• Home
 • »
 • News
 • »
 • state
 • »
 • ನ್ಯಾಯಾಧೀಶರೇನು ಸರ್ವಜ್ಞರಲ್ಲ; ಸಿ.ಟಿ.ರವಿ

ನ್ಯಾಯಾಧೀಶರೇನು ಸರ್ವಜ್ಞರಲ್ಲ; ಸಿ.ಟಿ.ರವಿ

ಸಿ ಟಿ ರವಿ.

ಸಿ ಟಿ ರವಿ.

ಸುದ್ದಿಗೋಷ್ಠಿಯಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಸಿ.ಟಿ.ರವಿ, ನ್ಯಾಯಾಧೀಶರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನ್ಯಾಯಾಧೀಶರೇನು ಸರ್ವಜ್ಞರಲ್ಲ. ತಜ್ಞರ‌ ಸಮಿತಿ ನೀಡುವ ವರದಿಯನ್ನ ಆಧರಿಸಿಯೇ ಕೆಲಸ‌ ಮಾಡಲಾಗುತ್ತೆ ಎಂದ ಕೇಂದ್ರ ಹೇಳಿದೆ.  ಸುಪ್ರಿಂ ಕೋರ್ಟ್ ಕೂಡ ಇದನ್ನು ಒಪ್ಪಿದೆ ಎಂದರು.

ಮುಂದೆ ಓದಿ ...
 • Share this:

  ಬೆಂಗಳೂರು(ಮೇ 13): ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಾಕ್ಸಿನ್​ ಉತ್ಪಾದನೆ ಆಗದಿದ್ದರೆ ನಾವೇನು ನೇಣು ಹಾಕಿಕೊಳ್ಳಬೇಕಾ? ಎಂದು ಕೋರ್ಟ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಮಧ್ಯಪ್ರವೇಶಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನ್ಯಾಯಾಧೀಶರೇನು ಸರ್ವಜ್ಞರಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. 


  ಸುದ್ದಿಗೋಷ್ಠಿಯಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಸಿ.ಟಿ.ರವಿ, ನ್ಯಾಯಾಧೀಶರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನ್ಯಾಯಾಧೀಶರೇನು ಸರ್ವಜ್ಞರಲ್ಲ. ತಜ್ಞರ‌ ಸಮಿತಿ ನೀಡುವ ವರದಿಯನ್ನ ಆಧರಿಸಿಯೇ ಕೆಲಸ‌ ಮಾಡಲಾಗುತ್ತೆ ಎಂದ ಕೇಂದ್ರ ಹೇಳಿದೆ.  ಸುಪ್ರಿಂ ಕೋರ್ಟ್ ಕೂಡ ಇದನ್ನು ಒಪ್ಪಿದೆ ಎಂದರು.


  ಸಾವು ಸಾಂಕ್ರಾಮಿಕ ರೋಗಗಳನ್ನು ಮುಂದಿಟ್ಟುಕೊಂಡು ವಿಕೃತಾನಂದ ಪಡುತ್ತಿದೆ. ರೋಗದ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ. ವಿದೇಶಗಳ ಜನಸಂಖ್ಯೆ ಮತ್ತು ಮರಣ ಪ್ರಮಾಣ ಹಾಗೂ ಭಾರತದ ಜನಸಂಖ್ಯೆ ಮತ್ತು ಮರಣ ಪ್ರಮಾಣ ಎಲ್ಲವನ್ನು ಹೋಲಿಕೆ ಮಾಡಿ ನೋಡಲಿ. ಇಟಲಿಯಲ್ಲಿ ನರೇಂದ್ರ ಮೋದಿ ಪ್ರಧಾನಿಯಲ್ಲ. ಈಗ ಆಗುತ್ತಿರುವ ಸಾವು-ನೋವಿಗೆ ನಾವು  ಚೈನಾ ವೈರಸ್​ನ್ನು ದೂರಬೇಕೆ ಹೊರತು, ನರೇಂದ್ರ ಮೋದಿಯವರನ್ನಲ್ಲ ಎಂದು ಸಿ.ಟಿ.ರವಿ ಪ್ರಧಾನಿ ಪರ ಬ್ಯಾಟಿಂಗ್​ ಮಾಡಿದರು.


  ವ್ಯಾಕ್ಸಿನ್​ ಪ್ರೊಡಕ್ಷನ್​ ಆಗದಿದ್ರೆ ನಾವೇನು ನೇಣುಹಾಕಿಕೊಳ್ಳಬೇಕಾ?; ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅಸಮಾಧಾನ


  ಮುಂದುವರೆದ ಅವರು, ಬಾಧಿಸುತ್ತಿರುವ ವೈರಾಣು ಪ್ರಮಾಣ ಹೆಚ್ಚುತ್ತಿರುವ ಕಾರಣ ನಮ್ಮ ಸಿದ್ದತೆ ಸಾಕಾಗಿಲ್ಲ ಎನ್ನುವುದನ್ನು ನಾನೂ ಕೂಡ ಒಪ್ಪುತ್ತೇನೆ ಎಂದರು.


  ಇದೇ ವೇಳೆ ಮಾತನಾಡಿದ ಡಿ.ವಿ.ಸದಾನಂದ ಗೌಡ, ನಿನ್ನೆಯವರೆಗೆ ಕೇಂದ್ರದ ಪಿಎಂ‌ಕೇರ್ ಫಂಡ್ ನಿಂದ ರಾಜ್ಯ ಸರ್ಕಾರಕ್ಕೆ 303.63 ಕೋಟಿ ರೂ.ಬಂದಿದೆ. ಯಂತ್ರೋಪಕರಣಗಳ ಸರಬರಾಜು, ವ್ಯಾಕ್ಸಿನ್ ಎಲ್ಲವನ್ನೂ ಹೊರತು ಪಡಿಸಿ ನಗದು ಸಹಾಯ ಬಂದಿರೋದು 303.63 ಕೋಟಿ ರೂ. ಎಂದು ಮಾಹಿತಿ ನೀಡಿದರು.


  ರಸಗೊಬ್ಬರ ಬೆಲೆ ಏರಿಕೆ ಮಾಡಲ್ಲ; ಡಿವಿಎಸ್​


  ಇನ್ನು, ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದರು. ರಸಗೊಬ್ಬರದ ಬೆಲೆಯನ್ನು ಏರಿಕೆ ಮಾಡುವುದಿಲ್ಲ. ರಸಗೊಬ್ಬರ ಎಲ್ಲಾ ಸ್ಟಾಕ್ ಇತ್ತು.  ಅಂತರರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರದ ಬೆಲೆ ಹೆಚ್ಚಾಯಿತು ಅಂತ, ಇಲ್ಲಿ ಹೆಚ್ಚು ಮಾಡುವುದು ಬೇಡ ಅಂದೆ. ಕೆಲವರು ಒಪ್ಪಿಕೊಂಡ್ರು , ಕೆಲವರು ವಾಪಸ್ ಹೋದ್ರು. ಇದು ಅವರ ಬ್ಯುಸಿನೆಸ್. 100% ರೈತರಿಗೆ ಗೊಬ್ಬರ ಏರಿಕೆ ಆಗದ ಹಾಗೆ ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

  Published by:Latha CG
  First published: