ವಿಶ್ವನಾಥ್ ಸೋತರೆ ಪ್ರಪಂಚ ಮುಳುಗೋಗುತ್ತಾ?; ಸಂಸದ ಶ್ರೀನಿವಾಸ್​ ಪ್ರಸಾದ್​​

ಸಿದ್ದರಾಮಯ್ಯ ಎಷ್ಟು ಸಲ ತೊಡೆ ತಟ್ಟಿ ಬಿದ್ದಿಲ್ಲ. ಫಲಿತಾಂಶ ಬಳಿಕ ಸಿದ್ದರಾಮಯ್ಯ ಕ್ಲೀನ್​ ಸ್ವೀಪ್​ ಆಗಲಿದ್ದಾರೆ. ಸೋಲುವವರ ಬಗ್ಗೆ ಈಗ  ಮಾತಾಡೋದು ಬೇಡ ಎಂದರು.

ಸಂಸದ ವಿ ಶ್ರಿನಿವಾಸ್​​ ಪ್ರಸಾದ್

ಸಂಸದ ವಿ ಶ್ರಿನಿವಾಸ್​​ ಪ್ರಸಾದ್

  • Share this:
 ಮೈಸೂರು(ಡಿ.08):ಡಿಸೆಂಬರ್​ 5ರಂದು  15 ಕ್ಷೇತ್ರಗಳ ಉಪಚುನಾವಣೆ ಮುಗಿದಿದೆ. ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆದಿದ್ದಾರೆ. ಇನ್ನು, ನಾಳೆ ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ. ಮತಎಣಿಕೆ ಬಳಿಕ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ಮತದಾರ ಕೈ ಹಿಡಿದಿದ್ದಾನೆ ಎಂಬುದು ನಾಳೆ ಬಹಿರಂಗವಾಗಲಿದೆ. ಗೆಲುವಿಗಾಗಿ ಅಭ್ಯರ್ಥಿಗಳು ಟೆಂಪಲ್​ ರನ್​ ಕೂಡ ನಡೆಸಿದ್ದಾರೆ. ಉಪಚುನಾವಣೆ ಫಲಿತಾಂಶಕ್ಕೂ ಮುನ್ನವೇ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್​ ಸೋಲಿನ ಬಗ್ಗೆ ಸಂಸದ ಶ್ರೀನಿವಾಸ್​ ಪ್ರಸಾದ್​ ಭವಿಷ್ಯ ನುಡಿದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಹುಣಸೂರಿನಲ್ಲಿ ಹೆಚ್.ವಿಶ್ವನಾಥ್​ ಸೋತರೆ ಪ್ರಪಂಚ ಮುಳುಗೋಗುತ್ತಾ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಹುಣಸೂರಿನಲ್ಲಿ ವಿಶ್ವನಾಥ್​ ಸೋತರೂ ಬಿಜೆಪಿ ಸರ್ಕಾರಕ್ಕೆ ಯಾವ ಪರಿಣಾಮವೂ ಬೀರಲ್ಲ ಎಂದು ಹೇಳಿದ್ದಾರೆ.

ಮದುವೆಗೆ ತಡವಾಗಿ ಬಂದ ವರನಿಗೆ ಕಾದಿತ್ತು ಶಾಕ್​​..! ವಧುವಿನ ಕೊರಳಲ್ಲಿ ತಾಳಿ ನೋಡಿ ಕಂಗಾಲು

ಸಿದ್ದರಾಮಯ್ಯ ಎಷ್ಟು ಸಲ ತೊಡೆ ತಟ್ಟಿ ಬಿದ್ದಿಲ್ಲ. ಫಲಿತಾಂಶ ಬಳಿಕ ಸಿದ್ದರಾಮಯ್ಯ ಕ್ಲೀನ್​ ಸ್ವೀಪ್​ ಆಗಲಿದ್ದಾರೆ. ಸೋಲುವವರ ಬಗ್ಗೆ ಈಗ  ಮಾತಾಡೋದು ಬೇಡ ಎಂದರು.

ಗೆದ್ದವರೆಲ್ಲರಿಗೂ ಸಿಎಂ ಯಡಿಯೂರಪ್ಪ ಮಂತ್ರಿಭಾಗ್ಯ ಎಂದಿದ್ದಾರೆ. ಬಿಜೆಪಿ ಅನರ್ಹರಿಗೆ ಕೊಟ್ಟ ಭರವಸೆ ಈಡೇರಿಸುತ್ತೆ. ಬಿಜೆಪಿ ಸರ್ಕಾರ ಸ್ಥಿರವಾಗಿದೆ. ಹೆಚ್ಚು ಸೀಟುಗಳನ್ನು ಗೆದ್ದು ಮತ್ತಷ್ಟು ಸ್ಥಿರವಾಗಿರುತ್ತದೆ.  ನಾಳಿನ ಫಲಿತಾಂಶಕ್ಕೆ ಎಲ್ಲರೂ ಕಾಯುತ್ತಿದ್ದಾರೆ ಎಂದು ಹೇಳಿದ್ದರು.

ವಿಶ್ವನಾಥ್​ ಬಿಜೆಪಿಗೆ ಬರಲು ಸಂಸದ ಶ್ರೀನಿವಾಸ್ ಪ್ರಸಾದ್​​ ಪ್ರಮುಖ ಕಾರಣರಾಗಿದ್ದರು. ಇದೀಗ ಉಪಚುನಾವಣೆ ಫಲಿತಾಂಶಕ್ಕೂ ಮುನ್ನ ವಿಶ್ವನಾಥ್​​​ ಸೋಲಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹುಣಸೂರು ಉಪಚುನಾವಣೆಯಲ್ಲಿ ವಿಶ್ವನಾಥ್​​ ಸೋತರೂ ಏನು ಪರಿಣಾಮ ಬೀರಲ್ಲ ಎಂಬುದಾಗಿ ಶ್ರೀನಿವಾಸ್​ ಪ್ರಸಾದ್​ ಹೇಳಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್​​ಗೆ ನನ್ನ ಕಂಡರೆ ಭಯ; ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ


First published: