ಪ್ರಿಯಾಂಕ್​ ಖರ್ಗೆ ಅವರದ್ದು ಮೊಸರಲ್ಲಿ ಕಲ್ಲು ಹುಡುಕುವ ಪ್ರವೃತ್ತಿ: ಸಂಸದ ಉಮೇಶ್​ ಜಾಧವ್​​​ ಕಿಡಿ

ಸಚಿವ ಸ್ಥಾನ ಸಿಗಲಿಲ್ಲವೆಂದು ಉಮೇಶ್​ ಜಾಧವ್ ಕಾಂಗ್ರೆಸ್ ತೊರೆದಿದ್ದರು. ಆದರೆ ಈಗ ಈ ಭಾಗಕ್ಕೆ ಒಂದೂ ಸಚಿವ ಸ್ಥಾನ ನೀಡಿದಿದ್ದರೂ ಸುಮ್ಮನೆ ಕುಳಿತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಜಾಧವ್​ ಮೇಲೆ ತೀವ್ರ ಆರೋಪ ಮಾಡಿದ್ದರು.

Latha CG | news18-kannada
Updated:September 15, 2019, 11:28 AM IST
ಪ್ರಿಯಾಂಕ್​ ಖರ್ಗೆ ಅವರದ್ದು ಮೊಸರಲ್ಲಿ ಕಲ್ಲು ಹುಡುಕುವ ಪ್ರವೃತ್ತಿ: ಸಂಸದ ಉಮೇಶ್​ ಜಾಧವ್​​​ ಕಿಡಿ
ಪ್ರಿಯಾಂಕ್​ ಖರ್ಗೆ-ಉಮೇಶ್​ ಜಾಧವ್​​
Latha CG | news18-kannada
Updated: September 15, 2019, 11:28 AM IST
ಕಲಬುರ್ಗಿ(ಸೆ.15): ಪ್ರಿಯಾಂಕ್ ಖರ್ಗೆ ಕೆದಕುವ ಸ್ವಭಾವದವರು. ಅವರದ್ದು ಮೊಸರಲ್ಲಿ ಕಲ್ಲು ಹುಡುಕುವ ಪ್ರವೃತ್ತಿ ಎಂದು ಬಿಜೆಪಿ ಸಂಸದ ಉಮೇಶ್​ ಜಾಧವ್​ ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕ ಪ್ರಿಯಾಂಕ್​ ಖರ್ಗೆ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ಪ್ರಿಯಾಂಕ್​ ಖರ್ಗೆ ಬಿಜೆಪಿ ಸರ್ಕಾರದ ಅಭಿವೃದ್ಧಿ ಸಹಿಸಲ್ಲ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಸಚಿವ ಸ್ಥಾನ ಕೊಡುತ್ತಾರೆ. ಇರಲಾರದ ವಿಷಯವನ್ನು ಕೆದಕಿ ಟೀಕೆ ಮಾಡುವ ಸ್ವಭಾವ ಪ್ರಿಯಾಂಕ್​ ಖರ್ಗೆ ಅವರದ್ದು ಎಂದು ಜರಿದರು.

ಮಂಗಳೂರಿಗರಿಗೆ ಸಿಹಿಸುದ್ದಿ: ಇಂದಿನಿಂದ ಚಾರ್ಮಾಡಿ ಘಾಟ್​ನಲ್ಲಿ ಲಘು ವಾಹನ ಸಂಚಾರ ಆರಂಭ

ಕಲಬುರ್ಗಿ ಭಾಗಕ್ಕೆ ಸಚಿವ ಸ್ಥಾನ ನೀಡಿಲ್ಲ, ಅಭಿವೃದ್ಧಿ ನಡೆದಿಲ್ಲ ಅಂತ ಪ್ರಿಯಾಂಕ್​ ಖರ್ಗೆ ಆರೋಪ ಮಾಡುತ್ತಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಿನಿಂದಿಲೂ ಹಿಂದುಳಿದ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. ಆದರೆ ಪ್ರಿಯಾಂಕ್ ಖರ್ಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಂಸದ ಉಮೇಶ್ ಜಾಧವ್ ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸ್ಥಾನ ಸಿಗಲಿಲ್ಲವೆಂದು ಉಮೇಶ್​ ಜಾಧವ್ ಕಾಂಗ್ರೆಸ್ ತೊರೆದಿದ್ದರು. ಆದರೆ ಈಗ ಈ ಭಾಗಕ್ಕೆ ಒಂದೂ ಸಚಿವ ಸ್ಥಾನ ನೀಡಿದಿದ್ದರೂ ಸುಮ್ಮನೆ ಕುಳಿತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಜಾಧವ್​ ಮೇಲೆ ತೀವ್ರ ಆರೋಪ ಮಾಡಿದ್ದರು. ಅವರ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಉಮೇಶ್​ ಜಾಧವ್​ ಪ್ರಿಯಾಂಕ್​ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.

First published:September 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...