• Home
  • »
  • News
  • »
  • state
  • »
  • ಸಿದ್ದರಾಮಯ್ಯನವರದ್ದು ಜಿನ್ನಾವಾದವೇ ಹೊರತು, ಗಾಂಧಿವಾದ ಅಲ್ಲ; ಸಿ.ಟಿ.ರವಿ ವ್ಯಂಗ್ಯ

ಸಿದ್ದರಾಮಯ್ಯನವರದ್ದು ಜಿನ್ನಾವಾದವೇ ಹೊರತು, ಗಾಂಧಿವಾದ ಅಲ್ಲ; ಸಿ.ಟಿ.ರವಿ ವ್ಯಂಗ್ಯ

 ಸಿ.ಟಿ. ರವಿ

ಸಿ.ಟಿ. ರವಿ

ಸಿದ್ದರಾಮಯ್ಯ ಆರ್.ಎಸ್.ಎಸ್. ಮೂಲ ತಿಳಿಯಬೇಕಂದ್ರೆ ಇಲ್ಲಿಗೆ ಬರಬೇಕು. ಮೊದಲು ಆರ್.ಎಸ್.ಎಸ್.ಗೆ ಬರಲಿ. ಆಮೇಲೆ ಮೂಲ ತಿಳಿಯಲಿ ಎಂದರು. ಅಪ್ಪಟ ದೇಶಭಕ್ತನಿಗೆ ಮಾತ್ರ ಆರ್.ಎಸ್.ಎಸ್. ಮೂಲ ಗೊತ್ತಾಗೋದು. ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಆರ್.ಎಸ್.ಎಸ್.ಮೂಲ ಗೊತ್ತಾಗಲ್ಲ ಎಂದರು. ಅವರಿಗೆ ದಿನಾ ಒಂದೊಂದು ಕನಸು ಬೀಳುತ್ತೆ. ಬೆಳಗ್ಗೆ ಬಂದು ಅದನ್ನ ಹೇಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು(ಜ.18): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಜಿನ್ನಾ ವಾದವೇ ಹೊರತು ಗಾಂಧಿವಾದ ಹೇಗಾಗುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಸಿದ್ದರಾಮಯ್ಯ ಒಮ್ಮೆ ನಾನು ಹಿಂದು ಅಂತಾರೆ. ಮತ್ತೊಮ್ಮೆ ನನಗೂ ಹಿಂದೂಗೂ ಸಂಬಂಧವಿಲ್ಲ ಎನ್ನುತ್ತಾರೆ. ಒಮ್ಮೆ ನಂದು ಗಾಂಧಿ ಹಿಂದುತ್ವ ಅಂತಾರೆ. ಮಹಾತ್ಮ ಗಾಂಧಿ ದನದ ಮಾಂಸ ತಿನ್ನಿ ಎಂದು ಹೇಳಿದ್ರಾ? ಎಂದು ಸಿದ್ದುಗೆ ಪ್ರಶ್ನಿಸಿದ್ದಾರೆ.  ಗಾಂಧಿ ಗೋಹತ್ಯೆ ನಿಷೇಧ ಬಯಸಿದವರು. ಗೋಮಾಂಸ ತಿಂತೀನಿ ಎನ್ನುವ ಸಿದ್ದರಾಮಯ್ಯನವರದ್ದು ಗಾಂಧಿತತ್ವ ಹೇಗಾಗುತ್ತೆ ಎಂದು ಲೇವಡಿ ಮಾಡಿದ್ದಾರೆ.


ಇನ್ನು ಆರ್.ಎಸ್.ಎಸ್. ಮುಖಂಡರಿಂದ ಮಾಹಿತಿ ಬಂದಿದೆ, ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಮಾಜಿ ಸಿಎಂ ಸಿದ್ದು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಯಾವಾಗ ಆರ್.ಎಸ್.ಎಸ್.ಗೆ ಬಂದರೂ ಗೊತ್ತಿಲ್ಲ. ಆರ್.ಎಸ್.ಎಸ್.ಗೆ ಮುಖಂಡರೂ ಇಲ್ಲ. ಇರೋದು ಸ್ವಯಂ ಸೇವಕರು ಮಾತ್ರ. ಅವರಿಗೆ ಆರ್.ಎಸ್.ಎಸ್. ಅರ್ಥ ಆಗಲ್ಲ. ಇಲ್ಲಿರೋದು ಸ್ವಯಂ ಸೇವಕರು ಮಾತ್ರ. ಇಲ್ಲಿ ಮುಖಂಡರು ಇರಲ್ಲ.


ಮುಖಂಡರು ಇರೋದು ರಾಜಕೀಯ ಪಕ್ಷಗಳಿಗೆ ಎಂದರು. ಶಿಕ್ಷಕ್, ಮುಖ್ಯ ಶಿಕ್ಷಕ್, ಕಾರ್ಯವಾಹಕ್, ಸಹಕಾರ್ಯವಾಹಕ್, ಪ್ರಚಾರಕರು ಮಾತ್ರ ಇರೋದು ಸಿದ್ದುಗೆ ಅದೇ ಗೊತ್ತಿಲ್ಲ ಎಂದು ವ್ಯಂಗ್ಯದ ನಗು ಬೀರಿದ್ರು.


ಇನ್ನು ಸಿದ್ದರಾಮಯ್ಯ ಆರ್.ಎಸ್.ಎಸ್. ಮೂಲ ತಿಳಿಯಬೇಕಂದ್ರೆ ಇಲ್ಲಿಗೆ ಬರಬೇಕು. ಮೊದಲು ಆರ್.ಎಸ್.ಎಸ್.ಗೆ ಬರಲಿ. ಆಮೇಲೆ ಮೂಲ ತಿಳಿಯಲಿ ಎಂದರು. ಅಪ್ಪಟ ದೇಶಭಕ್ತನಿಗೆ ಮಾತ್ರ ಆರ್.ಎಸ್.ಎಸ್. ಮೂಲ ಗೊತ್ತಾಗೋದು. ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಆರ್.ಎಸ್.ಎಸ್.ಮೂಲ ಗೊತ್ತಾಗಲ್ಲ ಎಂದರು. ಅವರಿಗೆ ದಿನಾ ಒಂದೊಂದು ಕನಸು ಬೀಳುತ್ತೆ. ಬೆಳಗ್ಗೆ ಬಂದು ಅದನ್ನ ಹೇಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.


ಗೋ ಹತ್ಯೆ ಮಾಡಿದ್ರೆ 3-6 ವರ್ಷ ಜೈಲು ಶಿಕ್ಷೆ; 50 ಸಾವಿರದಿಂದ 5 ಲಕ್ಷದವರೆಗೆ ದಂಡ; ಸಚಿವ ಪ್ರಭು ಚೌಹಾಣ್


ನೈತಿಕತೆ ಇದ್ರೆ ಉದ್ಧವ್ ಠಾಕ್ರೆ ಅವ್ರಿಗೆ ಆನ್ಯಾಯ ಮಾಡಿದ ಕಾಂಗ್ರೆಸ್ ಹೆಗಲಿನಿಂದ ಕೆಳಗಿಳಿಯಲಿ


ಗಡಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬಹಳ ಹಿಂದಿನಿಂದ ಬಂದಿದೆ, ಉದ್ಧವ್ ಠಾಕ್ರೆಗೆ ನೈತಿಕತೆ ಇದ್ರೆ ಅವ್ರಿಗೆ ಆನ್ಯಾಯ ಮಾಡಿದ ಕಾಂಗ್ರೆಸ್ ಹೆಗಲಿನಿಂದ ಕೆಳಗಿಳಿಯಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉದ್ಧವ್ ಠಾಕ್ರೆ ವಿರುದ್ಧ ಕಿಡಿಕಾಡಿದ್ದಾರೆ. ಗಡಿ ಬಗ್ಗೆ ಉದ್ಧವ್ ಠಾಕ್ರೆ ಪ್ರಶ್ನೆ ಮಾಡಬೇಕು ಅಂದ್ರೆ ಅವರು ಬೆಂಬಲಿತದಿಂದ ಅಧಿಕಾರ ನಡೆಸುತ್ತಿದ್ದರಲ್ಲ ಆ ಪಕ್ಷದ ವಿರುದ್ದ ಪ್ರಶ್ನೆ ಮಾಡಬೇಕು. ಕಾಂಗ್ರೆಸ್ ಹೆಗಲ ಮೇಲೆ ಕೂತು ಅವರು ಹೇಗೆ ಮಾತನಾಡ್ತಾರೆ ಎಂದು ಪ್ರಶ್ನೆ ಮಾಡಿದ್ರು.


ಇನ್ನು ಕನ್ನಡ ಮಾತನಾಡುವವರು ಮಹಾರಾಷ್ಟ್ರ ಗಡಿಯೊಳಗೆ ಇದ್ದಾರೆ, ಮಠಾಠಿ ಮಾತನಾಡುವವರು ಕರ್ನಾಟಕ ದಲ್ಲಿದ್ದಾರೆ, ಇದಕ್ಕೆ ಸಂಬಂಧಿಸಿದ್ದಂತೆ ಹಲವು ಅಯೋಗಗಳು ಬಂದಿದೆ, ಭಾಷಾವಾರು ಪ್ರಾಂತ್ಯವಾಗುವಾಗ ಕ್ಷೇತ್ರ ವಿಂಗಡಣೆಯಾಗಿದೆ. ಅವರ ಸಾಂಪ್ರದಾಯಿಕ ಅಸ್ಮಿತೆಯನ್ನು ಉಳಿಸುವ ಕೆಲಸ ಭಾರತೀಯರು ಮಾಡಿಕೊಂಡು ಬಂದಿದ್ದಾರೆ. ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ತರುವ ಕೆಲಸ ಎಂದು ನಡೆದಿಲ್ಲ ಎಂದರು.


ಭಾಷಾವಾರು ಪ್ರಾಂತ್ಯ ರಚನೆಯಾಗಬೇಕಾದ್ರೆ ಬಿಜೆಪಿ ಅಸ್ತಿತ್ವದಲ್ಲಿರಲಿಲ್ಲ, ಅಂದು ದೇಶಾದ್ಯಂತ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಉದ್ಧವ್ ಠಾಕ್ರೆ ಪ್ರಶ್ನೆ ಮಾಡಬೇಕಾದರೆ, ಅವ್ರು ಬೆಂಬಲಿತದಿಂದ ಅಧಿಕಾರ ನಡೆಸುತ್ತಿದ್ದರಲ್ಲ ಆ ಪಕ್ಷದ ವಿರುದ್ದ ಪ್ರಶ್ನೆ ಮಾಡಬೇಕು ಎಂದು ಕಿಡಿಕಾರಿದರು.


ಲಸಿಕೆ ಚೀನಾದಿಂದ ಬಂದಿದ್ದರೆ ರೆಡ್ ರೆಡ್ ಕಾರ್ಪೆಟ್‍ನಲ್ಲಿ ಸ್ವಾಗತ ಕೋರುತ್ತಿದ್ದರು: ಕಾಂಗ್ರೆಸ್ ವಿರುದ್ಧ ರವಿ ವ್ಯಂಗ್ಯ


ಲಕ್ಷಾಂತರ ಜನ ಲಸಿಕೆ ತೆಗೆದುಕೊಂಡರೂ ಏನೂ ಆಗಿಲ್ಲ ಎಂದು ಸಂಕಟ ಪಡುತ್ತಿದ್ದಾರೆ. ಅದೇ ಈ ಲಸಿಕೆ ಚೀನಾದಿಂದ ಬಂದಿದ್ದರೆ ರೆಡ್ ರೆಡ್ ಕಾರ್ಪೇಟ್‍ನಲ್ಲಿ ಸ್ವಾಗತ ಕೋರುತ್ತಿದ್ದರು. ಇಟಲಿಯಿಂದ ಬಂದಿದ್ದರೆ ತಲೆಮೇಲೆ ಹೊತ್ತಿಕೊಂಡು ಮೆರೆಯುತ್ತಿದ್ದರು. ಇಟಲಿ ಲೀಡರ್ರನ್ನೆ ತಲೆ ಮೇಲೆ ಹೊತ್ತಿಕೊಂಡಿರುವವರಿಗೆ ಇಟಲಿಯಿಂದ ಲಸಿಕೆ ಬಂದಿದ್ದರೆ ಆ ಲೀಡರ್ರನ್ನೆ ತಲೆ ಮೇಲೆ ಹೊತ್ತಿಕೊಂಡತೆ ಆಗುತ್ತಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.ನಮ್ಮ ದೇಶದಲ್ಲಿ ಒಳ್ಳೆಯದು ಏನೂ ಕಂಡರೂ ಸಹಿಸಿಕೊಳ್ಳದ ಮನಸ್ಥಿತಿಯ ಕೆಲ ಜನರಿದ್ದಾರೆ. ಇದು ದೇಶವೇ ಹೆಮ್ಮೆ ಪಡುವಂತಹ ವಿಷಯ. ಎರಡು ಸಂಸ್ಥೆಗಳು ನಮ್ಮ ದೇಶದಲ್ಲೇ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ತಯಾರು ಮಾಡಿವೆ. ಒಂದರ ಬೆಲೆ 200. ಮತ್ತೊಂದರದ್ದು 270 ರೂಪಾಯಿ. ವಿದೇಶದಲ್ಲಿ ತಯಾರಾಗಿರುವ ಲಸಿಕೆ ಇಷ್ಟು ಪರಿಣಾಮಕಾರಿಯೂ ಅಲ್ಲ. ಅದರ ಬೆಲೆ 2500-3000.  ನಾರ್ವೆ ದೇಶದಲ್ಲಿ 23 ಜನ ಫೈಜರ್ ಲಸಿಕೆ ತೆಗೆದುಕೊಂಡು ಸತ್ತರು. ನಮ್ಮ ದೇಶದಲ್ಲಿ ಆಗಿದ್ರೆ ಹೇಗೆ ಬಾಯಿ ಬಡಿದುಕೊಳ್ಳುತ್ತಿದ್ರು ಅಂದರೆ, ಇವರ ಮನೆಯಲ್ಲೇ ಯಾರೋ ಹೋಗಿದ್ದಾರೆಂದು ಬಾಯಿ ಬಡಿದುಕೊಳ್ಳುತ್ತಿದ್ದರು. ಆ ಮನಸ್ಥಿತಿ ಇರೋರ್ನ ಇಟ್ಟುಕೊಂಡು ಹೇಗೆ ದೇಶ ಕಟ್ಟೋದು ಹೇಳಿ. ಏನಾದ್ರು ಮಾಡಿ ಕೊಂಕು ಹುಡುಕೋಣ, ತಪ್ಪು ಹುಡುಕೋಣ ಅನ್ನೋ ಮನಸ್ಥಿತಿ ಇರೋರನ್ನ ಇಟ್ಟುಕೊಂಡು ದೇಶ ಹೇಗೆ ಕಟ್ಟೋಣ ಎಂದರು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.

Published by:Latha CG
First published: