ನಾಳೆ ಸಂಜೆ ವೇಳೆಗೆ ಮೈತ್ರಿ ಸರ್ಕಾರ ಬೀಳುತ್ತದೆ; ಭವಿಷ್ಯ ನುಡಿದ ಉಮೇಶ್​ ಜಾಧವ್​

ನಾಳೆ ಸಮ್ಮಿಶ್ರ ಸರ್ಕಾರ ಇರಲ್ಲ ಎಂದು ಭವಿಷ್ಯ ನುಡಿದ ಅವರು, ಸೋಮವಾರ ಸಾಯಂಕಾಲ ಸರ್ಕಾರ ಬೀಳುತ್ತದೆ ಎಂದು ಹೇಳಿದರು.

Latha CG | news18
Updated:July 21, 2019, 2:27 PM IST
ನಾಳೆ ಸಂಜೆ ವೇಳೆಗೆ ಮೈತ್ರಿ ಸರ್ಕಾರ ಬೀಳುತ್ತದೆ; ಭವಿಷ್ಯ ನುಡಿದ ಉಮೇಶ್​ ಜಾಧವ್​
ಉಮೇಶ್​ ಜಾಧವ್​
  • News18
  • Last Updated: July 21, 2019, 2:27 PM IST
  • Share this:
 ಬೆಂಗಳೂರು,(ಜು.21): ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಬಂದು ನಿಂತಿದೆ. ಸೋಮವಾರ ಸಾಯಂಕಾಲ ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಬಿಜೆಪಿ ಸಂಸದ ಉಮೇಶ್​ ಜಾಧವ್​ ಭವಿಷ್ಯ ನುಡಿದಿದ್ದಾರೆ.

ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕು. ವಿಶ್ವಾಸಮತ ಸಾಬೀತು ಮಾಡಬೇಕು. ಈಗಾಗಲೇ ಮೂವರು ಸಚಿವರು ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದಾರೆ. ಆದಷ್ಟು ಬೇಗ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಿ ತಮ್ಮ ನಿರ್ಧಾರ ತಿಳಿಸಬೇಕು ಎಂದು ಆಗ್ರಹಿಸಿದರು.

ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಸ್ಪೀಕರ್ ರಮೇಶ್​ ಕುಮಾರ್​ ಹೇಳಿದ್ದಾರೆ. ಸ್ಪೀಕರ್ ಯಾವ ರೀತಿ ತೀರ್ಪು  ಕೊಡುತ್ತಾರೆ ಎಂದು ಗೊತ್ತಿಲ್ಲ. ಆದರೆ ಸ್ಪೀಕರ್ ಮೇಲೆ ನನಗೆ ನಂಬಿಕೆ ಇದೆ. ಸ್ಪೀಕರ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಶ್ವಾಸ ಇದೆ. ನಾನು ಕೂಡ 50 ಕೋಟಿ ತೆಗೆದುಕೊಂಡಿದ್ದೆ ಎಂದು ಸ್ಪೀಕರ್ ಹೇಳಿದ್ದರು. ಇದು ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದರು.

ಬಹುಮತ ಸಾಬೀತು ಮಾಡದಿದ್ದರೆ ಸಂವಿಧಾನಾತ್ಮಕವಾಗಿ ಹೋರಾಟ ಮಾಡುತ್ತೇವೆ; ಕೇಂದ್ರ ಸಚಿವ ಸದಾನಂದಗೌಡ

ನಾಳೆ ಸಮ್ಮಿಶ್ರ ಸರ್ಕಾರ ಇರಲ್ಲ ಎಂದು ಭವಿಷ್ಯ ನುಡಿದ ಅವರು, ಸೋಮವಾರ ಸಾಯಂಕಾಲ ಸರ್ಕಾರ ಬೀಳುತ್ತದೆ ಎಂದು ಹೇಳಿದರು.

ಅತೃಪ್ತ ಶಾಸಕರ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಾಧವ್​, ನಾನು ಅಪೃಪ್ತರನ್ನು ಭೇಟಿ ಮಾಡಲು ಹೋಗಿಲ್ಲ. ನನ್ನ ಕಾರ್ಯಕರ್ತನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದ. ನಾನು ಅಲ್ಲಿಗೆ ಭೇಟಿ ಮಾಲು ಹೋಗಿದ್ದೆ. ಆ ಸಂದರ್ಭದಲ್ಲಿ ಅತೃಪ್ತ ಶಾಸಕರನ್ನು ಭೇಟಿ ಮಾಡಿದ್ದೆ. ನಿಮಗೆ ನ್ಯಾಯ ಸಿಗುತ್ತೆ, ಯಾವುದೇ ಕಾರಣಕ್ಕೂ ಅನ್ಯಾಯ ಆಗಲ್ಲ ಎಂದು ಹೇಳಿದ್ದೇನೆ ಎಂದರು.

First published:July 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading