• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ನಾನು ಬಕೆಟ್ ಹಿಡಿದು ರಾಜಕಾರಣಿ ಆದವನಲ್ಲ; ಜಮೀರ್​ಗೆ ಸಿಟಿ ರವಿ ಟಾಂಗ್​

Karnataka Politics: ನಾನು ಬಕೆಟ್ ಹಿಡಿದು ರಾಜಕಾರಣಿ ಆದವನಲ್ಲ; ಜಮೀರ್​ಗೆ ಸಿಟಿ ರವಿ ಟಾಂಗ್​

ಸಿ ಟಿ ರವಿ

ಸಿ ಟಿ ರವಿ

ಬಕೆಟ್ ಹಿಡಿದು ರಾಜಕಾರಣಿ ಆದವನಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೇ ಯಡಿಯೂರಪ್ಪ ಅವರ ಮನೆ ಗೇಟ್ ಕೀಪರ್ ಆಗುತ್ತೇನೆ ಎಂದಿದ್ದರಲ್ಲ. ಆ ಮಾತನ್ನು ಜಮೀರ್ ಉಳಿಸಿಕೊಳ್ಳಲಿ ಎಂದು ಜಮೀರ್ ಅಹ್ಮದ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು (ಜು.26) : ಬಕೆಟ್ ಹಿಡಿದು ರಾಜಕಾರಣಿ ಆದವನಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೇ ಯಡಿಯೂರಪ್ಪ (Yadiyurappa) ಅವರ ಮನೆ ಗೇಟ್ ಕೀಪರ್ ಆಗುತ್ತೇನೆ ಎಂದಿದ್ದರಲ್ಲ. ಆ ಮಾತನ್ನು ಜಮೀರ್ ಉಳಿಸಿಕೊಳ್ಳಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ (C.T Ravi), ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ (Zameer Ahmed Khan) ವಿರುದ್ಧ ಕಿಡಿಕಾರಿದರು. ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ನಿಯತ್ತು ನನ್ನ ಕ್ಷೇತ್ರದ ಜನರಿಗೆ ಗೊತ್ತು. ನಾಲ್ಕು ಬಾರೀ ಗೆಲ್ಲಿಸಿದ್ದಾರೆ. ಮಂತ್ರಿ (Minister) ಆಗಿದ್ದೇನೆ. ಪಕ್ಷದ ಕೆಲಸಕ್ಕಾಗಿ ಮಂತ್ರಿಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ರು.


ಸಿಎಂ ಕುರ್ಚಿ ಫೈಟ್ ಬಗ್ಗೆ ಸಿಟಿ ರವಿ ವ್ಯಂಗ್ಯ


ಕಾಂಗ್ರೆಸ್‍ನಲ್ಲಿ ಸಿಎಂ ಕುರ್ಚಿ ಫೈಟ್ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾವು ನಮ್ಮ ಸಾಧನೆ ಮತ್ತು ಸಿದ್ಧಾಂತ ಮುಂದಿಟ್ಟು ಮತ ಕೇಳುತ್ತೇವೆ. ಪಕ್ಷ ಅಧಿಕಾರಕ್ಕೆ ಬರಬೇಕಾದರೇ ನೀತಿ, ನೇತೃತ್ವ, ನಿಯತ್ತು ಈ ಆಧಾರದ ಮೇಲೆ ಜನರು ಮತ ಹಾಕುತ್ತಾರೆ. ನಮ್ಮಗೆ ನೀತಿ, ನೇತೃತ್ವ ನಿಯತ್ತು ಇದೆ. ಮತ್ತೇ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೇ ಉಳಿದವರು ಖಾಲಿ ಇಲ್ಲದ ಖುರ್ಚಿಗೆ ಕಿತ್ತಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.


ಅಧಿಕಾರ ಇದ್ದಾಗ ಉಳಿಸಿಕೊಳ್ಳಲಿಲ್ಲ


ಅಧಿಕಾರ ಇದ್ದಾಗ ಉಳಿಸಿಕೊಳ್ಳಲಿಲ್ಲ. ಈಗ ಟವಲ್ ಹಾಕಲು ಖುರ್ಚಿ ಖಾಲಿ ಇಲ್ಲ. ಟವ ಲ್‍ನಲ್ಲಿ ಇವರಿಗೆ ಅವರು ಅವರಿಗೆ ಇವರು ಗಾಳಿ ಹಾಕಿಕೊಳ್ಳಬಹುದಷ್ಟೇ. ಮುಖ್ಯಮಂತ್ರಿ ಎಂದು ಬೋರ್ಡ್, ಪ್ಲೆಕ್ಸ್ ಹಾಕಿಕೊಂಡ ತಕ್ಷಣ ಮುಖ್ಯಮಂತ್ರಿ ಆಗಲ್ಲ.


ಇದನ್ನೂ ಓದಿ: Congress Leaders: ಇದು ಬಿಜೆಪಿ ಭ್ರಷ್ಟೋತ್ಸವ, ಈ ಸರ್ಕಾರ ಅಭಿವೃದ್ಧಿ ಶೂನ್ಯ ಸರ್ಕಾರ


ಅವರಪ್ಪನ ಆಣೆಗೂ ಮುಖ್ಯಮಂತ್ರಿ ಆಗಲ್ಲ


ಸೋಶಿಯಲ್ ಮೀಡಿಯಾದಲ್ಲಿ ಹೇಳಿ, ಜನರ ಕೈನಲ್ಲಿ ಕೂಗಿಸುತ್ತಿದ್ದಂತೆ ಮುಖ್ಯಮಂತ್ರಿ ಆಗಲ್ಲ. ಕೊಟ್ಟಿದ್ದನ್ನೇ ಉಳಿಸಿಕೊಳ್ಳಲಿಲ್ಲ. ಸಿದ್ಧರಾಮಯ್ಯ ರೀತಿ ಹೇಳುವುದಾದರೇ ಅವರಪ್ಪನ ಆಣೆಗೂ ಮುಖ್ಯ ಮಂತ್ರಿ ಆಗಲ್ಲ ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದರು.


ಹಗಲುಗನಸು ಕಾಣಬೇಕಷ್ಟೇ


ಕಳೆದ 8-10 ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ. ಛತೀಸ್‍ಘಡದಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ. ಕರ್ನಾಟಕದಲ್ಲಿ ಹಗಲುಗನಸು ಕಾಣಬೇಕಷ್ಟೇ ಎಂದರು.


ಈಶ್ವರಪ್ಪಗೆ ಮಂತ್ರಿಸ್ಥಾನ, ಹೈಕಮಾಂಡ್​ ನಿರ್ಧಾರ


ಈಶ್ವರಪ್ಪಗೆ ಮಂತ್ರಿಸ್ಥಾನದ ವಿಚಾರಕ್ಕೆ ಪ್ರತಿಕ್ರಿಯಿಸಿ ಪಕ್ಷ ಕಟ್ಟಿ ಬೆಳೆಸಿದ ಹಲವರಲ್ಲಿ ಈಶ್ವರಪ್ಪ ರವರು ಪ್ರಮುಖರು. ಅವರ ಮೇಲೆ ಆಪಾದನೆ ಬಂದಾಗ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರು. ಮಂತ್ರಿಸ್ಥಾನದ ಸಂಬಂಧ ಮುಖ್ಯಮಂತ್ರಿಗಳು ಪರಿಶೀಲಿಸಬೇಕು ಎಂದರು.
ಜನ ಪಕ್ಷಕ್ಕೆ ಮತ ಹಾಕಬೇಕು. ಆ ಪಕ್ಷ ಗೆಲ್ಲಬೇಕು. ಆಮೇಲೆ ಆ ಪಕ್ಷ ತೀರ್ಮಾನ ಮಾಡಬೇಕು.


ಇದನ್ನೂ ಓದಿ: Pramoda Devi Wadiyar: ಬೇಬಿ ಬೆಟ್ಟ ವಿವಾದ, ಸರ್ಕಾರದ ವಿರುದ್ಧ 'ರಾಜಮಾತೆ' ಗರಂ; ಯಾಕಿಷ್ಟು ಹಿಂಸೆ ಕೊಡುತ್ತಿದ್ದೀರಾ?


ಕಾಂಗ್ರೆಸ್ ಕಳೆದುಕೊಂಡಿದ್ದೇ ಹೆಚ್ಚು


ಕಳೆದ 8-10 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ. ಪಂಚಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಅಲ್ಲಿ ಕಳೆದುಕೊಂಡರು. ನೂರಕ್ಕೆ ನೂರರಷ್ಟು ರಾಜಸ್ಥಾನ ಹಾಗೂ ಛತ್ತೀಸ್‍ಘಡದಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಗಲುಗನಸು ಕಾಣುತ್ತಿದೆ. ಸಿದ್ದರಾಮಯ್ಯನ ಸ್ಟೈಲಲ್ಲೇ ಹೇಳೋದಾದ್ರೆ ಅಪ್ಪನ ಆಣೆ ಸಿಎಂ ಆಗಲ್ಲ ಎಂದು ಹೇಳಬಹುದು ಎಂದು ವ್ಯಂಗ್ಯವಾಡಿದ್ದಾರೆ.

First published: