಟಕದಲ್ಲಿ ವಂಶಪಾರಂಪರ್ಯ ಆಡಳಿತ ಇಲ್ಲ. ನಮ್ಮ‌ ಪಕ್ಷದ ಡಿಎನ್ ಎ ನಲ್ಲಿಯೂ ಅದು ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ‌ ಯಡಿಯೂರಪ್ಪ ಕುಟುಂಬಕ್ಕೆ ಉತ್ತರಾಧಿಕಾರ ಸಿಕ್ಕುವುದಿಲ್ಲ ಎನ್ನುವ ಸುಳಿವು ನೀಡಿದ್ದಾರೆ.

ಸರ್ಕಾರಿ ನಿವಾಸದಲ್ಲಿ  ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷ ಉತ್ತರಾಧಿಕಾರಿಗಳ ಸಂಸ್ಕೃತಿ ಪಕ್ಷವಲ್ಲ, ನಮ್ಮ ಪಕ್ಷಕ್ಕೆ ಯಾರೋ ಒಬ್ಬ ವ್ಯಕ್ತಿ ಮಾಲೀಕ ಅಲ್ಲ. ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಮಾಲೀಕರು. ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಕುಟುಂಬ, ಡಿಎಂಕೆಗೆ ಕರುಣಾನಿಧಿ, ಸಮಾಜವಾದಿ ಪಕ್ಷಕ್ಕೆ ಮುಲಾಯಂ ಯಾದವ್ ಹೀಗೆ ಎಲ್ಲ ಪಕ್ಷಕ್ಕೂ ಕುಟುಂಬ ಮಾಲೀಕತ್ವ ಇದೆ. ಆದರೆ ನಮ್ಮಲ್ಲಿ ಅಂತಹ ಪ್ರವೃತ್ತಿ ಇಲ್ಲ, ಕಾರ್ಯಕರ್ತರೇ ಮಾಲೀಕರು ಎಂದರು.

ಬಿಎಸ್ವೈ ಬಿಜೆಪಿ ನಾಯಕ, ಮಾಲೀಕರಲ್ಲ:

ಯಡಿಯೂರಪ್ಪ ನಮ್ಮ‌ಸರ್ವೋಚ್ಚ ನಾಯಕರೇ ಹೊರತು ಮಾಲೀಕರಲ್ಲ, ನಮ್ಮ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಯಕ, ಅಮಿತ್ ಶಾ ನಾಯಕ, ಯಡಿಯೂರಪ್ಪ ನಾಯಕ ಆದರೆ ಕಾರ್ಯಕರ್ತರೇ ಮಾಲೀಕರು. ಓನರ್ ಶಿಪ್ ಬೇರೆ, ನಾಯಕರ ಮಕ್ಕಳು‌ ರಾಜಕೀಯಕ್ಕೆ ಬರುವುದು ಬೇರೆ. ಇತರ ಪಕ್ಷದಲ್ಲಿ ಅಂತಿಮ ನಿರ್ಧಾರ ಯಾವುದೋ ಒಬ್ಬ ನಾಯಕನ ಕುಟುಂಬ ತೆಗೆದುಕೊಳ್ಳಲಿದೆ. ಆದರೆ ನಮ್ಮ ಪಕ್ಷದಲ್ಲಿ ಕೋರ್‌ಕಮಿಟಿ, ಸಂಸದೀಯ ಮಂಡಳಿ ತೆಗೆದುಕೊಳ್ಳಲಿದೆ. ನಮ್ಮ ಪಕ್ಷ ಎಲ್ಲರಿಗೂ ಯೋಗ್ಯತೆ ಹಾಗೂ ಪರಿಶ್ರಮದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಅವಕಾಶ ಕೊಡಲಿದೆ. ಆದರೆ ಉತ್ತರಾಧಿಕಾರಿ ಸಂಸ್ಕೃತಿಗೆ ಅವಕಾಶ ಇಲ್ಲ. ಹಿಂದೆಯೂ ಇರಲಿಲ್ಲ ಈಗಲೂ ಇಲ್ಲ,‌ ನಮ್ಮದು ಕೇಡರ್ ಬೇಸ್ಡ್ ಡಿಎನ್ ಎ ಎಂದರು.

ಸಚಿವ ಈಶ್ವರಪ್ಪ- ಸಿಎಂ ಯಡಿಯೂರಪ್ಪ ಇಬ್ಬರು ಒಂದೇ; ಸಚಿವ ಕೋಟ ಶ್ರೀನಿವಾಸ ಪೂಜಾರಿ

ನಾನು ಕರಪತ್ರ ಹಂಚಿದ್ದೇನೆ, ಈಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದೇನೆ. ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ. ಕೋರ್ ಕಮಿಟಿ ಪಕ್ಷದ ಸಮಿತಿಯೇ ಹೊರತು ಯಾವೊಬ್ಭ ನಾಯಕರ ಕುಟುಂಬದ ಸದಸ್ಯರ ಸಮಿತಿ ಅಲ್ಲ. ಸಂಸದೀಯ ಮಂಡಳಿಯೂ ಕೂಡ ಯಾವ ನಾಯಕರ ಕುಟುಂಬ ಸದಸ್ಯರ ಸಮಿತಿ ಅಲ್ಲ. ಅದು ಪಕ್ಷದ ಸಮಿತಿ. ನಮ್ಮ ಪಕ್ಷದ ಡಿಎನ್ಎ ಪ್ರಜಾಪ್ರಭುತ್ವ ಆಗಿದೆ ಎಂದರು.

ಯಡಿಯೂರಪ್ಪ ಈಶ್ವರಪ್ಪಗೆ ಏನೂ ಹೇಳಲು ಸಾಧ್ಯವಿಲ್ಲ:ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಪತ್ರದ ಬಗ್ಗೆ ಇಲ್ಲಿ ಚರ್ಚೆ ಮಾಡಲ್ಲ, ನನ್ನ ಗಮನಕ್ಕೆ ತಂದಿದ್ದರು.  ಸಿಎಂ,‌ ರಾಜ್ಯಾಧ್ಯಕ್ಷ ಅರುಣ್ ಸಿಂಗ್ ಜೊತೆ ಮಾತನಾಡಿ ಎಂದು ನಾನು ಹೇಳಿದ್ದೇನೆ. ಪತ್ರ ಇನ್ನೂ ನನ್ನ ಕೈ ಸೇರಿಲ್ಲ, ನಾನು ಊರಲ್ಲಿ ಇರಲಿಲ್ಲ. ಎಲ್ಲಿಗೆ ಪತ್ರ ಬಂದಿದೆಯೋ ಗೊತ್ತಿಲ್ಲ, ಇಲ್ಲಿಗಂತೂ ಬಂದಿಲ್ಲ, ಊರಿಗೆ ಹೋಗಿದೆಯಾ ಗೊತ್ತಿಲ್ಲ. ಈ ವಿಷಯವನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಯಡಿಯೂರಪ್ಪ ಈಶ್ವರಪ್ಪ ಪಕ್ಷದ ರಾಜ್ಯಾಧ್ಯಕ್ಷ ಆಗಿದ್ದ ವೇಳೆ ನಾನು ಬೂತ್ ಅಧ್ಯಕ್ಷನಾಗಿದ್ದೆ.  ಹಾಗಾಗಿ ನಾನು ಅವರಿಬ್ಬರಿಗೂ ಏನೂ ಹೇಳಲು ಸಾಧ್ಯವಿಲ್ಲ. ಆದರೆ ಎಲ್ಲಿ ಮಾತನಾಡಬೇಕೋ ಮಾತನಾಡುತ್ತೇನೆ ಎಂದರು.
Published by: Latha CG
First published: April 6, 2021, 9:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories